Advertisement
ಈ ವೇಳೆ ವರ್ಚುಯಲ್ ಸಭೆ ಉದ್ದೇಶಿಸಿ ಮಾತನಾಡಿದ ಅವರು ನಾವೆಲ್ಲರೂ ಕೋವಿಡ್ ನಿಂದ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದೇವೆ, ಇದು ಮಹಾಮಾರಿ ಕೊರೋನಾ ವಿರುದ್ಧದ ಹೋರಾಟ ಎಲ್ಲರು ವೈಯಕ್ತಿಕ ಆರೋಗ್ಯಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
Related Articles
Advertisement
ಮಹದೇವಪುರ ಕ್ಷೇತ್ರದ ವಾರ್ಡ್ ಗಳಲ್ಲಿನ ಜಿಂಕ್ ಹೊಟೇಲ್, ಓಯೋ ಟೌನ್ ಹೌಸ್, ಕೀಸ್ ಹೊಟೇಲ್, ಆಕ್ಟಿವ್ ಹೋಟೆಲ್, ಐವಿರೋಜಾ ರೆಸಾರ್ಟ್ ಸೇರಿದಂತೆ ಗ್ರಾಮೀಣ ಭಾಗದ 9 ಪಂಚಾಯತಿಯಗಳಿಗೆ ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು ಗಳಲ್ಲಿ ಟ್ರ್ಯೆಯಾಜ್ ಹಾಗೂ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮಡಲಾಗಿದ್ದು, ಕೋವಿಡ್ ರೋಗಿಗಳು ಇದರ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಮೇ 21 ರಿಂದ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಆಕ್ಸಿಜನ್ ಕಾನ್ಸ್ ಟ್ರೆಟರ್ಸ್ ಅಳವಡಿಸಲಾಗುವುದು ಎಂದು ಅವರು ಹೇಳಿದರು. ಹೋಮ್ ಐಸೋಲೇಷನ್ ನಲ್ಲಿ ಇದ್ದವರು ಹೊರಗೆ ತಿರಗಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಹೀಗಾಗಿ ಕೈಗೆ ಸೀಲ್ ಹಾಕುವ ವ್ಯವಸ್ಥೆ ಪ್ರಾರಂಭ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಕೋವಿಡ್ ರೋಗಿಗಳಿರುವ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗುತ್ತಿದೆ ಇದೇ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಗಬೇಕು ಎಂದು ಸೂಚಿಸಿ, ಕೋವಿಡ್ ಪಾಸಿಟಿವ್ ಇದ್ದವರ ಮನೆ ಮುಂದೆ ಬಿಳಿ ಧ್ವಜ ಹಾಕಿ, ಅವರು ಕೋವಿಡ್ ನಿಂದ ಗುಣಮುಖ ಆದ ನಂತರ ಅದನ್ನು ತೆಗೆದುಹಾಕಬೇಕು ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಅಲ್ಲದೇ ಒಂದೇ ಭಾಗದಲ್ಲಿ ಹಾಗೂ ಒಂದೇ ಮನೆಯಲ್ಲಿ 5-6 ಕೇಸ್ ಗಳು ಬಂದre ಕಂಟೋನ್ಮೆಂಟ್ ಜೋನ್ ಮಾಡಿ, ಆನ್ ಲೈನ್ ಮೂಲಕ ಅವರಿಗೆ ಬೇಕಾದ ವ್ಯವಸ್ಥೆ ಮಾಡಬಹುದು ಎಂಬ ಸಲಹೆ ನೀಡಿ, ಸಮಿತಿಯ ಎಲ್ಲರೂ ಸೇರಿ ಮತದಾರರ ಪಟ್ಟಿ ಇಟ್ಟುಕೊಂಡು ವ್ಯಾಕ್ಸಿನೇಷನ್ ( ಕೋವಿಡ್ ಲಸಿಕೆ) ಯಾರು ಪಡೆದಿದ್ದಾರೆ, ಯಾರು ಈ ವರೆಗೆ ಪಡೆದಿಲ್ಲ ಎಂಬುದನ್ನು ಮಾಹಿತಿ ಸಂಗ್ರಹಿಸಿ ಅವರು ಯಾವ ಪಿಎಚ್ ಸಿ ವ್ಯಾಪ್ತಿಗೆ ಬರುತ್ತಾರೆ ನೋಡಿಕೊಂಡು ಅವರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಎರಡನೇ ಡೋಸ್ ಪಡೆಯುವವರಿಗೆ ಆದ್ಯತೆ ನೀಡಬೇಕು.18-44 ವಯಸ್ಸು ಮೇಲ್ಪಟ್ಟ ಎಲ್ಲರ ನೋಂದಣಿ ಮಾಡಿಕೊಂಡು ಮೊ.ನಂ ಸಂಗ್ರಹಿಸಬೇಕು ಎಂದು ಅವರು ಸೂಚಿಸಿದರು.
ಕೋವಿಡ್ -19 ಯಿಂದ ಮೃತಪಟ್ಟವರ ಅಂತ್ಯಕ್ರಿಯೆ ಗೆ ಸಹಾಯ ಬೇಕಾದರೆ ಸಹಾಯ ಮಾಡಲಾಗುವುದು, ಅಲ್ಲದೇ ಸ್ಯಾನಿಟೈಜರ್ ಮಾಡುವಾಗ ಯಾವುದೇ ರೀತಿಯ ಪ್ರಚಾರ ನಡೆಯದಂತೆ ಸೇವಾ ಮನೋಭಾವದಿಂದ ಮಾಡಬೇಕು ಎಂದು ಮನವಿ ಮಾಡಿ, ಮಾಸ್ಕ್, ಸ್ಯಾನಿಟೈಜರ್, ಪಲ್ಸ್ ಆಕ್ಸಿಮೀಟರ್ ಬಳಸಬೇಕು ಹಾಗೂ ವಾರ್ ರೂಮ್ ನಲ್ಲಿ ಹೆಚ್ಚು ಜಾಗೃತಿ ವಹಿಸುವ ಮೂಲಕ ವೈಯಕ್ತಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಸಚಿವರು ಧನ್ಯವಾದಗಳನ್ನು ತಿಳಿಸಿದರು.
ಬಳಿಕ ಎಲ್ಲ ವಾರ್ಡ್ ಗಳ ಅಧಿಕಾರಿಗಳು, ಸ್ವಯಂ ಸೇವಕರೊಂದಿಗೆ ಚರ್ಚಿಸಿ, ಕ್ಷೇತ್ರದ ಕೋವಿಡ್ ಪ್ರಕರಣಗಳು ತೆಗೆದುಕೊಂಡ ಕ್ರಮಗಳ ಕುರಿತು ಸುಧೀರ್ಘ ಚರ್ಚೆ ನಡೆಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.