ಗಂಗಾವತಿ: ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದ ಕುರಿತು ತಿರುಮಲ ತಿರುಪತಿ ದೇವಸ್ಥಾನ ಎತ್ತಿರುವ ವಿವಾದದ ಕುರಿತು ಸಂಶೋಧನೆಯಾಗಲಿ ಎಂದು ಕನ್ನಡ ಸಂಸ್ಕೃತಿ ಮತ್ತು ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಅವರು ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಬೆಟ್ಟದ ಕೆಳಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇತಿಹಾಸ ಪುರಾಣ ಮಹಾನ್ ಗ್ರಂಥಗಳಲ್ಲಿ ಆನೆಗೊಂದಿ ಹತ್ತಿರ ಇರುವ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದಲ್ಲಿ ಆಂಜನೇಯಸ್ವಾಮಿ ಜನಿಸಿದ ಕುರಿತು ಉಲ್ಲೇಖಿಸಲಾಗಿದೆ. ಟಿಟಿಡಿಯವರು ಯಾವ ಆಧಾರದಲ್ಲಿ ತಿರುಮಲದ ಅಂಜನಾದ್ರಿ ಹನುಮಂತ ಜನಿಸಿದ ಕುರಿತು ಹೇಳಿಕೆ ನೀಡುತ್ತಿದ? ಈ ಕುರಿತು ಸಂಶೋಧನೆಯ ಅಗತ್ಯವಾಗಿದೆ. ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿ ಮೂಲಸೌಕರ್ಯ ಕಲ್ಪಿಸಲು ಅರಣ್ಯ ನಿಯಮದಿಂದ ತಡೆಯಾಗಿದೆ. ಅರಣ್ಯ ಇಲಾಖೆಯ ನಿಯಮಗಳನ್ನು ಪರಿಶೀಲನೆ ನಡೆಸಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ ಎಂದರು.
ಶಾಸಕ ಪರಣ್ಣ ಮುನವಳ್ಳಿ, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಎಚ್.ಸಿ.ಯಾದವ್, ರಾಜೇಶ್ವರಿ, ಗೌರೀಶ ಬಾಗೋಡಿ, ತಹಶಿಲ್ದಾರ ಯು.ನಾಗರಾಜ, ಡಿಎಫೋ ಡಾ.ಹರ್ಷಾಬಾನು, ಶ್ರೀಕೃಷ್ಣದೇವರಾಯ ಇದ್ದರು