Advertisement
ಧಾರಣೆಯು ಕೆ.ಜಿ.ಗೆ 350 ರೂ. ಗಡಿ ತಲುಪುವ ನಿರೀಕ್ಷೆಯಲ್ಲಿ ಅಡಿಕೆ ಕೃಷಿಕರಿದ್ದು, ಉತ್ಪನ್ನವನ್ನು ಮಾರುಕಟ್ಟೆಗೆ ಇಳಿಸದಿರುವುದೇ ಇದಕ್ಕೆ ಕಾರಣ!
ಕೊಳೆರೋಗ, ವಾತಾವರಣದ ಪ್ರತಿಕೂಲ ಪರಿಣಾಮದಿಂದ ದಕ್ಷಿಣ ಭಾರತದಲ್ಲಿ ಅಡಿಕೆ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಇದರಿಂದ ಉತ್ತರ ಭಾರತದ ದಾಸ್ತಾನು ಕೇಂದ್ರಗಳಲ್ಲಿ ಅಡಿಕೆ ಸಂಗ್ರಹ ಕಡಿಮೆ ಆಗಿ ಬೇಡಿಕೆ ಹೆಚ್ಚಿರುವುದು ಕೂಡ ಧಾರಣೆ ಜಿಗಿತಕ್ಕೆ ಕಾರಣ. ಅದರ ಜತೆಗೆ ಆಮದಿಗೆ ನಿಷೇಧ ಮತ್ತು ಲಾಕ್ ಡೌನ್ ಪರಿಣಾಮ ಉಂಟಾದ ಬದಲಾವಣೆ ಕೂಡ ಧಾರಣೆ ಏರಿಕೆಯಲ್ಲಿ ಪಾತ್ರ ವಹಿಸಿದೆ. ಬೆಳೆಗಾರರ ತಂತ್ರ!
ಜೂನ್ ಶಾಲಾರಂಭದ ಸಮಯವಾಗಿದ್ದು, ಶಾಲಾ ಶುಲ್ಕ ಮತ್ತಿತರ ಖರ್ಚುಗಳಿಗಾಗಿ ಈ ಹಿಂದಿನ ವರ್ಷಗಳಲ್ಲಿ ಬೆಳೆಗಾರರು ಅಡಿಕೆ ಮಾರಾಟ ಮಾಡುತ್ತಿದ್ದರು. ಈ ಬಾರಿ ಶಾಲಾರಂಭ ಮುಂದೂಡಲಾಗಿದ್ದು, ಅದಕ್ಕಾಗಿ ಸದ್ಯ ಹಣಕಾಸಿನ ಅಗತ್ಯ ಇಲ್ಲ. ಶುಭ ಸಮಾರಂಭಗಳು ಸರಳವಾಗಿವೆ. ಹೀಗಾಗಿ ಹೆಚ್ಚು ಖರ್ಚುಗಳಿಲ್ಲ. ಧಾರಣೆ ಏರಿಕೆ ಆಧರಿಸಿಯೇ ಅಡಿಕೆ ಮಾರಲು ಬೆಳೆಗಾರರು ನಿರ್ಧರಿಸಿರುವ ಕಾರಣ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಪೂರೈಕೆ ಇಲ್ಲ ಎನ್ನುತ್ತಾರೆ ಬೆಳೆಗಾರ ಮಹೇಶ್ ಪುತ್ತೂರು.
Related Articles
ಜೂನ್ ತಿಂಗಳಲ್ಲಿ 300 ರೂ. ಗಡಿ ದಾಟಿದ್ದು ಇದೇ ಮೊದಲು. ಹಾಗಾಗಿ ಅಡಿಕೆ ಕೊರತೆ ಕಾರಣ ಈ ಬಾರಿ ಧಾರಣೆ 350 ರೂ. ತನಕ ಏರುವ ನಿರೀಕ್ಷೆಯಿದೆ. ಇದೇ ಕಾರಣದಿಂದ ಧಾರಣೆ ಏರಿದ ಮೇಲೆ ಮಾರುವ ಯೋಚನೆ ಮಾಡಿದ್ದು, ಹೀಗಾಗಿ ಮಾರುಕಟ್ಟೆಗೆ ಅಡಿಕೆ ಪೂರೈಕೆಯು ಧಾರಣೆ ಏರಿಕೆಯ ಮೇಲೆ ನಿಂತಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
Advertisement