Advertisement

ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ‌ ನೀವು ?ಡಿಕೆಶಿಗೆ ಬಿಜೆಪಿ

11:43 AM Dec 22, 2021 | Team Udayavani |

ಬೆಂಗಳೂರು: ಮತಾಂತರ ನಿಷೇಧ ಮಸೂದೆ ಮಂಡನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಾಮಾಜಿಕ ಜಾಲತಾಣ ಘಟಕದ ಮಧ್ಯೆ ಭಾರಿ ಟ್ವೀಟ್ ವಾರ್ ಪ್ರಾರಂಭವಾಗಿದೆ. ಸದನದಲ್ಲಿ ಮಸೂದೆಯ ಪ್ರತಿಯನ್ನು ಹರಿದು ಹಾಕಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಬುಧವಾರ(ಡಿಸೆಂಬರ್ 22) ಸರಣಿ ಟ್ವೀಟ್ ಮಾಡಿದೆ.

Advertisement

“ಮಾನ್ಯ ಡಿಕೆಶಿ ಅವರೇ ನೀವು ಸದನದಲ್ಲಿ ಮತಾಂತರ‌‌ ನಿಷೇಧಕ್ಕಾಗಿ ಮಂಡಿಸಿದ ವಿಧೇಯಕದ ಪ್ರತಿಯನ್ನು ಹರಿದು ಹಾಕಿದಿರಿ. ಇರಲಿ, ತೊಂದರೆ ಇಲ್ಲ.
ಏಕೆಂದರೆ ನಿಮಗಾಗಲಿ , ನಿಮ್ಮ ಅಧಿನಾಯಕ ರಾಹುಲ್ ಗಾಂಧಿಯವರಿಗಾಗಲಿ ಸಂಸದೀಯ ವ್ಯವಸ್ಥೆ ಹಾಗೂ ನಡಾವಳಿಯಲ್ಲಿ ನಂಬಿಕೆಯೇ ಇಲ್ಲ.
ತುರ್ತು ಪರಿಸ್ಥಿತಿ ಹೇರಿದ ರಾಜಕೀಯ ಕುಟುಂಬದ ಹಿಂಬಾಲಕರಲ್ಲವೇ‌ ನೀವು ?

ಡಿಕೆಶಿ ಅವರೇ ನಿಮಗೆ ಅನುಕೂಲಕರ ವಾತಾವರಣ ಇಲ್ಲ ಎಂದಾದರೆ ನೀವು ವಿಧೇಯಕದ ಪ್ರತಿಯಷ್ಟೇ ಅಲ್ಲ, ಸದನದ ನಿಯಮಾವಳಿಗಳನ್ನೇ ಹರಿದು ಬಿಸಾಡಬಲ್ಲಿರಿ ! ಏಕೆಂದರೆ ನಿಮಗೆ ಸದನ, ವ್ಯವಸ್ಥೆ, ನಿಯಮ ಇತ್ಯಾದಿಗಳ ಮೇಲೆ ಗೌರವವೇ ಇಲ್ಲ. ಹೇಗಾದರೂ ಮಾಡಿ ಸೋನಿಯಾ ಗಾಂಧಿ ಮೆಚ್ಚುಗೆ ಗಳಿಸಬೇಕೆಂಬುದಷ್ಟೇ ನಿಮ್ಮ ಧ್ಯೇಯ ಡಿಕೆಶಿ ಅವರೇ ಕನಕಪುರದ ಬೆಟ್ಟದ ಮೇಲೆ ಏಸುಕ್ರಿಸ್ತನ ಏಕಶಿಲಾ ವಿಗ್ರಹ ಸ್ಥಾಪನೆ ಮಾಡಲು ಹೊರಟವರಲ್ಲವೇ ನೀವು ?
ಯಾರ ಓಲೈಕೆಗೆ ನೀವು ಈ ಕೆಲಸಕ್ಕೆ ಮುಂದಾಗಿದ್ದಿರಿ ? ಸೋನಿಯಾ ಗಾಂಧಿ ಮೆಚ್ಚುಗೆ ಗಳಿಸುವುದಕ್ಕಲ್ಲವೇ ? ನಿಮಗೆ ಸ್ವಧರ್ಮ, ರಾಷ್ಟ್ರಧರ್ಮದ ಮೇಲೆ ಕಿಂಚಿತ್ತಾದರೂ ನಂಬಿಕೆ ಇದೆಯೇ ? ಎಂದು ಟ್ವೀಟ್ ಮಾಡಿದೆ.

ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತಿರುಗೇಟು ನೀಡಿದೆ. “ಕೊಟ್ಟ ಕುದುರೆ ಏರಲಾರದೆ, ಸುಮ್ಮನೇ ಮೈಪರಚುಕೊಳ್ಳುವವರು, ವೀರರೂ ಅಲ್ಲ, ಧೀರರೂ ಅಲ್ಲ. ಈ ಮಾತು ಕೇಂದ್ರ – ರಾಜ್ಯದ ಬಿಜೆಪಿ ಸರ್ಕಾರಗಳು ಈಗಿರುವ ಕಾನೂನನ್ನು ಸಮರ್ಪಕವಾಗಿ ಬಳಸಿಲ್ಲ ಎಂಬುದಕ್ಕೆ ಸಾಕ್ಷಿ ಬಲವಂತದ ಮತಾಂತರಕ್ಕೊಳಪಟ್ಟವರು ಎಷ್ಟು ದೂರು ನೀಡಿದ್ದಾರೆ? ಸಮೀಕ್ಷೆ ಆಗಿದೆಯೇ? ವರದಿ ಇದೆಯೇ? ಎಂಬುದನ್ನ ಸದನದ ಮುಂದಿಟ್ಟು ಮಾತಾಡಲಿ.

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುತ್ತದೆ ಹಿಂದೂ ಸಂಸ್ಕೃತಿ. ಅದಕ್ಕೆ ಬೇಕಿರುವುದು ಪ್ರೀತಿ, ನಂಬಿಕೆಯೇ ಹೊರತು, ಜಾತಿ, ಧರ್ಮ ಎನ್ನುವ ಲೆಕ್ಕಾಚಾರಗಳಲ್ಲ. ರಾಜ್ಯ ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ  ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಮದುವೆಯಾಗಲು ಹೆಣ್ಣು   ಗಂಡಿನ ಸಮ್ಮತಿಯಲ್ಲ ಬದಲಿಗೆ ಸರ್ಕಾರದ ಸಮ್ಮತಿ ಬೇಕಿದೆ.

Advertisement

ಮತಾಂತರ ನಿಷೇಧ ಕಾಯ್ದೆಯು ಒಂದು ಕಪ್ಪು ಚುಕ್ಕೆಯಂತಿದೆ. ಬಾಬಾಸಾಹೇಬ್‌ ಅಂಬೇಡ್ಕರ್‌ ಹಾಗೂ ಸಂವಿಧಾನವನ್ನು ಈ ಕಾಯ್ದೆಯು ಮೀರಿದೆ. ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾ ಸಂಸ್ಥೆಗಳು ಬಲವಂತದ ಮತಾಂತರ ಮಾಡುತ್ತಿವೆ ಎನ್ನುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಸಚಿವರ ಮಕ್ಕಳು ಅಂತಹ ಸಂಸ್ಥೆಗಳಲ್ಲೇ ಓದುತ್ತಿಲ್ಲವೇ ” ಎಂದು ಪ್ರಶ್ನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next