Advertisement

ಬೆಟ್ಟಿಂಗ್‌: 2.80 ಕೋಟಿ ರೂ. ಕಳೆದುಕೊಂಡ ಅರ್ಬಾಜ್‌?

06:00 AM Jun 03, 2018 | |

ಥಾಣೆ: ಬಾಲಿವುಡ್‌ ನಟ, ನಿರ್ಮಾಪಕ, ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್‌ ಖಾನ್‌ ಐಪಿಎಲ್‌ನಲ್ಲಿ ಬೆಟ್ಟಿಂಗ್‌ ನಡೆಸಿದ್ದು ಹೌದೆಂದು ಒಪ್ಪಿಕೊಂಡಿದ್ದಾನೆ ಎಂದು ಥಾಣೆ ಪೊಲೀಸ್‌ ಮೂಲಗಳು ಹೇಳಿವೆ. ಕಳೆದ ನಾಲ್ಕೈದು ವರ್ಷಗಳಿಂದ ಐಪಿಎಲ್‌ನಲ್ಲಿ ತಾನು ಬೆಟ್ಟಿಂಗ್‌ ನಡೆಸುತ್ತಿರುವುದು ಹೌದು, ಆದರೆ 2018ರ ಐಪಿಎಲ್‌ನಲ್ಲಿ ಬೆಟ್ಟಿಂಗ್‌ ಮಾಡಿಲ್ಲವೆಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Advertisement

ಈ ಬಾರಿ ಐಪಿಎಲ್‌ನಲ್ಲಿ ದೇಶದ ಅಗ್ರ 4 ಬುಕ್ಕಿಗಳಲ್ಲಿ ಒಬ್ಬರೆಂದು ಹೇಳಲ್ಪಟ್ಟಿರುವ ಸೋನು ಜಲನ್‌ ಎನ್ನುವವರೊಂದಿಗೆ ಅರ್ಬಾಜ್‌ ಬೆಟ್ಟಿಂಗ್‌ ನಡೆಸಿದ್ದ. ಈ ವೇಳೆ 2.80 ಕೋಟಿ ರೂ. ಕಳೆದುಕೊಂಡಿದ್ದ. ಆದರೆ ಆ ಹಣವನ್ನು ಅರ್ಬಾಜ್‌ ಪಾವತಿ ಮಾಡಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ವೈಮನಸ್ಯ ಉಂಟಾಗಿತ್ತು. ಇತ್ತೀಚೆಗೆ ಸೋನು ಬಂಧನವಾದಾಗ ಇವರಿಬ್ಬರ ನಡುವಿನ ಈ ಘಟನೆ ಬೆಳಕಿಗೆ ಬಂದಿದೆ. ಅದೇ ಕಾರಣಕ್ಕೆ ಥಾಣೆ ಪೊಲೀಸರು ಅರ್ಬಾಜ್‌ ಹೇಳಿಕೆಯನ್ನು ದಾಖ ಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇ 15ರಂದು ವಂಚನೆ ನಿಗ್ರಹ ದಳ (ಆ್ಯಂಟಿ ಎಕ್ಸ್‌ಟಾರ್ಶನ್‌ ಸೆಲ್‌) ಬೆಟ್ಟಿಂಗ್‌ ಜಾಲವನ್ನು ಭೇದಿಸಿ ಹಲವರನ್ನು ಬಂಧಿಸಿತ್ತು. ಅದರಲ್ಲಿ ಅಗ್ರ ಬುಕಿ ಎನ್ನಲಾದ ಸೋನು ಜಲನ್‌ ಕೂಡ ಒಬ್ಬ. ಭಾರತದಲ್ಲಿ ಬೆಟ್ಟಿಂಗ್‌ ಅಕ್ರಮವೆನಿಸಿಕೊಂಡಿದೆ. ಆದರೆ ಈ ಪ್ರಕರಣದಡಿ ಬಂಧಿತರಾದವರಿಗೆ ಶಿಕ್ಷೆ ಮಾತ್ರ ಕಠಿನವಾಗಿಲ್ಲ.

“ಬುಕ್ಕಿಯಿಂದ ಬ್ಲ್ಯಾಕ್‌ಮೇಲ್’
ತನ್ನನ್ನು ಬುಕ್ಕಿ ಸೋನು ಜಲನ್‌ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂಬುದಾಗಿ ಅರ್ಬಾಜ್‌ ಖಾನ್‌ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಜಲನ್‌ ದಿಲ್ಲಿಗೆ ಕರೆಸಿಕೊಂಡ ವೇಳೆ ತೆಗೆದ ಫೋಟೋಗಳನ್ನು ಹಾಗೂ ಕರೆಗಳ ಧ್ವನಿಸುರುಳಿಯನ್ನು ಬಳಸಿ ತನ್ನನ್ನು ಬ್ಲ್ಯಾಕ್‌ವೆುàಲ್‌ ಮಾಡುತ್ತಿದ್ದ ಎಂಬುದಾಗಿ ಅರ್ಬಾಜ್‌ ಹೇಳಿದ್ದಾನೆ. ಆದರೆ ಜಲನ್‌ ಮುಖಾಂತರ ಮಾಡಿದ ಬೆಟ್ಟಿಂಗ್‌ನಲ್ಲಿ ತಾನು ಯಾವುದೇ ಹಣ ತೆಗೆದುಕೊಂಡಿಲ್ಲ ಎಂದಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next