ಪುತ್ತೂರು: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯ ಏರುಮುಖ ಮುಂದುವರಿದಿದ್ದು ಐನೂರರ ಗಡಿಗೆ ಇನ್ನೆರೆಡೆ ಗೇಣು ಬಾಕಿ ಇದೆ..!
ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ ಏರಿಕೆಯ ನಾಗಲೋಟ ಮುಂದುವರಿಸಿದೆ. ಆದರೂ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅಡಿಕೆ ಪೂರೈಕೆ ಕೊರತೆ ಉಂಟಾಗಿದೆ.
ಹೊಸ ಅಡಿಕೆ ಎರಡು ದಿನಕ್ಕೊಮ್ಮೆ ಕೆ.ಜಿ.ಗೆ 5 ರೂ.ನಂತೆ ಏರಿಕೆ ಕಾಣುತ್ತಿದ್ದು ಬೆಳೆಗಾರ ಮಾತ್ರ ಐನೂರುನತ್ತ ಚಿತ್ತ ನೆಟ್ಟಿದ್ದಾನೆ.
ಆ.18 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ 465 ರೂ. ಧಾರಣೆ ಇದ್ದರೆ, ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 480 ರೂ. ಇತ್ತು. ಅಂದರೆ ಕೆ.ಜಿ.ಯೊಂದಕ್ಕೆ ಕ್ಯಾಂಪ್ಕೋಗಿಂತ 15 ರೂ.ನಷ್ಟು ಹೆಚ್ಚು ಧಾರಣೆ ಇತ್ತು.
ಹಳೆ ಅಡಿಕೆಗೆ ಕ್ಯಾಂಪ್ಕೋದಲ್ಲಿ ಕೆ.ಜಿ.ಗೆ 560 ರೂ., ಹೊರ ಮಾರುಕಟ್ಟೆಯಲ್ಲಿ 575 ರೂ. ಇತ್ತು. ಇಲ್ಲೂ ಕೂಡ ಕೆ.ಜಿ.ಅಡಿಕೆಯಲ್ಲಿ 15 ರೂ.ವ್ಯತ್ಯಾಸ ಇದೆ.
ಈಗಿನ ಧಾರಣೆ ಏರಿಕೆಯ ಟ್ರೆಂಡ್ ಗಮನಿಸಿದರೆ ಆಗಸ್ಟ್ ಅಂತ್ಯದೊಳಗೆ ಹೊಸ ಅಡಿಕೆ ಧಾರಣೆಯಂತೂ 500 ಗಡಿ ತಲುಪುವುದು ನಿಶ್ಚಿತ.