ಅರಂತೋಡು: ವ್ಯಕ್ತಿಯೋರ್ವ ಹೊಳೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸುಳ್ಯ ತಾಲೂಕು ಅಜ್ಜಾವರದಲ್ಲಿ ಮೇ.18 ರಂದು ನಡೆದಿದೆ.
Advertisement
ಗ್ರಾಮದ ನಿವಾಸಿ ಜಿ.ಪಂ. ಮಾಜಿ ಸದಸ್ಯ, ಬಿಜೆಪಿ ಮುಖಂಡ ನವೀನ್ ರೈ ಮೇನಾಲರು ಮೃತಪಟ್ಟವರು.
ತುದಿಯಡ್ಕ ಬಳಿ ಪಯಸ್ವಿನಿ ನದಿಗೆ ಪುಟ್ ವಾಲ್ ರಿಪೇರಿಗೆಂದು ಇಳಿದಿದ್ದ ಅವರು ನೀರಿನಲ್ಲಿ ಮುಳುಗು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.
Related Articles
ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Advertisement