Advertisement
ನಾವು 75 ದಿನಕ್ಕೂ ಮುನ್ನ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆವು. ಕೇಂದ್ರ ಕ್ರೀಡಾ ಇಲಾಖೆ ಅದನ್ನು ಪುರಸ್ಕರಿಸಿದ್ದು ಕಳೆದ ಸೋಮವಾರ. ಕಡೆಗೆ ಗಡಿಬಿಡಿಯಲ್ಲಿ ಟಿಕೆಟ್‌ಗಳನ್ನು ಖರೀದಿ ಮಾಡಬೇಕಾದ ಪರಿಸ್ಥಿತಿ ಬಂತು. ಆದ್ದರಿಂದ ಕಡೆಯ ಹಂತದಲ್ಲಿ ಸೂಕ್ತ ಬದಲಾವಣೆ ಸಾಧ್ಯವಾಗಲಿಲ್ಲ ಎಂದು ಮಹಾ ಸಿಂಗ್ ವಿವರಿಸಿದ್ದಾರೆ.
ಶನಿವಾರ ಕೊಲಂಬಿಯಾದ ಮೆಡೆಲಿನ್‌ಗೆ ತೆರಳಲು ದೀಪಿಕಾ ಕುಮಾರಿ, ಬೊಂಬಯ್ಲ ದೇವಿ, ಅತನು ದಾಸ್ ಸೇರಿದಂತೆ 22 ಮಂದಿ ಯಿದ್ದ ಭಾರತೀಯ ಬಿಲ್ಗಾರರ ತಂಡ ಹೊರಟು ನಿಂತಿತ್ತು. ಈ ವೇಳೆ ಮಾಹಿತಿ ನೀಡಿದ ಕೆಎಲ್‌ಎಂ ಡಚ್ ವಿಮಾನಯಾನ ಸಂಸ್ಥೆ, ಪಾಕಿಸ್ಥಾನದ ವಾಯುಮಾರ್ಗ ಮುಚ್ಚಿರುವುದರಿಂದ ವಿಮಾನ ಬೊಗೊಟಕ್ಕೆ ತೆರಳುವುದು 2 ಗಂಟೆ ತಡವಾಗುತ್ತದೆ. ಅಷ್ಟರಲ್ಲಿ ಬೊಗೊಟದಿಂದ ಮೆಡೆಲಿನ್‌ಗೆ ತೆರಳಬೇಕಿರುವ ಸಂಪರ್ಕ ವಿಮಾನ ಹೊರಟು ಹೋಗಿರುತ್ತದೆ ಎಂದು ಭಾರತೀಯರಿಗೆ ತಿಳಿಸಿತ್ತು. ಇದನ್ನು ಕೂಡಲೇ ಎಎಐಗೆ ಬಿಲ್ಗಾರರೊಬ್ಬರು ಕರೆ ಮಾಡಿ ತಿಳಿಸಿದ್ದರು. ಆ ಹಂತದಲ್ಲಿ ಪರಿಸ್ಥಿತಿಯನ್ನು ಸರಿಪಡಿಸಲು ಎಲ್ಲ ಯತ್ನ ಮಾಡಿದರೂ, ಫಲಕಾರಿಯಾಗದೇ ಕೂಟಕ್ಕೆ ತೆರಳುವುದನ್ನೇ ರದ್ದು ಮಾಡಬೇಕಾಗಿ ಬಂದಿತ್ತು. ಈ ಅವ್ಯವಸ್ಥೆಗೆ ಕೇಂದ್ರ ಕ್ರೀಡಾ ಕಾರ್ಯ ದರ್ಶಿಗಳೇ ಉತ್ತರ ನೀಡ ಬೇಕು. ಆದರೆ ಇದುವರೆಗೂ ಅವರು ನಮ್ಮ ಕರೆ ಸ್ವೀಕರಿಸುತ್ತಿಲ್ಲ.
ಮಹಾಸಿಂಗ್ , ಭಾರತ ಬಿಲ್ಗಾರಿಕೆ ಸಂಸ್ಥೆ ಕಾರ್ಯದರ್ಶಿ