Advertisement
ಸ್ಥಳೀಯ ಅಡಿಕೆಯ ಆವಕವನ್ನು ಬೆಳೆಗಾರರು ತಡೆ ಹಿಡಿದಿದ್ದಾರೆ. ಅಡಿಕೆ ಧಾರಣೆ ಮತ್ತು ಆಮದು ವಿಚಾರ ಈ ಬಾರಿಯ ಲೋಕಸಭಾ ಸ್ಪರ್ಧೆಯಲ್ಲಿ ಜಿಲ್ಲೆಯ ಚರ್ಚೆಯ ವಿಷಯವೂ ಹೌದು. ಈ ಎಲ್ಲವನ್ನೂ ಬದಿಗೊತ್ತಿ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಬೆಳೆಗಾರರು ಇದ್ದಾರೆ.
ಕಾಳುಮೆಣಸು ಧಾರಣೆಯಲ್ಲಿ ಒಂದಷ್ಟು ಚೇತರಿಕೆ ಕಂಡಿದೆ. ವಾರದ ನಡಿಗೆಯನ್ನು ಗಮನಿಸುವಾಗ ಕಾಳುಮೆಣಸು ಕೆ.ಜಿ.ಗೆ 310 ರೂ.ವರೆಗೆ ಧಾರಣೆ ಪಡೆದುಕೊಂಡಿದೆ. ಹಿಂದಿನ ವಾರ ಕೆ.ಜಿ.ಗೆ 305 ರೂ.ನಂತೆ ಖರೀದಿ ನಡೆಸಿತ್ತು. ಎರಡು ವಾರಗಳ ಹಿಂದೆ 310 ರೂ. ನಲ್ಲಿತ್ತು ಧಾರಣೆ. ಈಗ ಮತ್ತೆ ಇದೇ ಧಾರಣೆಯೆಡೆಗೆ ಸಾಗುತ್ತಿದೆ. ರಬ್ಬರ್ ಕುಸಿತ
ಹಿಂದಿನ ವಾರ ಧಾರಣೆ ಏರಿಸಿಕೊಂಡು ಅಚ್ಚರಿ ಮೂಡಿಸಿದ್ದ ರಬ್ಬರ್, ಈ ವಾರ ಸುಮಾರು 1 ರೂ. ನಷ್ಟು ಕುಸಿತ ಕಂಡಿದೆ. ಆರ್‌ಎಸ್‌ಎಸ್4 ದರ್ಜೆ 1.5 ರೂ. ಕುಸಿತ ಕಂಡು 124 ರೂ., ಆರ್‌ಎಸ್‌ಎಸ್5 ದರ್ಜೆ 1 ರೂ. ಕುಸಿತ ಕಂಡು 118 ರೂ., 50 ಪೈಸೆ ಕುಸಿದಿರುವ ಲಾಟ್ 113 ರೂ.ನಲ್ಲಿ ಖರೀದಿ ನಡೆಸಿದೆ. ತಲಾ 1 ರೂ. ಏರಿಸಿಕೊಂಡಿರುವ ಸ್ನ್ಯಾಪ್ 1 ದರ್ಜೆ 88 ರೂ. ಹಾಗೂ ಸ್ನ್ಯಾಪ್ 2 ದರ್ಜೆ 80 ರೂ.ನಲ್ಲಿ ಖರೀದಿ ನಡೆಸಿವೆ.
Related Articles
ತೆಂಗಿಗೆ ಹಿಂದಿನ ವಾರದ ಧಾರಣೆಯೇ ಮುಂದುವರೆದಿದೆ. ಈ ವಾರ ತೆಂಗಿನಕಾಯಿ ಕೆ.ಜಿ.ಗೆ 32 ರೂ.ನಿಂದ 34 ರೂ.ವರೆಗೆ ವ್ಯವಹಾರ ಕುದುರಿಸಿದೆ. ಹಿಂದಿನ ವಾರ ಇದೇ ಧಾರಣೆ ಇತ್ತು. ಅದರ ಹಿಂದಿನ ವಾರ 1 ರೂ. ಏರಿಕೆ ಕಂಡಿತ್ತು.
Advertisement
ಕೊಕ್ಕೋ ಸ್ಥಿರಕೊಕ್ಕೋ ಧಾರಣೆಯಲ್ಲಿ ಇಳಿಕೆ ಕಂಡಿದೆ. ಕಳೆದ ಕೆಲ ಸಮಯಗಳಿಂದ ಕೊಕ್ಕೋ ಧಾರಣೆ ಸ್ಥಿರವಾಗಿ ಕ್ರಮಿಸುತ್ತಿತ್ತು. ಹಸಿ ಕೊಕ್ಕೋ ಕೆ.ಜಿ.ಗೆ 65 ರೂ., ಒಣ ಕೊಕ್ಕೋ ಕೆ.ಜಿ.ಗೆ 195 ರೂ.ನಲ್ಲಿ ಖರೀದಿ ನಡೆದಿತ್ತು. ಈ ವಾರದ ಹಸಿ ಕೊಕ್ಕೋ 60 ರೂ.ಗೆ ಇಳಿಕೆ ಕಂಡಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಮಾತ್ರ. ಅಡಿಕೆ ಧಾರಣೆ
ಹಿಂದಿನ ವಾರ 275 ರೂ. ನಲ್ಲಿದ್ದ ಅಡಿಕೆ ಧಾರಣೆ ಈ ವಾರವೂ ಮುಂದುವರೆದಿದೆ. ಉಳಿದಂತೆ ಹೊಸ ಅಡಿಕೆ 220 ರೂ.ನಿಂದ 228 ರೂ., ಡಬಲ್ ಚೋಲು 300 ರೂ. ನಿಂದ 310 ರೂ.ವರೆಗೆ ಖರೀದಿ ನಡೆಸಿದೆ. ಪಠೊರಾ ಹೊಸ 150 ರೂ.ನಿಂದ 190 ರೂ. ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಗೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.