Advertisement

ಅರಂತೋಡು ಗ್ರಾಮಕರಣಿಕರ ಕಚೇರಿ ಕಟ್ಟಡ ಶಿಥಿಲ

02:05 AM Jun 23, 2019 | mahesh |

ಅರಂತೋಡು: ಅರಂತೋಡು ಪೇಟೆಯಲ್ಲಿರುವ ಶತ ಮಾನದಷ್ಟು ಹಳೆಯದಾದ ಗ್ರಾಮ ಕರಣಿಕರ ಕಚೇರಿಗೆ ಇನ್ನೂ ದುರಸ್ತಿ ಭಾಗ್ಯ ಕೂಡಿಬಂದಿಲ್ಲ. ಅರಂತೋಡು ಮುಖ್ಯ ಪೇಟೆ ಯಲ್ಲಿಯೇ ಗ್ರಾಮಕರಣಿಕರ ಕಚೇರಿ ಕಟ್ಟಡ ಇದೆ. ಇದು ಬ್ರಿಟಿಷರ ಕಾಲದ ಕಟ್ಟವಾಗಿದ್ದು, ಶಿಥಿಲಗೊಂಡಿದೆ. ನೆಲದ ಸಿಮೆಂಟ್ ಹಾಸು ಎದ್ದು ಹೋಗಿ ದೊಡ್ಡ ದೊಡ್ಡ ಹೊಂಡಗಳಾಗಿವೆ. ಛಾವಣಿಯ ರೀಪು, ಪಕ್ಕಾಸುಗಳಿಗೆ ಗೆದ್ದಲು ಹಿಡಿದಿದೆ. ಈ ಕಟ್ಟಡದಲ್ಲಿ ಹೆಗ್ಗಣ, ಇಲಿಗಳು ವಾಸ ಮಾಡುತ್ತಿದ್ದು, ಹೆಗ್ಗಣಗಳು ಮಣ್ಣು ಅಗೆದು ಹಾಕಿವೆ.

Advertisement

ದಾಖಲಾತಿ ನಾಶ ಸಾಧ್ಯತೆ
ಅರಂತೋಡು ಗ್ರಾಮಕರಣಿಕರ ಕಚೇರಿ ಯಲ್ಲಿ ಅರಂತೋಡು ಮತ್ತು ತೊಡಿಕಾನ ಗ್ರಾಮದ ಇಬ್ಬರು ಗ್ರಾಮ ಕರಣಿಕರು ಹಾಗೂ ಅವರ ಇಬ್ಬರು ಸಹಾಯಕರು ಕೆಲಸ ಮಾಡುತ್ತಾರೆ. ಎರಡು ಗ್ರಾಮಗಳ ರೈತರ ದಾಖಲಾತಿಗಳು ಈ ಕಚೇರಿಯಲ್ಲಿ ಇದೆ. ಕಟ್ಟಡ ಏನಾದರೂ ಮುರಿದು ಬಿದ್ದರೆ ದಾಖಲಾತಿಗಳು ನಾಶವಾಗುವ ಸಾಧ್ಯತೆ ಇದೆ.

ವಿದ್ಯುತ್‌ ಭಾಗ್ಯ ಇಲ್ಲ
ಈ ಕಟ್ಟಡ ಶತಮಾನದಷ್ಟು ಹಳೆ ಯದಾಗಿದ್ದರೂ ಇದಕ್ಕೆ ಇನ್ನೂ ವಿದ್ಯುತ್‌ ಸಂಪರ್ಕವೇ ದೊರಕದಿರುವುದು ವಿಪರ್ಯಾಸವಾಗಿದೆ. ಸರಕಾರದ ಕಟ್ಟಡವಾಗಿದ್ದರೂ ಇನ್ನೂ ವಿದ್ಯುತ್‌ ಸಂಪರ್ಕ ಆಗಿಲ್ಲ. ವಿದ್ಯುತ್‌ ಇಲ್ಲದೆ ಇಲ್ಲಿಯ ಸಿಬಂದಿ ಕಡುಬೇಸಗೆಯಲ್ಲೂ ಬೆವರಿಳಿಸಿಕೊಂಡು, ಮಳೆಗಾಲದಲ್ಲಿ ಕತ್ತಲೆಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧಿಕಾರಿಗೆ ಮನವಿ
ಕೆಲ ವರ್ಷಗಳ ಹಿಂದೆಯೇ ಅರಂತೋಡು ಗ್ರಾಮಕರಣಿಕರ ಕಟ್ಟಡ ಸಮಸ್ಯೆಯ ಬಗ್ಗೆ ಸ್ಥಳೀಯ ಗ್ರಾಮಕರಣಿ ಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ ಈ ತನಕ ಯಾವುದೇ ಸ್ಪಂದನೆ ದೊರೆತಿಲ್ಲ. ರೈತರು ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ಈ ಕಟ್ಟಡದ ಸಮಸ್ಯೆಯನ್ನು ಗಮನಕ್ಕೆ ತಂದಿದ್ದರೂ ಫ‌ಲ ನೀಡಿಲ್ಲ.

••ತೇಜೇಶ್ವರ್‌ ಕುಂದಲ್ಪಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next