Advertisement

Experts; ಬುದ್ಧಗಯಾ ದೇಗುಲದಡಿ ವಾಸ್ತುಶಿಲ್ಪದ ನಿಧಿ

12:09 AM Jul 14, 2024 | Team Udayavani |

ಪಟ್ನಾ: ಉಪಗ್ರಹದ ಚಿತ್ರಗಳು ಮತ್ತು ಸಮೀಕ್ಷೆ ಆಧರಿಸಿ ಬಿಹಾ ರದ ಬುದ್ಧ ಗಯಾ ದೇಗುಲದಡಿ ವಾಸ್ತುಶಿಲ್ಪದ ನಿಧಿಯೇ ಅಡಗಿದೆ ಎಂದು ತಜ್ಞರು ಹೇಳಿದ್ದಾರೆ. ಮಹಾ ಬೋಧಿ ದೇಗುಲ ಮತ್ತು ಸುತ್ತಲ ಸ್ತೂಪಗಳಡಿ ಅಗಾಧವಾ ದ ವಾಸ್ತುಶಿಲ್ಪ ಸಂಪತ್ತಿದೆ ಎನ್ನಲಾಗಿದೆ.

Advertisement

ಬಿಹಾರದ ಪರಂಪರೆ ಅಭಿವೃದ್ಧಿ ಕೇಂದ್ರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಬ್ರಿಟನ್‌ನ ಕಾರ್ಡಿಫ್ ವಿವಿಯ ಜತೆ ಸೇರಿ ಈ ಸಂಶೋಧನೆಯನ್ನು ಕೈಗೊಂಡಿ ವೆ. ಈಗಿರುವ ಮಹಾಬೋಧಿ ದೇಗುಲವನ್ನೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ. ಆದರೆ ಇದಕ್ಕಿಂತಲೂ ಮಹತ್ತರವಾದ ವಾಸ್ತುಶಿ ಲ್ಪ ಸಂಪತ್ತು ಭೂಮಿಯೊಳಗೆ ಅಡಗಿದೆ ಎಂದು ಈ ಸಂಶೋಧಕರು ಹೇಳಿದ್ದಾರೆ.

ಚೀನದ ಯಾತ್ರಿಕ ಹ್ಯೂಯೆನ್‌ತ್ಸಾಂಗ್‌ ಬರಹಗಳಲ್ಲಿರುವ ಮಹಾ ಬೋಧಿ ದೇಗುಲ ನಿಜವಾಗಲೂ ಅಸ್ತಿತ್ವ ದಲ್ಲಿದೆ. ಇದನ್ನು ಸಂಶೋಧನೆ ಮಾಡಲು ಉತVನನ ಮಾಡಬೇಕು. ಭೂಮಿಯೊಳಗೆ ಇಳಿಯುವ ರಡಾರ್‌ ಬಳಸಿ ವಾಸ್ತುಶಿಲ್ಪ ಪತ್ತೆ ಮಾಡಬಹುದು. ಇದರಿಂದಾಗಿ ಹೊರಗಿರುವ ದೇವಸ್ಥಾನಕ್ಕೆ ಯಾವುದೇ ಅಪಾಯವಿಲ್ಲ ಎಂದು ಬೆಂಗಳೂರಿನ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್‌ಡ್‌ ಸ್ಟಡೀಸ್‌ನ ಸಂಶೋಧಕಿ ಎಂ.ಬಿ. ರಜನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next