ಪುಣೆ: ನಮ್ಮ ತುಳುನಾಡಿನ ಭಾಷೆ, ಕಲೆ, ಸಂಸ್ಕೃತಿಯ ಬೆಳವಣಿಗೆಗೆ ನಮ್ಮಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯಬೇಕು. ತುಳು ನಾಟಕ, ತುಳು ಚಲನಚಿತ್ರ ಅಥವಾ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆದರೆ ಇದರಿಂದ ನಮ್ಮ ಯುವ ಜನತೆ ಸಂಸ್ಕೃತಿಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ತುಳುನಾಡಿನ ಸಂಸ್ಕಾರಯುತ ಜೀವನ ಪದ್ಧತಿ, ಅಚಾರ-ವಿಚಾರಗಳು ತುಂಬಾ ಶ್ರೀಮಂತವಾದುದು. ದೇವಾರಾಧನೆ, ಭೂತಾರಾಧನೆಯ ವಿಶಿಷ್ಟ ಪದ್ಧತಿ, ಕಟ್ಟುಕಟ್ಟಳೆಗಳಿಂದ ಕೂಡಿದ ಆಚರಣೆಗಳು, ಜಾನಪದ ಕ್ರೀಡಾ ಸ್ಪರ್ಧೆಗಳಿಂದ ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ. ಇಂತಹ ಶ್ರೀಮಂತ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕು ಎಂದು ಪಿಂಪ್ರಿ-ಚಿಂಚಾಡ್ ಬಂಟ್ಸ್ ಅಧ್ಯಕ್ಷ, ಉದ್ಯಮಿ ನಾರಾಯಣ ಶೆಟ್ಟಿ ಎರ್ಮಾಳ್ ನುಡಿದರು.
ಅ. 2ರಂದು ನಗರದ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರದಲ್ಲಿ ಅರೆಮರ್ಲೆರ್ ತುಳು ಚಲನಚಿತ್ರದ ಪ್ರದರ್ಶನಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು, ತುಳುನಾಡಿನ ಕಲಾಪ್ರಕಾರಗಳು ಯಾವುದೇ ಪ್ರಯೋಗಗಳು ನಡೆದಾಗ ಅದನ್ನು ನೋಡಿ ಆನಂದಿಸುವ ಜನ ಬಹಳಷ್ಟಿದ್ದಾರೆ. ನಮ್ಮ ಮಕ್ಕಳಿಗೆ ಯುವ ಜನತೆಗೆ ತಿಳಿಯಪಡಿಸುವ ಕಾರ್ಯ ಇಂಥ ಕಾರ್ಯಕ್ರಮಗಳಿಂದ ಆಗುತ್ತದೆ. ತುಳು ಸಂಸ್ಕೃತಿ ಜಗತ್ತಿನ ಮೂಲೆ ಮೂಲೆಯಲ್ಲೂ ಕಂಗೊಳಿಸುವಂತೆ ಮಾಡುವಲ್ಲಿ ತುಳುವರ ಕಾರ್ಯ ಮೆಚ್ಚುವಂಥದ್ದು. ಇನ್ನೂ ಕೂಡಾ ಹೆಚ್ಚು ಹೆಚ್ಚು ತುಳು ಕಾರ್ಯಕ್ರಮಗಳು ನಡೆಯುತ್ತಿರಲಿ. ಪುಣೆಯಲ್ಲಿ ಅರೆಮರ್ಲೆರ್ ತುಳು ಚಿತ್ರದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟ ಕಾರ್ಯಕ್ರಮದ ವ್ಯವಸ್ಥಾಪಕರಾದ ಸುದೀಪ್ ಪೂಜಾರಿ ಮುನಿಯಾಲ್ ಮತ್ತು ವಿಶ್ವನಾಥ್ ಶೆಟ್ಟಿ ಹಿರಿಯಡ್ಕ ಇವರ ಕಾರ್ಯ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಗೆ ತುಳುವರ ಸಹಕಾರ, ಪ್ರೋತ್ಸಾಹ ಸದಾಯಿರಲಿ ಎಂದು ನುಡಿದು ಶುಭ ಹಾರೈಸಿದರು.
ಅತಿಥಿ ಗಣ್ಯರಾಗಿ ಪಿಂಪ್ರಿ-ಚಿಂಚಾÌಡ್ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ ಎರ್ಮಾಳ್ ನಾರಾಯಣ ಕೆ. ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಹೊಟೇಲ್ ಅಸೋಸಿಯೇಶನ್ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪುಣೆ ಬಂಟರ ಸಂಘದ ಕೋಶಾಧಿಕಾರಿ ಚಂದ್ರಹಾಸ್ ಶೆಟ್ಟಿ ಎರ್ಮಾಳ್, ಪುಣೆಯ ಹೊಟೇಲ್ ಉದ್ಯಮಿ ಪ್ರಕಾಶ್ ಪೂಜಾರಿ ಪಂಚಮಿ, ಉದ್ಯಮಿ ಹೊಟೇಲ್ ಸುಪ್ರಿಯದ ಶಿವರಾಮ… ಶೆಟ್ಟಿ ಹಿರಿಯಡ್ಕ, ಪುಣೆ ತುಳು ಕೂಟದ ಗೌರಾವಾಧ್ಯಕ್ಷ ರಾಜ್‌ಕುಮಾರ್ ಮಿಯ್ನಾರ್, ಪುಣೆ ತುಳುಕೂಟದ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಶ್ಯಾಮ… ಸುವರ್ಣ, ಉಪಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ ಅವರು ಉಪಸ್ಥಿತರಿದ್ದರು.
ಚಲನಚಿತ್ರ ಪ್ರದರ್ಶನದ ಸಂಘಟಕರಾದ ಸುದೀಪ್ ಪೂಜಾರಿ ಮುನಿಯಾಲ್, ವಿಶ್ವನಾಥ್ ಶೆಟ್ಟಿ ಹಿರಿಯಡ್ಕ ಅವರ ವ್ಯವಸ್ಥಾಪಕತ್ವದಲ್ಲಿ, ತೆಲಿಕೆದ ಬೊಳ್ಳಿ ರಂಗನಟ, ಚಿತ್ರ ನಟ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದ ಅರೆಮರ್ಲೆರ್ ಚಲನಚಿತ್ರವು ಹೌಸ್‌ಫುಲ್ ಆಗಿ ಪ್ರದರ್ಶನಗೊಂಡಿತು. ಅತಿಥಿ ಗಣ್ಯರನ್ನು ಕಾರ್ಯಕ್ರಮದ ವ್ಯವಸ್ಥಾಪಕರು ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿದರು. ಕಾರ್ಯ ಕ್ರಮದ ವ್ಯವಸ್ಥಾಪಕರು ಈ ಚಿತ್ರ ಪ್ರದರ್ಶನಕ್ಕೆ ಸಹಕರಿಸಿದ ಪುಣೆಯ ಎಲ್ಲಾ ಸಂಘ ಸಂಸ್ಥೆಗಳಿಗೆ, ಕಲಾಪೋಷಕರಿಗೆ ಮತ್ತು ಎಲ್ಲಾ ತುಳು ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು.
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ ಅಸೋ
ಸಿಯೇಶನ್ ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ, ಶ್ರೀ ಅಯ್ಯಪ್ಪ ಸೇವಾ ಸಂಘ ಕಾತ್ರಜ್ ಪುಣೆ ಅಧ್ಯಕ್ಷ ಸುಭಾಷ್ ಶೆಟ್ಟಿ, ಅಂತಾರಾಷ್ಟ್ರೀಯ ಮಾನವಾಧಿಕಾರ ಅಸೋಸಿಯೇಟ್ಸ್ ಪುಣೆ ಜಿಲ್ಲಾಧ್ಯಕ್ಷ ರಘುರಾಮ ರೈ, ತುಳುಕೂಟ ಪುಣೆ ಅಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು, ಸಾಯಿ ಕ್ರಿಕೆಟರ್ ಇದರ ವಸಂತ್ ಶೆಟ್ಟಿ ಬಸ್ತಿ ಹಿರಿಯಡ್ಕ. ದಿವಾಕರ್ ಶೆಟ್ಟಿ ಮಾಣಿಬೆಟ್ಟು, ಯಶವಂತ್ ಶೆಟ್ಟಿ ಉಳಾಯಿ ಬೆಟ್ಟು, ಉದಯ… ಶೆಟ್ಟಿ ಸೋನಾ ಗಾರ್ಡನ್, ದಿವಾಕರ್ ಶೆಟ್ಟಿ ಹೋಟೆಲ… ಸೆಲೆಬ್ರೇಷನ್, ಸುಧಾಕರ್ ಶೆಟ್ಟಿ ಕಾತ್ರಜ್, ಪ್ರಶಾಂತ್ ಶೆಟ್ಟಿ ಬಸ್ತಿ ಹಿರಿಯಡ್ಕ, ಅರವಿಂದ ಶೆಟ್ಟಿ, ಹರೀಶ್ ಶೆಟ್ಟಿ ಗಣೇಶ್ ಫಾಸ್ಟ್‌ಫುಡ್, ಸಂತೋಷ್ ಪೂಜಾರಿ ಹಿರ್ಗಾನ, ವಸಂತ್ ಶೆಟ್ಟಿ ಪಾಷಣ್, ಧನಂಜಯ್ ಪೂಜಾರಿ ಅಜೆಕಾರ್‌ಸಹಕರಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ