Advertisement

ಕೋವಿಡ್ ನಿಯಂತ್ರಣಕ್ಕೆ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಪರಿಣಾಮಕಾರಿಯಾಗಿದೆಯೇ

04:55 PM Jun 28, 2020 | keerthan |

ಮಣಿಪಾಲ: ದೇಶಾದ್ಯಂತ ಕೋವಿಡ್-19 ಸೋಂಕಿತರ ಸಂಖ್ಯೆ 5 ಲಕ್ಷದ ಗಡಿದಾಟಿದೆ. ಈ ಸಂದರ್ಭದಲ್ಲಿ ಸರಕಾರ ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕಾ ಕ್ರಮಗಳು ಪರಿಣಾಮಕಾರಿಯಾಗಿದೆಯೇ ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.

Advertisement

ವಿಷ್ಣುಕುಮಾರ್: ಸರ್ಕಾರ ಏನು ಮಾಡುತ್ತಿದೆ. ಎಲ್ಲಾ ಧಣಿಗಳಿಂದ ಮತ್ತು ಕೆಲವು ಖಾಸಗಿ ಸಂಸ್ಥೆಗಳಿಂದ ಜನರ ಪ್ರಾಣ ಉಳಿದಿದೆ ಅಷ್ಟೇ.

ನಿತೇಶ್ ಬಿ: ವಿದೇಶದಿಂದ ಕೋವಿಡ್-19 ಶಂಕಿತರನ್ನ ಎಸಿ ವಿಮಾನದಲ್ಲಿ ಕರೆದುಕೊಂಡು ಬಂದಿದ್ದು ಸರ್ಕಾರ, ಸರಿಯಾದ ಮೆಡಿಕಲ್ ಚೆಕಪ್ ಮಾಡದೇ ಸೋಂಕಿತರನ್ನ ಭಾರತದೊಳಗೆ ಬಿಟ್ಟದ್ದು ಸರ್ಕಾರ, ಶಂಕಿತರನ್ನ ಹಾಗೂ ಸೋಂಕಿತರನ್ನ ಸರಿಯಾಗಿ ಗೃಹ ಬಂಧನದಲ್ಲಿಡದೇ ನಿರ್ಲಕ್ಷಿಸಿ ಸೋಂಕು ಹರಡಲು ನೆರವಾಗಿದ್ದು ಸರ್ಕಾರ, ಕರ್ಫೂ ಆದೇಶಗಳನ್ನ ಮಾಡಿ ಜನರಿಗೆ ನರಕ ತೋರಿಸುತ್ತಿರುವುದು ಸರ್ಕಾರ, ಜನರು ಹಾಲು, ಹಣ್ಣು, ನೀರು, ತರಕಾರಿ, ಔಷದಿ ತರಲು ಹೊರಗೆ ಬಂದರೆ ಲಾಠಿ ಏಟು ಕಂಡಲ್ಲೇ ಗುಂಡು ಎಂಬ ಆದೇಶಗಳನ್ನ ಹೊರಡಿಸುತ್ತಿರುವುದು ಸರ್ಕಾರ, ದೇಶದ ಸಂಪೂರ್ಣ ಆರ್ಥಿಕತೆಯನ್ನು ಹಾಳು ಮಾಡಿರುವುದು ಸರ್ಕಾರ, ದೇಶದ ಜನರ ಸಂತೋಷ ಹಾಳುಗೆಡುವಿರುವುದು ಸರ್ಕಾರ, ದೇಶದ ಜನರು ಹಸಿವಿನಿಂದ, ಅನಾರೋಗ್ಯದಿಂದ ಸಾಯುವಂತೆ ಮಾಡುತ್ತಿರುವುದು ಸರ್ಕಾರ, ದೇಶದ ಕೂಲಿಕಾರ್ಮಿಕ ವಲಸಿಗರಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸದೇ ಕಾಲ್ನಡಿಗೆಯಲ್ಲಿ ಊರು ತಲುಪುವಂತೆ ಮಾಡಿದ್ದು ಕೂಡ ಸರ್ಕಾರ!

ಈಗ ಹೇಳಿ ಬಡಪಾಯಿ ಭಾರತೀಯರು ಮಾಡಿರುವ ಘೋರ ಅಪರಾಧವಾದರು ಏನು? ಅವರಿಗೇಕೆ ಪೋಲೀಸ್ ಗೂಂಡಾಗಳನ್ನು ಮುಂದೆ ಬಿಟ್ಟು ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿದ್ದಾರೆ? ಭಾರತದ ಬಡ ರೈತ ತಾನು ಬೆವರು ಹರಿಸಿ, ಸಾಲ ಮಾಡಿ ಬೆಳೆದ ಬೆಳೆಗೆ ನಷ್ಟ ತುಂಬಿಕೊಡುವವರು ಯಾರು? ಸರ್ಕಾರ ಪ್ರತಿಯೊಂದು ಮನೆಗಳಿಗೆ ಅಗತ್ಯ ಸಾಮಗ್ರಿ ಏಕೆ ಪೂರೈಸುತ್ತಿಲ್ಲ? ಎಷ್ಟು ದಿನ ಅನ್ನ ನೀರು ಇಲ್ಲದೇ ಜನರು ಮನೆಯಲ್ಲಿ ಬಂದಿಯಾಗಿರಲು ಸಾಧ್ಯ? ವೈರಸ್ ನಿರ್ಮೂಲನೆಗೆ ಔಷಧ ಸಂಶೋಧನೆಗಳಿಗೆ ಸರ್ಕಾರ ಏಕೆ ಮಹತ್ವ ನೀಡುತ್ತಿಲ್ಲ? ವೈರಸ್ಗೆ ಹೆದರಿ ಮನೆಯಲ್ಲಿ ಕೂರುವುದೊಂದೇ ಮದ್ದಾಗಿರಲು ಹೇಗೆ ಸಾಧ್ಯ.? ಇನ್ನೂ ಹಲವಾರು ಪ್ರಶ್ನೆಗಳು ಬರೆಯಲು ಮನಸ್ಸಿಲ್ಲ.

ಶಿವ ಮಾಂಕರ್: ರಾಜ್ಯದಲ್ಲಿ ಕೇವಲ ಸಚಿವ ಸುಧಾಕರ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಉಳಿದವರೆಲ್ಲಾ ಜನರ ಜೀವನದ ಜೊತೆಗೆ ಆಡುತ್ತಿದ್ದಾರೆ. ಅವರಿಗಲ್ಲಾ ಲಾಕ್ ಡೌನ್ ಬೇಡ. ಲಾಕ್ ಡೌನ್ ಮಾಡಿದರೆ ಭ್ರಷ್ಟಾಚಾರ ಮಾಡಲಾಗುವುದಿಲ್ಲ ಅದಕ್ಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next