Advertisement

Aranthodu; ಕಾಲು ಜಾರಿ ಹೊಳೆಗೆ ಬಿದ್ದು ಸಾವು

11:34 AM Jun 28, 2024 | Team Udayavani |

ಅರಂತೋಡು: ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಅರಂತೋಡು ಗ್ರಾಮದ ಭಾಜಿನಡ್ಕದಲ್ಲಿ ಸಂಭವಿಸಿದೆ.

Advertisement

ಬಾಜಿನಡ್ಕದ ಚನಿಯ ಎಂಬವರು ಹೊಳೆಗೆ ಬಿದ್ದು ಮೃತಪಟ್ಟವರು. ಬೆಳಿಗ್ಗೆ 7 ಗಂಟೆಯ ವೇಳೆಗೆ ತನ್ನ ಮನೆ ಸಮೀಪದ ಹೊಳೆಗೆ ಹೋದಾಗ ಕಾಲುಜಾರಿ ಹೊಳೆಗೆ ಬಿದಿದ್ದಾರೆ.

ಚನಿಯ ಅವರು ಹೊಳೆಗೆ ಬೀಳುವುದನ್ನು ಕಂಡ ಮನೆಯವರು ಬೊಬ್ಬೆ ಹಾಕಿದಾಗ ಹತ್ತಿರ ಇರುವ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮನ್ಸ ಮುಗೇರರವರು ಓಡಿ ಬಂದು ನೀರಿಗಿಳಿದು ಚನಿಯರವರನ್ನು ನೀರಿನಿಂದ ಮೇಲೆತ್ತಿದರು. ಆದರೆ ಅವರು ಆಗಲೇ ಮೃತಪಟ್ಟಿದ್ದರೆಂದು ತಿಳಿದು ಬಂದಿದೆ.

ಬಳಿಕ ಅರಂತೋಡು ಸಹಕಾರಿ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಚನಿಯರಿಗೆ 50 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next