Advertisement

ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು : ಕೇಂದ್ರಕ್ಕೆ ಮತ್ತೆ ಪ್ರಸ್ತಾವನೆ: ಸಚಿವ ಲಿಂಬಾವಳಿ

01:53 AM Jul 10, 2021 | Team Udayavani |

ಮಂಗಳೂರು: ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆ ಗೊಳಿ ಸುವ ನಿಟ್ಟಿನಲ್ಲಿ ಶೀಘ್ರವೇ ಕೇಂದ್ರ ಸರಕಾರಕ್ಕೆ ಮತ್ತೂಮ್ಮೆ ಸಮಗ್ರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅರಣ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

Advertisement

ತುಳು ಭಾಷೆಗೆ ಮಾನ್ಯತೆ ನೀಡುವ ಬಗ್ಗೆ ಈ ಹಿಂದೆ ಕೇಂದ್ರಕ್ಕೆ ಪ್ರಸ್ತಾವನೆ ಕಳು ಹಿಸ ಲಾಗಿತ್ತು. ಆದರೆ ಅದು ಸಮಗ್ರವಾಗಿಲ್ಲ ಎಂದು ವಾಪಸ್‌ ಕಳುಹಿಸಲಾಗಿತ್ತು. ಆ ಬಳಿಕ ಹಿಂದಿನ ಸರಕಾರ ಗಳು ಆ ವಿಚಾರವಾಗಿ ಮುಂದು ವರಿದಿಲ್ಲ. ಈ ಬಗ್ಗೆ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮತ್ತೆ ಸಮಗ್ರ ವರದಿ ಯನ್ನು ಕೇಂದ್ರಕ್ಕೆ ಕಳುಹಿ  ಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಶುಕ್ರ ವಾರ ಭೇಟಿ ನೀಡಿದ ಬಳಿಕ ಅವರು ತಿಳಿಸಿದರು.

ಬಲವಂತದ ಸ್ಥಳಾಂತರ ಇಲ್ಲ
ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಬುಡಕಟ್ಟು ಮತ್ತು ಗುಡ್ಡಗಾಡು ಜನರನ್ನು ಬಲವಂತವಾಗಿ ನಗರಕ್ಕೆ ಸ್ಥಳಾಂತರಿಸುವ ಉದ್ದೇಶವಿಲ್ಲ. ಆದರೆ ಅವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ. ಅರಣ್ಯದಲ್ಲೇ ಇರಲು ಇಚ್ಛಿಸಿದರೆ ಅಲ್ಲಿಯೇ ಮೂಲ ಸೌಕರ್ಯ ಒದಗಿಸಲಾಗುವುದು. ಹಲವರು ಈಗಾಗಲೇ ನಗರಕ್ಕೆ ಬರಲು ಸಮ್ಮತಿಸಿರುವುದರಿಂದ ಅಂತಹವರಿಗೆ ಪುನರ್ವಸತಿ ಕಲ್ಪಿಸಲಾಗುವುದು. ಇಲ್ಲಿ ಪರಿಸರ ಪೂರಕ ಯೋಜನೆ ಜಾರಿಗೊಳಿಸುವ ಮೊದಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದವರು ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next