Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಡಬಲ್ ಚೋಲು 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.
ರಬ್ಬರ್ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, 126 ರೂ. ಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಯಾಗುತ್ತಿದೆ. ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿರುವ ರಬ್ಬರ್‌ನ ಬೆಲೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ಈ ವಾರ ಮತ್ತಷ್ಟು ಧಾರಣೆ ಇಳಿಕೆಯಾಗಿದೆ. ಆರ್‌ಎಸ್‌ಎಸ್4 ದರ್ಜೆ 126 ರೂ., ಆರ್‌ಎಸ್‌ಎಸ್5 ದರ್ಜೆ 122ರೂ.ನಲ್ಲಿ ಖರೀದಿ ನಡೆಸಿವೆ. ಕೊಕ್ಕೋ ಯಥಾಸ್ಥಿತಿ
ಕಳೆದ ಕೆಲ ಸಮಯಗಳಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರ 45-48 ರೂ. ಗೆ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ.
Related Articles
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ.
Advertisement
ತೆಂಗು ಧಾರಣೆ ಏರಿಕೆಕಳೆದ ವಾರ 28 ರೂ. ಮತ್ತು 29 ರೂ.ಗೆ ಇಳಿಕೆ ಕಂಡಿದ್ದ ತೆಂಗಿನ ಬೆಲೆಯಲ್ಲಿ ಈ ವಾರ ಮತ್ತೆ ಏರಿಕೆಯಾಗಿದೆ. ಹೊಸ ತೆಂಗಿನ ಕಾಯಿ 31 ಮತ್ತು 32 ರೂ. ತನಕ ಖರೀದಿಯಾಗಿದೆ. - ರಾಜೇಶ್ ಪಟ್ಟೆ