Advertisement

ಆರ್ಚರಿ ವಿಶ್ವಕಪ್‌ ಭಾರತಕ್ಕೆ ಚಿನ್ನ

12:05 AM Apr 25, 2022 | Team Udayavani |

ಅಂಟಾಲ್ಯ : ಭಾರತೀಯ ತಂಡವು ಆರ್ಚರಿ ವಿಶ್ವಕಪ್‌ನ ಸ್ಟೇಜ್‌ ಒಂದರಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ರಿಕರ್ವ್‌ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲಿ ತರುಣ್‌ದೀಪ್‌ ರೈ ಮತ್ತು ರಿಧಿ ಪೋರ್‌ ಅವರು ಗ್ರೇಟ್‌ ಬ್ರಿಟನ್‌ನ ಎದುರಾಳಿಯನ್ನು ಕೆಡಹಿ ಚಿನ್ನ ಜಯಿಸಿದರು.

Advertisement

ಮೊದಲ ಬಾರಿ ಜತೆಯಾಗಿ ಸ್ಪರ್ಧಿಸಿದ ಒಲಿಂಪಿಯನ್‌ ರೈ ಮತ್ತು ರಿಧಿ ಅವರು ತೀವ್ರ ಹೋರಾಟ ನೀಡಿ 5-4 ಅಂತರದಿಂದ ಗೆದ್ದು ಬಂದರು. ಇದು ಅವರಿಬ್ಬರ ಚೊಚ್ಚಲ ಚಿನ್ನದ ಪದಕವಾಗಿದೆ.

ಭಾರತ ಈ ಮೊದಲು ಪುರುಷರ ಕಂಪೌಂಡು ತಂಡ ಸ್ಪರ್ಧೆಯಲ್ಲಿ ಚಿನ್ನ ಜಯಿಸಿತ್ತು. ಅಭಿಷೇಕ್‌ ವರ್ಮ, ರಜತ್‌ ಚೌಹಾಣ್‌ ಮತ್ತು ಅಮ್‌ ಸೈನಿ ಅವರನ್ನು ಒಳಗೊಂಡ ಭಾರತೀಯ ತಂಡ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ : ಸತತ 8ನೇ ಪಂದ್ಯ ಸೋತ ಮುಂಬೈ : ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಿದ ಲಕ್ನೋ

Advertisement

Udayavani is now on Telegram. Click here to join our channel and stay updated with the latest news.

Next