Advertisement
ಇದರಿಂದಾಗಿ ದಿಲ್ಲಿ ವ್ಯಾಪ್ತಿಯಲ್ಲಿ ಚುನಾಯಿತ ಸರಕಾರ ಮೇಲೋ ಅಥವಾ ಲೆಫ್ಟಿನೆಂಟ್ ಗವರ್ನರ್ ಆದೇಶ ಹೆಚ್ಚೋ ಎಂಬ ಬಗ್ಗೆ ಎಂಟು ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷ ಮುಕ್ತಾಯವಾಗುವ ಹಂತಕ್ಕೆ ಬಂದಿದೆ.
Related Articles
Advertisement
ಲೆ| ಗವರ್ನರ್ ಒಪ್ಪಿಕೊಳ್ಳಬೇಕು: ದಿಲ್ಲಿಯಲ್ಲಿ ಇರುವ ಚುನಾಯಿತ ಸರಕಾರದ ನಿರ್ಧಾರಗಳನ್ನು ಲೆಫ್ಟಿನೆಂಟ್ ಗವರ್ನರ್ ಕೂಡ ಒಪ್ಪಿಕೊಳ್ಳಬೇಕು. ಅವರು ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿ ದ್ದರೂ ಸಚಿವ ಸಂಪುಟದ ನಿರ್ಣಯ ಗಳನ್ನು ಅನು ಸರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟ ಪಡಿಸಿದೆ. ಲೆಫ್ಟಿನೆಂಟ್ ಗವರ್ನರ್‌ಗೆ ಅಧಿಕಾ ರದ ವ್ಯಾಪ್ತಿ ಇದ್ದರೂ ಸಂಪೂರ್ಣ ದಿಲ್ಲಿ ಸರರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದಿದೆ. ಈ ನೀತಿ ಜಾರಿ ಯಾಗಿಲ್ಲ ಎಂದಾದರೆ ಅಲ್ಲಿ ಇರುವ ಚುನಾ ಯಿತ ಸರಕಾರಕ್ಕೆ ಅರ್ಥವೇ ಇರುವುದಿಲ್ಲ. ದಿಲ್ಲಿ ಕೂಡ ಇತರ ರಾಜ್ಯಗಳಿಗೆ ಸಮಾನವಾಗಿಯೇ ಇದೆ ಎಂದು ನ್ಯಾಯಪೀಠ ಖಚಿತವಾಗಿ ಹೇಳಿದೆ.
ವಿಶೇಷ ಬಾಂಧವ್ಯ: ಕೇಂದ್ರ ಮತ್ತು ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ಸಿಟಿಡಿ)ದ ಸರಕಾರಗಳು ವಿಶೇಷ ಬಾಂಧವ್ಯವನ್ನು ಹೊಂದಿವೆ. ಎರಡು ಸರಕಾರಗಳಿಗೆ ಕೂಡ ಆಡಳಿತ ನಡೆಸಲು ತಮ್ಮದೇ ಆಗಿರುವ ವ್ಯಾಪ್ತಿ ಹೊಂದಿ ರುವುದರ ಜತೆಗೆ ಸಮವರ್ತಿ ಪಟ್ಟಿ (ಕನ್‌ಕರೆಂಟ್ ಲಿಸ್ಟ್- ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾನ ಅಧಿಕಾರ ಹೊಂದಿರುವ) ವಿಚಾರಗಳಲ್ಲಿ ಸಮಾನ ಅಧಿಕಾರ ಹೊಂ ದಿರಲಿವೆ. ಉತ್ತಮ ಒಕ್ಕೂಟ ಸಹಕಾರ ವ್ಯವಸ್ಥೆ ಹೊಂದುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸೀಮಿತ ವ್ಯಾಪ್ತಿಯಲ್ಲಿ ಅಧಿಕಾರ ಚಲಾಯಿಸಬೇಕು ಎಂದಿದೆ.
2015ರಲ್ಲಿ ಕೇಂದ್ರದ ಆದೇಶವೇನು?2015ರ ಮೇ 15ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಆದೇಶದ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಅವರು ಸಾರ್ವಜನಿಕ ಆಡಳಿತ, ಸೇವೆಗಳು, ಪೊಲೀಸ್, ಜಮೀನು ಸಹಿತ ಎಲ್ಲ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ ಎಂದು ಸೂಚಿಸಲಾಗಿತ್ತು. ಅದರ ವಿರುದ್ಧ ಆಪ್ ಸರಕಾರ ಕಾನೂನು ಹೋರಾಟ ನಡೆಸುತ್ತಾ ಬಂದಿತ್ತು. ಕಾರ್ಯದರ್ಶಿ ಎತ್ತಂಗಡಿ
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗು ತ್ತಲೇ ದಿಲ್ಲಿ ಸರಕಾರ ಸೇವೆಗಳ ವಿಭಾಗ ಕಾರ್ಯದರ್ಶಿ ಆಶೀಷ್ ಮೋರೆ ಅವರನ್ನು ಎತ್ತಂಗಡಿ ಮಾಡಿದೆ. ಅವರ ಸ್ಥಾನಕ್ಕೆ ದಿಲ್ಲಿ ಜಲಮಂಡಳಿ ಅಧ್ಯಕ್ಷ, 1995ನೇ ಬ್ಯಾಚ್‌ನ, ಎಜಿಎಂಯುಟಿ ಕೇಡರ್‌ನ ಐಎಎಸ್ ಅಧಿಕಾರಿ ಎ.ಕೆ.ಸಿಂಗ್ ಅವರನ್ನು ನೇಮಿಸಲಾಗಿದೆ.