Advertisement
ರಬ್ಬರ್ ಸ್ಥಿರರಬ್ಬರ್ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಕೆಲವು ವಾರಗಳಿಂದ 137 ರೂ.ಗೆ ಇಳಿಕೆ ಕಂಡಿತ್ತು. ಈ ವಾರವೂ ಅದೇ ಧಾರಣೆ ಮುಂದುವರಿದಿದೆ. ಆರ್‌ಎಸ್‌ಎಸ್4 ದರ್ಜೆ 137.5 ರೂ., ಆರ್‌ಎಸ್‌ಎಸ್5 ದರ್ಜೆ 133 ರೂ., ಲಾಟ್ 122.5 ರೂ.ನಲ್ಲಿ ಖರೀದಿ ನಡೆಸಿದೆ. ಸಾðಪ್ 1 ದರ್ಜೆ 84 ರೂ., ಸ್ಕಾÅಪ್ 2 ದರ್ಜೆ 76 ರೂ.ನಲ್ಲಿ ಖರೀದಿ ನಡೆಸಿವೆ.
ತೆಂಗಿನ ಬೆಲೆ ಕೆಲವು ದಿನಗಳ ಹಿಂದೆ ಏರಿಕೆ ಕಂಡಿತ್ತು. ಹೊಸ ತೆಂಗಿನ ಕಾಯಿ 31 ರೂ.ಗೆ, ಹಳೆ ತೆಂಗಿನಕಾಯಿ 32 ರೂ. ತನಕ ಖರೀದಿಯಾಗಿತ್ತು. ಆದರೆ ಕಳೆದ ವಾರ 28 ರೂ. ಮತ್ತು 29 ರೂ.ಗೆ ಇಳಿಕೆ ಕಂಡಿತ್ತು. ಈ ವಾರವೂ ಅದೇ ಧಾರಣೆ ಮುಂದುವರೆದಿದೆ.ಕೊಕ್ಕೋ ಈ ವಾರವೂ 45-48 ರೂ. ಗೆ ಖರೀದಿಯಾಗಿದೆ. ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು.
Related Articles
Advertisement