Advertisement

ಜಾನುವಾರುಗಳಿಗೆ ಮತ್ತು ಬರುವ ಇಂಜೆಕ್ಷನ್ ನೀಡಿ ಸಾಗಾಟ… CCTV ಯಲ್ಲಿ ಸೆರೆಯಾಯ್ತು ದೃಶ್ಯ

11:06 AM Jun 08, 2024 | Team Udayavani |

ಅರಂತೋಡು: ರಾತ್ರಿಯ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ದನಗಳಿಗೆ ಅಮಲು ಇಂಜೆಕ್ಷನ್ ನೀಡಿದ ಕಿಡಿಗೇಡಿಗಳು ಸ್ಕಾರ್ಫಿಯೋ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಿದ್ದು, ಈ ದೃಶ್ಯ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ಘಟನೆ ದ‌.ಕ. ಸಂಪಾಜೆ ಗ್ರಾಮದ ಗಡಿಕಲ್ಲಿನಲ್ಲಿ ಜೂ.7ರಂದು ರಾತ್ರಿ ಸಂಭವಿಸಿದೆ.

Advertisement

ಗಡಿಕಲ್ಲು ಮಸೀದಿಯ ಪಕ್ಕದಲ್ಲಿ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ದನಗಳು ರಾತ್ರಿ ವೇಳೆ ಮುಖ್ಯರಸ್ತೆ ಪಕ್ಕದಲ್ಲಿ ಮಲುಗುತ್ತಿದ್ದು, ಜೂ.7ರಂದು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಸುಳ್ಯ ಭಾಗದಿಂದ ಕಪ್ಪು ಬಣ್ಣದ ಸ್ಕಾರ್ಫಿಯೋ ಕಾರಿನಲ್ಲಿ ಬಂದ ಕಿಡಿಗೇಡಿಗಳು ಈ ದನಗಳ ಪೈಕಿ ಎರಡು ದನಗಳಿಗೆ ಅಮಲು ಬರುವ ಇಂಜೆಕ್ಷನ್ ಕೊಟ್ಟು ಬಳಿಕ ತಮ್ಮ ಸ್ಕಾರ್ಫಿಯೋ ವಾಹನದಲ್ಲಿ ತುಂಬಿಸಿಕೊಂಡು ಸುಳ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ.

ಗಡಿಕಲ್ಲು ಮಸೀದಿಯ ಬಳಿ ಮುಖ್ಯರಸ್ತೆ ಬದಿಯಲ್ಲಿ ಎರಡು ಲಾರಿಗಳು ನಿಂತಿದ್ದು, ಸ್ಕಾರ್ಫಿಯೋ ವಾಹನದಲ್ಲಿ ಬಂದವರು ತಮ್ಮ ಸ್ಕಾರ್ಫಿಯೋ ವಾಹನವನ್ನು ಎರಡು ಲಾರಿಯ ಮಧ್ಯಭಾಗದಲ್ಲಿ ನಿಲ್ಲಿಸಿ, ದನಗಳನ್ನು ತುಂಬಿಸಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಮಸೀದಿಯ ಬಳಿ ಅನ್ವರ್ ಎಂಬವರ ಮನೆಯಿದ್ದು, ಅವರ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ: Elephant: ಪಥ ಬದಲಿಸಿದ ಕಾಡಾನೆ… ಕುಚ್ಚೆಜಾಲಿನಲ್ಲಿ ಕೃಷಿ ಹಾನಿಗೈದು ಸವಣೂರಿಗೆ ಎಂಟ್ರಿ!

Advertisement
Advertisement

Udayavani is now on Telegram. Click here to join our channel and stay updated with the latest news.

Next