Advertisement
ದೃಶ್ಯವೊಂದರಲ್ಲಿ ನಿಂತಿರುವ ಕಾರೊಂದರ ಹಿಂದುಗಡೆ ನಿಂತಿರುವ ಅರವಿಂದ ಸ್ವಾಮಿ ದೂರವಾಣಿಯಲ್ಲಿ ಮಾತನಾಡುತ್ತಾ ಭಟ್ಕಳ್, ಭಟ್ಕಳ್ ಎನ್ನುವ ದೃಶ್ಯವನ್ನು ಚಿತ್ರೀಕರಿಸಲಾಯಿತು. ಇನ್ನೊಂದು ದೃಶ್ಯದಲ್ಲಿ ನಗರದ ಹಳೇ ಪುರಸಭಾ ಕಟ್ಟಡದ ಒಳಗಿರುವ ತರಕಾರಿ ಮಾರುಕಟ್ಟೆಯೊಳಕ್ಕೆ ಹೋಗಿ ಹೊರ ಬರುವ ದೃಶ್ಯವಿದೆ.
Related Articles
Advertisement
ಪ್ರಮುಖ ಮಲಯಾಳಿ ನಟ ಕುಂಚಾಕೋ ಬೋಬಾನ್, ನಟಿ ಈಶಾ ರೆಬ್ಬಾ ಕೂಡಾ ಹಾಜರಿದ್ದರು. ಎಸ್. ಸಂಜೀವ ಅವರ ಕಥೆಯನ್ನಾಧರಿಸಿ ಆಗಸ್ಟ್ ಸಿನೆಮಾಸ್ ಮತ್ತು ಸಿನಿ ಹಾಲಿಕ್ಸ ನಿರ್ಮಾಣದಡಿಯಲ್ಲಿ ಚಿತ್ರ ಮೂಡಿಬರುತ್ತಿದ್ದು ಪಿಲ್ಲಿನಿ ಟಿ.ಪಿ. ನಿರ್ದೇಶನದಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಆಹ್ ಖಾಸೀಫ್ ಸಂಗೀತ ನಿರ್ದೇಶಕರಾಗಿದ್ದು ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಾರೆ ಕೊರೊನಾದ ನಂತರ ಭಟ್ಕಳದ ಸುತ್ತಮುತ್ತ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಗಿದ್ದು ಜನರಲ್ಲಿ ಹೆಚ್ಚು ಕುತೂಹಲ ಮೂಡಲು ಕಾರಣವಾಗಿತ್ತು.