Advertisement
ಒಂದು ಕೇಳಿದರೆ ಲಕ್ಷ ಲಕ್ಷ ವಸ್ತುಗಳನ್ನು ಎತ್ತಿ ತೋರಿಸುವ ಅಮೆಜಾನ್ ವೆಬ್‌ಸೈಟ್‌ನಲ್ಲಿ ನಾನೊಂದು ಸಣ್ಣ ಮೂಗುತಿ ಆರಿಸುತ್ತಿದ್ದೆ. ಮೂಗು ಚುಚ್ಚಿಸಿಕೊಳ್ಳುವ ಎರಡು ವರ್ಷದ ಹಿಂದಿನ ಕನಸು ಈಡೇರಿದ್ದು ಮೊನ್ನೆ ಮೊನ್ನೆಯಷ್ಟೇ. ಅದೂ ಅಮ್ಮ , ಅತ್ತೆ, ಅತ್ತಿಗೆ, ಅಕ್ಕ, ಫ್ರೆಂಡ್ಸ್‌ಗಳನ್ನೆಲ್ಲ ಕೇಳಿ, ಅವರು “ನಿಂಗೆ ಮೂಗುತಿ ಚೆನ್ನಾಗಿ ಕಾಣುತ್ತೆ’ ಅಂತ ಹೇಳಿದ ಮೇಲೆ. ಸ್ವಲ್ಪ ದಿನಗಳ ನಂತರ ಆ ಮೂಗುತಿಯನ್ನು ಬದಲಿಸಿ, ಬೇರೊಂದು ರೀತಿಯದ್ದನ್ನು ಧರಿಸುವ ಆಸೆಯಾಯ್ತು. ಒಂದಕ್ಕಿಂತ ಒಂದು ಚಂದ ಅನ್ನಿಸುವ ಸಾವಿರಾರು ಮೂಗುತಿಗಳಲ್ಲಿ ಯಾವುದನ್ನು ಖರೀದಿಸುವುದು ಅಂತ ಗೊಂದಲವಾಗಿ, ಎಲ್ಲ ಮೂಗುತಿಗಳೂ ಒಂದೊಂದಾಗಿ ನನ್ನ ಮೂಗಿನ ಮೇಲೆ ಬಂದು ಕೂತಂತೆ ಕಲ್ಪಿಸಿಕೊಂಡೆ. ಯಾವುದರಲ್ಲಿ ಹೇಗೆ ಕಾಣಿಸುತ್ತೇನೆ ಅಂತ ಮನಸ್ಸಿನೊಳಗೇ ಲೆಕ್ಕಾಚಾರ ಹಾಕತೊಡಗಿದೆ. ತಗೊಂಡಾದ ಮೇಲೆ ಯಾರಾದ್ರೂ, ಚೆನ್ನಾಗಿಲ್ಲ ಅಂದುಬಿಟ್ಟರೆ ಅಂತ, ಮನೆಯಲ್ಲಿ ಎಲ್ಲರನ್ನೂ ಕೇಳಿಕೊಂಡು ಬಂದೆ. ನನ್ನ ಈ ಪಡಿಪಾಟಲನ್ನು ನೋಡಿದ ಯಜಮಾನರು, “ಹೆಣ್ಮಕ್ಕಳಿಗೆ ಬೇರೆ ಕಸುಬಿಲ್ವಾ? ಇಷ್ಟು ಸಣ್ಣ ಸಣ್ಣ ವಿಷಯಕ್ಕೆಲ್ಲ ಅಷ್ಟೊಂದು ಸಮೀಕ್ಷೆ , ಲೆಕ್ಕಾಚಾರ ಹಾಕೋ ಅಗತ್ಯ ಇದ್ಯಾ?’ ಎಂದು ಕಿಚಾಯಿಸಿದರು. “ಹೌದು ಮತ್ತೆ. ಮೂಗುತಿ ಸೆಲೆಕ್ಟ್ ಮಾಡೋದು ಅಂದ್ರೆ ಕಮ್ಮಿàನಾ? ಎಲ್ಲರ ಅಭಿಪ್ರಾಯ ಕೇಳಿ, ಲೆಕ್ಕಾಚಾರ ಹಾಕಿದ ಮೇಲೇ ಒಂದು ನಿರ್ಧಾರಕ್ಕೆ ಬರಲು ಸಾಧ್ಯ’ ಅಂತ ಅವರ ಬಾಯಿ ಮುಚ್ಚಿಸಿದೆ.
ಅಪ್ಪ-ಅಮ್ಮ ತೋರಿಸುವ ಯಾವ ಹುಡುಗನನ್ನೂ ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಕೆಲವರನ್ನು ಫೋಟೊ ನೋಡಿಯೇ ರಿಜೆಕ್ಟ್ ಮಾಡಿದರೆ, ಕೆಲವರನ್ನು ಭೇಟಿ ಮಾಡಿದ ನಂತರ “ಬೇಡ’ ಅನ್ನುತ್ತಿದ್ದೆ. ನನ್ನ ಹುಡುಗ ನೋಡೋಕೆ ಹೀರೋ ಥರ ಇರಬೇಕು, ಆರಡಿ ಎತ್ತರ ಇರಬೇಕು, ನಾನು ಹೈಹೀಲ್ಸ್ ಹಾಕಿ ಅವನ ಪಕ್ಕ ನಿಂತರೂ ಕುಳ್ಳಿ ಅನ್ನಿಸಬೇಕು, ಅವನನ್ನು ಅಪ್ಪಿಕೊಂಡಾಗ ಅವನ ಎದೆಬಡಿತ ಕಿವಿಗೆ ಕೇಳಿಸಬೇಕು ಅಂತೆಲ್ಲ ಫಿಲಿ¾ ಸ್ಟೈಲ್‌ನಲ್ಲಿ ಕನಸು ಕಾಣುತ್ತಿದ್ದೆ. ಹೀಗಿರುವಾಗ, ಒಂದು ಸಂಬಂಧ ಮನೆಯವರಿಗೆ ಬಹಳ ಹಿಡಿಸಿತ್ತು. ಹುಡುಗ ಒಳ್ಳೆಯ ಉದ್ಯೋಗದಲ್ಲಿದ್ದ. ನೋಡೋಕೂ ಚೆನ್ನಾಗಿದ್ದ. ಅವನನ್ನು ಬೇಡ ಅನ್ನೋಕೆ ಯಾವ ಕಾರಣವೂ ಇರಲಿಲ್ಲ. ಆದರೂ ನನಗೇಕೋ ಸಮಾಧಾನವಿಲ್ಲ. ನನ್ನ ಕನಸಿನ ರಾಜಕುಮಾರ ಅನ್ನಿಸಿಕೊಳ್ಳಲು ಇವನಲ್ಲಿ ಏನೋ ಕೊರೆ ಕಾಣುತ್ತಿತ್ತು. ಯಾಕಂದ್ರೆ, ಹುಡುಗ ನನಗಿಂತ ಮೂರೇ ಇಂಚು ಎತ್ತರವಿದ್ದ. ಎಲ್ಲರಿಗೆ ಇಷ್ಟವಾಗಿದ್ದಾನೆ ಅಂತ ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲೇ ಇಲ್ಲ. ಕೊನೆಗೆ, ಆರಡಿ ಕಟೌಟ್‌ನ ಕೈ ಹಿಡಿಯುವ ಆಸೆಯನ್ನು ಅಕ್ಕನ ಮುಂದೆ ಹೇಳಿದೆ. ಅವಳು ತಲೆ ತಲೆ ಚಚ್ಚಿಕೊಳ್ಳುತ್ತಲೇ, ಅಪ್ಪನಿಗೆ ಅದನ್ನು ವಿವರಿಸಿದಳು. ಮುಂದೆ, ಹುಡುಗನ ಜಾತಕದ ಜೊತೆಗೆ ಅವನ ಎತ್ತರವೆಷ್ಟು ಅಂತ ಅಪ್ಪ ತಪ್ಪದೇ ಕೇಳುತ್ತಿದ್ದರು! ಅನಂತರವೂ ಒಂದೆರಡು ಹುಡುಗರನ್ನು ಬೇಡ ಅಂದಮೇಲೆ ಸಿಕ್ಕಿದ್ದು ನಮ್ಮ ರಾಯರು! ನಾವು, ಹೆಣ್ಮಕ್ಕಳು ಇರೋದೇ ಹೀಗೆ ತಾನೇ? ಬರೀ ಶಾಪಿಂಗ್ ಅಥವಾ ಮದುವೆಯ ವಿಷಯದಲ್ಲಿ ಮಾತ್ರ ಅಲ್ಲ, ನಿತ್ಯಜೀವನದ ಎಲ್ಲ ಕೆಲಸವನ್ನೂ ಅಳೆದು ತೂಗಿಯೇ ಮಾಡುವ ಜಾಯಮಾನ ನಮ್ಮದು. ನಾಳೆ ಏನು ಅಡುಗೆ ಮಾಡೋದು, ತಂಗಿ ಮದುವೆಗೆ ಯಾವ ಸೀರೆ ಉಡೋದು, ಯಾವ ಡ್ರೆಸ್‌ಗೆ ಯಾವ ರೀತಿಯ ಹೇರ್‌ಸ್ಟೈಲ್ ಹೊಂದುತ್ತೆ, ಯಾವ ಡ್ರೆಸ್‌ನಲ್ಲಿ ತೆಳ್ಳಗೆ ಕಾಣುತ್ತೇನೆ, ಈ ಸೀರೆಗೆ ಈ ಬಣ್ಣದ ಬಳೆ ಓಕೇನಾ, ಅತ್ತೆ-ಮಾವ ಬಂದಾಗ ಹೇಗೆ ನಡೆದುಕೊಂಡರೆ ಅವರಿಗೆ ಇಷ್ಟವಾಗುತ್ತೆ, ಗಂಡನ ಸಿಟ್ಟನ್ನು ತಣಿಸಲು ಏನು ಮಾಡಬೇಕು, ಸಂಜೆ ಧಾರಾವಾಹಿ ನೋಡ್ತಾ ನೋಡ್ತಾ ಯಾವ ಕೆಲಸ ಮುಗಿಸಬಹುದು- ಹೀಗೆ ಎಲ್ಲ ಕೆಲಸಗಳ ಬಗ್ಗೆಯೂ ನಮ್ಮೊಳಗೊಂದು ಪೂರ್ವ ತಯಾರಿ, ಲೆಕ್ಕಾಚಾರ ನಡೆದಿರುತ್ತದೆ. ಗಂಡಸರಂತೆ ಹಿಂದು ಮುಂದೆ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾಳೆ ಏನಾಗುತ್ತೋ ಆಗಲಿ ಅಂತ ನಿರಾಳವಾಗಿ ಇರಲು ಸಾಧ್ಯವಿಲ್ಲ. ಈ ಗುಣಗಳೇ ತಾನೇ ನಮ್ಮ ಕೆಲಸದ ಅಚ್ಚುಕಟ್ಟುತನವನ್ನು , ಜೀವನ ಪ್ರೀತಿಯನ್ನು ಹೆಚ್ಚಿಸುವುದು?
ನಾನು ಬದುಕಿನ ಲೆಕ್ಕಾಚಾರಗಳನ್ನು ಕಲಿತಿದ್ದು ನನ್ನಮ್ಮನಿಂದಲೇ. ಎಲ್ಲ ವಿಷಯದಲ್ಲೂ ಅಮ್ಮನದ್ದು ಪಫೆìಕ್ಟ್ ಲೆಕ್ಕಾಚಾರ. ಯಾವ ಅಂಗಡಿಯಲ್ಲಿ ಯಾವ ತರಕಾರಿ ಚೆನ್ನಾಗಿರುತ್ತದೆ ಅಂತ ಅಮ್ಮನಿಗೆ ಗೊತ್ತು. ಅಲ್ಲಿಂದಲೇ ತರಕಾರಿ ತರುವಂತೆ ಅಪ್ಪನಿಗೆ ಹೇಳುತ್ತಾಳೆ. ಅದರಲ್ಲೇನಾದರೂ ಮಿಸ್ ಆದ್ರೆ, ಅಮ್ಮನಿಗೆ ತಕ್ಷಣ ಗೊತ್ತಾಗಿಬಿಡುತ್ತದೆ. ದಿನಸಿ ಸಾಮಗ್ರಿಗಳನ್ನು ಕಣ್ಣಿನಲ್ಲಿ ನೋಡಿಯೇ, ಅವುಗಳ ಗುಣಮಟ್ಟ ಹೇಳಬಲ್ಲ ಅಮ್ಮ ಕೆಲವೊಂದು ಕಂಪೆನಿಗಳ ಬೇಳೆಕಾಳು, ಎಣ್ಣೆಯನ್ನು ಖರೀದಿಸುವುದೇ ಇಲ್ಲ. ಇನ್ನು ಅಮ್ಮನ ಅಡುಗೆಯೂ ಅಷ್ಟೇ ಕ್ರಮಬದ್ಧವಾಗಿರುತ್ತದೆ. ಈ ವಾರದಲ್ಲಿ ಯಾವ ದಿನ, ಯಾವ ಅಡುಗೆ ಮಾಡಬೇಕು ಅಂತ ಮೊದಲೇ ತಯಾರಿ ಮಾಡಿಟ್ಟುಕೊಂಡಿರುತ್ತಾಳೆ. ತೋಟದ ಕೆಲಸ ನಡೆಯುವಾಗ, ಜಾಸ್ತಿ ಜನ ಕೆಲಸದವರು ಬಂದರೆ ರೊಟ್ಟಿ , ಚಪಾತಿಯಂಥ ಸಮಯ ಹಿಡಿಯುವ ತಿಂಡಿ ಮಾಡುವುದಿಲ್ಲ. ಹೊಟ್ಟೆ ತುಂಬುವ, ನೀರಡಿಕೆಯಾಗದಂಥ ತಿಂಡಿಗಳಿಗೆ ಆ ದಿನ ಹೆಚ್ಚು ಪ್ರಾಶಸ್ತ್ಯ. ಉಳಿದ ದಿನಗಳಲ್ಲಿ ಮನೆಯಲ್ಲಿ ಯಾರಿಗೆ, ಯಾವ ಅಡುಗೆ ಇಷ್ಟ ಅಂತ ಅರಿತುಕೊಂಡು, ಆ ಪ್ರಕಾರ ಅಡುಗೆ ಮಾಡುತ್ತಾಳೆ. ಮಕ್ಕಳು ಮುಂದಿನ ವಾರ ಊರಿಗೆ ಬರುತ್ತಾರೆ ಅಂತಾದರೆ, ಈ ದಿನದಿಂದಲೇ ವಿಶೇಷ ಅಡುಗೆಗೆ ತಯಾರಿ ಶುರುವಾಗುತ್ತದೆ.
Related Articles
.
ಶಿವನಿಗೆ ಮೂರನೇ ಕಣ್ಣು ಇರುವಂತೆ, ಹೆಣ್ಮಕ್ಕಳಿಗೆ “ದೂರದೃಷ್ಟಿ’ ಅನ್ನೋ ಒಂದು ಎಕ್ಸ್‌ಟ್ರಾ ಕಣ್ಣಿದೆ. ಬೇಕು-ಬೇಡಗಳ ತಕ್ಕಡಿಯನ್ನು ಬ್ಯಾಲೆನ್ಸ್ ಮಾಡುತ್ತಾ, ಏನು ಮಾಡಿದರೆ ಏನಾಗುತ್ತದೆ ಅಂತ ಅಳೆದು, ತೂಗಿ ನೋಡುವುದು ಅವರ ಕೆಲಸ. ಗಂಡಸರು ಒಂದು ವಿಷಯವನ್ನು ಎರಡು ಕಣ್ಣುಗಳಿಂದ ನೋಡಿದರೆ, ನಾವು ಅದನ್ನು ಮೂರನೇ ಕಣ್ಣಿನಿಂದ ನೋಡುತ್ತೇವೆ. ಈಗ ಗೊತ್ತಾಯ್ತಲ್ಲ, ಹೆಂಗಸರ್ಯಾಕೆ ಹೀಗೆ ಅಂತ.
Advertisement
– ಕಾವ್ಯಾ ಎಂ. ಎಸ್.