Advertisement

ಕೊರೆಯುವ ಪ್ರಶ್ನೆಗಳಿಗೆ ಉತ್ತರವೆಲ್ಲಿದೆ?

12:30 AM Aug 12, 2018 | |

ವಿಐಪಿಯಾಗಿದ್ದರೆ ಜೈಲಿನಲ್ಲಿ ಮನೆಯ ವೈಭೋಗವನ್ನೇ ನೆನಪಿಸುವ ಐಷಾರಾಮಿ ಜೀವನ. ಇವೆಲ್ಲದಕ್ಕೂ ಲಕ್ಷ ಲೆಕ್ಕದ ಖರ್ಚು, ಅದರಿಂದ ಆರ್ಥಿಕ ಹೊರೆ ಜನಸಾಮಾನ್ಯ ರಿಗೆ. ತನಿಖೆ ಬಂಧನ ವಿಚಾರಣೆ ಶಿಕ್ಷೆ ಎಲ್ಲವೂ ನಡೆಯುವುದೇನೊ ಸರಿ, ಆದರೆ ಅದರ ಜೊತೆಗೆ ಹಣಬಲ ರಾಜಕೀಯ ಬಲ ಇದ್ದರಂತೂ ನಿಶ್ಚಿಂತೆ! ಹಣವಿಲ್ಲದವನ ಪಾಡು ನರಕಸದೃಶ.

Advertisement

ಮನುಕುಲದ ಮನಕಲಕುವ ಮತ್ತು ಮಾನವ ಲೋಕವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಗಳು ನಿತ್ಯ ಬದುಕಿನ ಅವಿಭಾಜ್ಯ ಅಂಗ ವೆಂಬಂತೆ ನಿರಂತರವಾಗಿ ನಿರಾಂತಕವಾಗಿ ನಡೆಯುತ್ತಿವೆ. ನಿಜಕ್ಕೂ ಇಡೀ ಮಾನವಸಮಾಜಕ್ಕೆ ಕಳಂಕದ ಹಣೆಪಟ್ಟಿಯಿವು. ದೈವ ಸಮಾನವಾಗಬೇಕಾದ ಗುರುಗಳಿಂದ ಹಸುಳೆಗಳ ಮೇಲೆ ಲೈಂಗಿಕ ದೌರ್ಜನ್ಯ, ಹೆತ್ತ ಅಪ್ಪನಿಂದಲೇ ಮಗಳ ಅತ್ಯಾಚಾರ, ಹೃದಯ ಹೀನರ ದುರ್ವರ್ತನೆಗೆ ವಿಕಲಾಂಗರು ಬಲಿ, ವರದಕ್ಷಿಣೆಗಾಗಿ ಹೆಣ್ಣಿನ ಶೋಷಣೆ, ಭಿಕ್ಷೊದ್ಯಮ ನಡೆಸುವವರ ನಡುವೆ ನರಳುವ ನಿಜ ಬಡವ, ಅವ್ಯವಹಾರ, ವ್ಯಾಪಾರದಲ್ಲಿ ಮೋಸ, ರೈತರ ಹಗಲು ದರೋಡೆ, ಜೀವಂತವಿರುವ ಜೀತ ಪದ್ಧತಿ ಇಂತಹ ಇನ್ನೂ ನೂರಾರು ಸಾವಿರಾರು ಪೀಡೆಗಳು ಸಮಾಜದ ನೈತಿಕತೆಯ ಭದ್ರಗೋಡೆಗಳನ್ನು ಸಿಡಿಮದ್ದುಗಳಾಗಿ ಒಡೆದುಹಾಕುತ್ತಿವೆ. 

ಇಂತಹ ಘಟನೆಗಳ ಕಾರಣೀಕತೃವೆಂದರೆ ಮನುಷ್ಯನ ವಿಕೃತ ಮನಸ್ಸು. ತಪ್ಪಿತಸ್ಥರು ಬಂಧನ ಕ್ಕೊಳಗಾಗುತ್ತಾರೆ ಎನ್ನುವುದೇನೋ ಸರಿ. ಅಪರಾಧ ಮಾಡಿದವನಿಗೆ ಶಿಕ್ಷೆಯಾಗಬೇಕು. ಇದು ಕಾನೂನು. ಆದರೆ ನಿಜಕ್ಕೂ ಶಿಕ್ಷೆಯಾಗುತ್ತದೆಯೇ? ಕಾನೂನಿ ನನ್ವಯ ತಪ್ಪಿತಸ್ಥರನ್ನು ವಶಕ್ಕೆ ತೆಗೆದುಕೊಳ್ಳುವುದು ಮೊದಲ ಹಂತ. ನಂತರ ವೈದ್ಯಕೀಯ ತಪಾಸಣೆ, ವಿಚಾರಣೆ, ಜಾಮೀನು, ನಿರಪೇಕ್ಷಣಾ ಜಾಮೀನು, ಸುದೀರ್ಘ‌ ಕಾಲದ ತನಿಖೆ ಈ ನಡುವೆ ತಪ್ಪಿತಸ್ಥನಿಗೆ ಶ್ರೇಣಿವಾರು ಪೊಲೀಸ್‌ ಭದ್ರತೆ, ಅರೋಪ ಸಾಬೀ ತಾದರೆ ಶಿಕ್ಷೆ ಪ್ರಕಟ, ಜೈಲುವಾಸ. ಅಪರಾಧಿ ಸ್ಥಿತಿವಂತ ನಾಗಿದ್ದರೆ, ಅಂದರೆ ವಿಐಪಿಯಾಗಿದ್ದರೆ ಜೈಲಿನಲ್ಲಿ ಮನೆಯ ವೈಭೋಗವನ್ನೇ ನೆನಪಿಸುವ ಐಷಾರಾಮಿ ಜೀವನ. ಇವೆಲ್ಲದಕ್ಕೂ ಲಕ್ಷ ಲೆಕ್ಕದ ಖರ್ಚು, ಅದರಿಂದ ಆರ್ಥಿಕ ಹೊರೆ ಜನಸಾಮಾನ್ಯರಿಗೆ. ತನಿಖೆ ಬಂಧನ ವಿಚಾರಣೆ ಶಿಕ್ಷೆ ಎಲ್ಲವೂ ನಡೆಯುವುದೇನೊ ಸರಿ, ಆದರೆ ಅದರ ಜೊತೆಗೆ ಹಣಬಲ ರಾಜಕೀಯ ಬಲ ಇದ್ದರಂತೂ ನಿಶ್ಚಿಂತೆ! ಹಣವಿಲ್ಲದ ವನ ಪಾಡು ನರಕಸದೃಶ. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ದೀರ್ಘ‌ಕಾಲಿಕ ತನಿಖೆಗಳು, ಅಸ್ಪಷ್ಟ ವರದಿಗಳು, ಸನ್ನಡತೆಯ ಅಧಾರದಲ್ಲಿ ಜೈಲಿನಿಂದ ಬಿಡುಗಡೆ, ರಾಷ್ಟ್ರಪತಿಗಳಿಂದ ಕ್ಷಮಾದಾನ ಎಂಬ ಭಾಗ್ಯದ ಬಾಗಿಲುಗಳು. ಹಿಂದೆ ಜೈಲು ಶಿಕ್ಷೆ ಯಾದರೆ ಜೀವಂತ ಮರಳುವುದೇ ಅನುಮಾನವಿತ್ತು. ಶಿಕ್ಷೆಗೆ ಹೆದರಿ ತಪ್ಪುಗಳು ಕಡಿಮೆಯಾಗಿ ಸಮಾಜ ಶಾಂತವಾಗಿತ್ತು. ಆದರೀಗ ಜೈಲುವಾಸ ಅಪ್ರತಿಷ್ಠೆಯ ಕಳಂಕವನ್ನು ಕಳಚಿಕೊಂಡುಬಿಟ್ಟಿದೆ. ಕುಖ್ಯಾತಿಯಿಂದಲೇ ಸಾಮಾಜಿಕ ಮುನ್ನೆಲೆಗೆ ಬಂದ ವರು ಬಹಳ ಜನ. ಕಾನೂನಿನ ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ. ಕಾನೂನಿನ ದುರುಪಯೋಗ ಬಹು ಸ್ಪಷ್ಟವಾಗಿ ಗೋಚರಿಸುತ್ತದೆ. ಹಣ ಮತ್ತು ರಾಜಕೀಯದ ಮೇಲಾಟದಲ್ಲಿ ಕಾನೂನು ಸೊರಗಿದಂತೆ ಕಾಣುತ್ತಿದೆ.

ಈ ಎಲ್ಲ ಅಂಶಗಳನ್ನು ಬಹುದಿನಗಳಿಂದ ಬಹು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಾಮಾನ್ಯವರ್ಗ ಸಮಾಜ ಘಾತುಕರ ಬಗ್ಗೆ ಮತ್ತು ಕಾನೂನು ಕ್ರಮಗಳ ಬಗ್ಗೆ ಬಹಿರಂಗವಾಗಿಯೇ ಚರ್ಚೆಯಲ್ಲಿ ತೊಡಗಿ ಪರ್ಯಾಯ ಮಾರ್ಗ ಹಿಡಿಯುತ್ತಿದ್ದಾರೆ. ಅದೇ ನೆಂದರೆ ಸಮಾಜಘಾತುಕ ದುರ್ವರ್ತನೆಗಳ 
ಮೂಲಕ ಹೀನ ಕೃತ್ಯವೆಸಗುವವರನ್ನು ಸಿಕ್ಕ ಸ್ಥಳದ ಲ್ಲಿಯೇ ಶಿಕ್ಷಿಸಬೇಕು. ಕಾನೂನನ್ನು ಕೈಗೆ ತೆಗೆದು ಕೊಂಡರೂ ಪರವಾಗಿಲ್ಲ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಅಂತಹ ಶಿಕ್ಷೆಯನ್ನು ಮಾಧ್ಯ ಮಗಳು ನೇರಪ್ರಸಾರ ಮಾಡಬೇಕು. ಅದನ್ನು ಕಂಡು ದುಷ್ಟಜಗತ್ತು ಬೆಚ್ಚಿ ಬೀಳಬೇಕು. ಕ್ರೂರ ಮನಸ್ಸು ನಡುಗಬೇಕು. ಮತ್ತೂಮ್ಮೆ ಅಪರಾಧವೆಸಗಲು ಯಾರಿಗೂ ಧೈರ್ಯವೇ ಬರಬಾರದು ಹಾಗಾಗ ಬೇಕು. ಈ ಅಭಿಪ್ರಾಯ ಈಗಾಗಲೇ ಜಾರಿಯಾದದ್ದು ಇದೆ. ಅನೇಕ ಮಹಿಳೆಯರು ಕೆಲವು ನೀಚರಿಗೆ ಬೀದಿಯಲ್ಲೇ ಬೆವರಿಳಿಸಿದ್ದಾರೆ, ಚಪ್ಪಲಿಯ ರುಚಿ ತೋರಿಸಿದ್ದಾರೆ, ವಿದ್ಯುತ್‌ ಕಂಬಗಳ ಬಿಸಿ ತಾಕಿಸಿದ್ದಾರೆ, ಈ ಸಾಮಾಜಿಕ ಪ್ರತಿಕ್ರಿಯೆಗೆ ಪ್ರಜ್ಞಾವಂತರು ಸಹಮತ ವ್ಯಕ್ತಪಡಿಸಿದ್ದಾರೆ. ಸಮಾಜ ದ್ರೋಹಿ ಚಟುವಟಿಕೆಗಳು ನಿಯಂತ್ರಣಗೊಂಡು ಸಮಾಜ ಶಾಂತವಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕೆಲವು ಸನ್ನಿವೇಶಗಳಲ್ಲಿ ವಿನಾಕಾರಣ ಸಾರ್ವಜನಿಕರ ಆತುರದ ನಿರ್ಧಾರಗಳಿಂದ ತಪ್ಪೇ ಮಾಡದವರು ಶಿಕ್ಷೆ ಅನುಭವಿಸಿ, ಪ್ರಾಣ ಕಳೆದುಕೊಂಡ ಕಹಿ ಘಟನೆಗಳು ನಡೆದುದುಂಟು. ಹೀಗಿದ್ದಾಗ ಕಾನೂನಿನನ್ವಯ ವಿಚಾರಣೆ ಅಗತ್ಯ. ಆದರೆ ಅಪರಾಧಿ ಎಂದು ಸಾಬೀತಾದೊಡನೆ ಶಿಕ್ಷೆಯಾಗಬೇಕು. ಕಾಲಾವಕಾಶ ನೀಡುವುದರಿಂದ ತಪ್ಪಿತಸ್ಥರು ತಪ್ಪಿಸಿ ಕೊಳ್ಳುವುದು ಸಾಮಾನ್ಯವೆನಿಸಿದೆ.

ಹೀಗೊಂದು ವೈಚಾರಿಕ ದೃಷ್ಟಿಕೋನಕ್ಕೆ ಎಡೆಮಾಡಿ ಕೊಟ್ಟಿರುವುದು ನಿನ್ನೆ ಮೊನ್ನೆ ರಾಕ್ಷಸನಾಗಿದ್ದವನು, ಜೈಲುಪಾಲಾಗಬೇಕಾದವನು ಸ್ವೇಚ್ಛಾಚಾರಿಯಾಗಿ ಓಡಾಡಿಕೊಂಡಿರುವುದೇ ಆಗಿದೆ. ಘೋರ ಅಪರಾಧ ಮಾಡಿದವ ಹಣವಂತನಾಗಿದ್ದರೆ ಸುಲಭವಾಗಿ ಹೊರ ಬರುತ್ತಾನೆ ಇಲ್ಲವೇ ಶಿಕ್ಷೆಯಲ್ಲಿಯೇ ಸುಖವಾಗಿರು ತ್ತಾನೆ. ಬಡವನಾಗಿದ್ದರೆ ಸಣ್ಣ ತಪ್ಪುಗಳಿಗೂ ಘೋರ ಶಿಕ್ಷೆ ಅನುಭವಿಸುತ್ತಾನೆ. ಜೈಲಿನೂಟಕ್ಕೂ ಪರದಾಡು ತ್ತಾನೆ. ಈ ಎಲ್ಲವೂ ಕಾನೂನು ಚೌಕಟ್ಟಿನಲ್ಲಿಯೇ ನಡೆಯುವುದರಿಂದ ಕಾನೂನು ನಿಯಮಗಳು ಅಪರಾಧಿಗಳಿಗೆ ಶಿಕ್ಷೆ ನೀಡುತ್ತಿವೆಯಾ? ರಕ್ಷಣೆ ಒದಗಿ ಸುತ್ತಿವೆಯಾ? ತನ್ಮೂಲಕ ಕಾನೂನು ಕ್ರಮಗಳು ನಿರ್ಲಕ್ಷ್ಯಕ್ಕೊಳಗಾಗಿ ಅಪರಾಧಗಳು ಹೆಚ್ಚುತ್ತಿವೆಯಾ? ಅಪರಾಧಿಗಳು ಕಾನೂನನ್ನು ದುರುಪ ಯೋಗಪಡಿಸಿಕೊಳ್ಳುತ್ತಿದ್ದಾರಾ? ದುಷ್ಕೃತ್ಯಗಳು ಮತ್ತು ದುಷ್ಟರ ಹಿಂದೆ ಕಾಣದ ಕೈಗಳಿರುತ್ತವಾ? ಸರ್ವಶಕ್ತ ಕಾನೂನನ್ನು ದುರ್ಬಲಗೊಳಿಸುವ ಶಕ್ತಿ ಯಾವುದು? ಪಾಪ ಕೃತ್ಯಗಳಿಗೆ ಬಲಿಯಾಗಿ ಮಣ್ಣು ಸೇರಿರುವ ಆತ್ಮಗಳು ಮತ್ತು ಅತ್ಯಾಚಾರದಿಂದ ಘಾಸಿಗೊಂಡ ಎಳೆಯ ಮನಸ್ಸುಗಳ ಈ ಪ್ರಶ್ನೆಗಳಿಗೆ ಕಾನೂನುಬದ್ಧ ಉತ್ತರಗಳೇ ಸಾಂತ್ವನ ನೀಡಬೇಕು.

Advertisement

ಸೋಮು ಕುದರಿಹಾಳ

Advertisement

Udayavani is now on Telegram. Click here to join our channel and stay updated with the latest news.

Next