ಅರಂತೋಡು: ಲಾರಿ, ಕಾರು, ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಹಾಗೂ ಕಾರು ಚಾಲಕ ಗಾಯಗೊಂಡ ಘಟನೆ ಸುಳ್ಯ-ಮಡಿಕೇರಿ ರಾಜ್ಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಈ ಸಂದರ್ಭದಲ್ಲಿ ಕಾರಿನ ಹಿಂದಿನಿಂದ ಬರುತ್ತಿದ್ದ ಬೈಕ್, ಕಾರಿಗೆ ಡಿಕ್ಕಿಯಾಗಿದ ಪರಿಣಾಮ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು, ಪೆರಾಜೆ ಗ್ರಾಮದ ದೊಡ್ಡಡ್ಕ ದೀನರಾಜ್ ಹಾಗೂ ಕಂಜಿಪಿಲಿ ಪುರುಷೋತ್ತಮ ತೀವ್ರ ಗಾಯಗೊಂಡಿದ್ದಾರೆ ತಿಳಿದು ಬಂದಿದೆ.
ಇನ್ನಂದೆಡೆ ಕಾರು-ಲಾರಿಗೆ ಡಿಕ್ಕಿಯಾದ ತೀವ್ರತೆಗೆ ಕಾರು ಚಾಲಕನಿಗೂ ಅಪಘಾತವಾಗಿ ಗಾಯಗೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ ಸವಾರರ ಪೈಕಿ ಪುರುಷೋತ್ತಮ ಮೂಗಿನ ಭಾಗಕ್ಕೆ ಗಾಯವಾಗಿದ್ದು, ದೀನರಾಜ್ ಎಂಬವರ ದೇಹ ಮತ್ತು ತಲೆಗೆ ಗಾಯವಾಗಿದ್ದು, ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.
ಕಾರು ಬೈಕ್ ನ್ನು ಒವರ್ ಟೇಕ್ ಮಾಡಿ ಮುನ್ನುಗುತ್ತಿದ್ದ ಸಂದರ್ಭ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.