Advertisement

ಕೊನೆ ದಿನ ಕಾಣಿಸಿಕೊಂಡ ಏಳರ ಪೋರ ಸ್ಕಿಲ್ಲರ್‌!

12:30 AM Dec 31, 2018 | |

ಮೆಲ್ಬರ್ನ್ ಟೆಸ್ಟ್‌ ವೇಳೆ ಆಸ್ಟ್ರೇಲಿಯ ತಂಡದ ಉಪನಾಯಕನ ಗೌರವ ಸ್ಥಾನ ವಹಿಸಿಕೊಂಡಿದ್ದ 7 ವರ್ಷದ ಬಾಲಕ ಆರ್ಚಿ ಸ್ಕಿಲ್ಲರ್‌ 5ನೇ ದಿನದ ಆಟದ ಅಂತ್ಯದಲ್ಲಿ ಕಾಣಿಸಿಕೊಂಡರು.

Advertisement

ಅನಾರೋಗ್ಯಕ್ಕೆ ಈಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕ ಆರ್ಚಿ ಮೆಲ್ಬರ್ನ್ ಟೆಸ್ಟ್‌ ಆರಂಭಕ್ಕೂ
ಮೊದಲು ತಂಡದ ಉಪನಾಯಕತ್ವ ವಹಿಸಿಕೊಂಡು ಸುದ್ದಿಯಾಗಿದ್ದರು. ಕೆಲವು ಹೊತ್ತು ಆರ್ಚಿ ಆಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಅವರಿಗೆ ಆಡಲು ಅವಕಾಶ ಸಿಗಲಿಲ್ಲ. ಹಾಗಂತ ಕ್ರಿಕೆಟ್‌ ಆಸ್ಟ್ರೇಲಿಯ ಬಾಲಕನನ್ನು ನಿರಾಸೆ ಮಾಡಲಿಲ್ಲ. ಅಂತಿಮ ದಿನ ಭಾರತೀಯ ಆಟಗಾರರಿಗೆ ಹಸ್ತಲಾಘವ ನಡೆಸುವ ಮೂಲಕ ಆರ್ಚಿ ಗಮನ ಸೆಳೆದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next