Advertisement
ರಾಜ್ಯದ ದೇವಸ್ಥಾನಗಳ ಪೂಜಾ ಕಾರ್ಯ ಇತ್ಯಾದಿಗಳ ಕೆಲಸಕ್ಕೆಂದು ಸರಕಾರ ಬಿಡುಗಡೆ ಮಾಡುವ “ತಸ್ತೀಕ್’ ಹಣಕ್ಕೂ ಖಜಾನೆ ಗುಮಾಸ್ತ, ಶಿರಸ್ತೇದಾರರು ಮತ್ತು ಟ್ರಜರಿ ಅಧಿಕಾರಿಗಳು ಪರ್ಶೇಂಟೇಜ್ ಕೇಳುತ್ತಿದ್ದಾರೆಂದು ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಅರ್ಚಕರ ಸಂಘ ಇತ್ತೀಚೆಗೆ ಆರೋಪಿಸಿತ್ತು. ಇದನ್ನು ಸಚಿವ ರಾಮಲಿಂಗಾ ರೆಡ್ಡಿ ಗಮನಕ್ಕೂ ತರಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಆ್ಯಪ್ ಅಭಿವೃದ್ಧಿಪಡಿಸುವ ನಿರ್ಧಾರಕ್ಕೆ ಬಂದಿದೆ.
ಹೊಸ ಮೊಬೈಲ್ ಅಪ್ಲಿಕೇಷನ್‌ನಲ್ಲಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳ ಅರ್ಚಕರ ಮಾಹಿತಿಯನ್ನು ಸಂಪೂರ್ಣವಾಗಿ ಅಳವಡಿಸಲಾಗುತ್ತದೆ. ಜತೆಗೆ ದೇವಸ್ಥಾನದಲ್ಲಿ ಲಭ್ಯವಿರುವ ಪೂಜೆ ಸಹಿತ ಇನ್ನಿತರ ಕಾರ್ಯಗಳ ಫೋಟೋಗಳನ್ನು° ಅರ್ಚಕರು ಅಪ್‌ಲೋಡ್ ಮಾಡಬೇಕಾಗುತ್ತದೆ. ಜಿಪಿಎಸ್ ಅಳವಡಿಸಿರುವುದರಿಂದ ದೇವಸ್ಥಾನದ ಲೋಕೇಷನ್ ಕೂಡ ಅಪ್ಲಿಕೇಷನ್‌ನಲ್ಲಿ ತೋರಿಸಲಿದೆ.