ನ್ಯೂಯಾರ್ಕ್: ನೀವಿನ್ನೂ ನಿಮ್ಮ ಮೊಬೈಲ್ , ಕಂಪ್ಯೂಟರ್, ಅಥವಾ ಇತರ ಡಿವೈಸ್ ಗಳ ಪಾಸ್ ವರ್ಡ್ 123456 ಅಂತಲೇ ಇಟ್ಟುಕೊಂಡಿದದ್ದೀರಾ ? ಅದು ನಿಮ್ಮ ತಪ್ಪಲ್ಲ ಬಿಡಿ ! ಬಳಕೆಗೆ ಸುಲಭವಾಗಲಿ ಮತ್ತು ನೆನಪು ಉಳಿಯುವುದಕ್ಕಾಗಿ ಇಂತಹ ಸುಲಭ ಪಾಸ್ ವರ್ಡ್ ಗಳನ್ನು ಬಳಸುತ್ತಿರುತ್ತೀರಿ. ಆದರೇ ಜಗತ್ತಿನ ಅತೀ ಪ್ರಸಿದ್ಧ ಜಾಲತಾಣಗಳು ನಿಮ್ಮ ಮಾಹಿತಿ ಕದಿಯುತ್ತಿದೆ ಅಥವಾ ಸುಖಾಸುಮ್ಮನೆ ಜಾಹೀರಾತುಗಳನ್ನು ನೀಡಿ ದಾರಿ ತಪ್ಪಿಸುತ್ತಿವೆ ಎಂದು ನೀವು ಇನ್ಮುಂದೆ ದೂಷಿಸುವಂತಿಲ್ಲ. ಆಶ್ಚರ್ಯವಾಗುತ್ತಿದೆಯಾ !
ಹೌದು. ಪಾಸ್ ವರ್ಡ್ ಎಂಬುದು ಬಳಕೆದಾರರಿಗೆ ತಮ್ಮ ಗೌಪ್ಯ ಮಾಹಿತಿಗಳನ್ನು ಸೈಬರ್ ಕ್ರಿಮಿನಲ್ಸ್ ಗಳಿಗೆ ದೊರಕದಂತೆ ಮಾಡುವ ಒಂದು ವ್ಯವಸ್ಥೆ. ಇಂಗ್ಲೆಂಡ್ ನ ಯುನಿವರ್ಸಿಟಿ ಆಫ್ ಫ್ಲೆಮತ್ ನಡೆಸಿರುವ ಸಂಶೋಧನೆಯ ಪ್ರಕಾರ ಜಗತ್ತಿನಾದ್ಯಂತ ಕೋಟ್ಯಾಂತರ ಜನರು 16 ರೀತಿಯ ಪಾಸ್ ವರ್ಡ್ ಗಳನ್ನು ಏಕಕಾಲದಲ್ಲಿ ಬಳಸುತ್ತಿದ್ದಾರೆ.
ಅಂದರೇ abc123, qwertyuiop, iloveyou, password ,123456, password1! ಮೊಬೈಲ್ ನಂಬರ್ ಗಳು ಮುಂತಾದ ಕೆಟ್ಟ ಪಾಸ್ ವರ್ಡ್ ಗಳನ್ನು ನಿಯಮಿತವಾಗಿ ಮತ್ತು ಸಾಮಾನ್ಯವಾಗಿ ಬಳಸುತ್ತಿದ್ದಾರೆ. ಇದು ಸೈಬರ್ ಅಪರಾಧಿಗಳಿಗೆ ನಿಮ್ಮ ಮಾಹಿತಿ ಕದಿಯಲು ನೀವೆ ನೀಡಿದ ರಹದಾರಿ.
ಹಾಗೆಂದು ಎಲ್ಲರೂ ಈ ಸುಲಲಿತವಾದ ಪಾಸ್ ವರ್ಡ್ ಬಳಸುತ್ತಿಲ್ಲ. ಕೆಲವರು ಅತೀ ಭದ್ರತೆಗಾಗಿ ಸುರಕ್ಷಿತ ಪಾಸ್ ವರ್ಡ್ ಗಳ ಬಳಕೆ ಮಾಡುತ್ತಿದ್ದಾರೆ. ಯಾವುದೇ ಅಕೌಂಟ್ ಹೊಸದಾಗಿ ಓಪನ್ ಮಾಡುವಾಗ ಕ್ಯಾಪಿಟಲ್ ಲೆಟರ್, ಸ್ಮಾಲ್, ಸಿಂಬಲ್ಸ್ , ಕ್ಯಾರೆಕ್ಟರ್ ಮುಂತಾಗಿ ಎಲ್ಲಾ ಸಂಖ್ಯೆಗಳನ್ನು ಬಳಸಿ ನೆನಪಿನಲ್ಲಿಟ್ಟುಕೊಳ್ಳುವುದು ಇಂದಿನ ಕಾಲದಲ್ಲಿ ಅತೀ ಅಗತ್ಯವಾಗಿದೆ. ಎಲ್ಲಾ ಸಾಮಾಜಿಕ ಜಾಲತಾಣಗಳು ಕೂಡ ನಿಮ್ಮ ಪಾಸ್ ವರ್ಡ್ ಗಳನ್ನು ಸುರಕ್ಷಿತವಾಗಿರಿಸುವಂತೆ ಅಗಿಂದ್ದಾಗೆ ಸಲಹೆ ನೀಡುತ್ತದೆ. ಅದಾಗ್ಯೂ ಸುಲಭ ಪಾಸ್ ವರ್ಡ್ ಗಳನ್ನು ಬಳಸಿ ಗೌಪ್ಯ ಮಾಹಿತಿ ಸೋರಿಕೆಯಾದರೇ ತಪ್ಪು ನಿಮ್ಮದೇ ಎಂದು ಇಂಗ್ಲೆಂಡ್ ನ ಯುನಿವರ್ಸಿಟಿ ಆಫ್ ಫ್ಲೆಮತ್ ಸಂಶೋಧನೆಯಲ್ಲಿ ಹೇಳಲಾಗಿದೆ.