Advertisement

Aranthodu: ಕಾಡಾನೆ ಹಾವಳಿ; ಕೃಷಿಗೆ ಹಾನಿ

10:34 PM Sep 27, 2024 | Team Udayavani |

 

Advertisement

ಅರಂತೋಡು: ಅರಂತೋಡು ಗ್ರಾಮದ ಅಡ್ಕಬಳೆ ಪರಿಸರದಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಕೃಷಿ ನಾಶಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

ಕೆಲವು ದಿನಗಳ ಹಿಂದೆ ಅರಂಬೂರಿನ ಪರಿವಾರಕಾನದಲ್ಲಿ ಕೃಷಿಕರ ತೋಟಕ್ಕೆ ದಾಳಿ ನಡೆಸಿದ್ದ ಆನೆಗಳು ಈಗ ಅರಂತೋಡು ಪರಿಸರದಲ್ಲಿ ಕೃಷಿ ಹಾನಿ ನಡೆಸಿದೆ.

ಸೆ.26ರಂದು ರಾತ್ರಿ ಅಡ್ಕಬಳೆಯ ಗಂಗಾಧರ ಗೌಡ, ಲೀಲಾವತಿ ಅಡ್ಕಬಳೆ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿ, ತೆಂಗು, ಅಡಿಕೆ ಹಾಗೂ ಬಾಳೆ ಕೃಷಿ ನಾಶಪಡಿಸಿರುವುದಾಗಿ ತಿಳಿದುಬಂದಿದೆ.

ಶಿಬಾಜೆಯಲ್ಲೂ ಕೃಷಿಗೆ ಹಾನಿ
ಬೆಳ್ತಂಗಡಿ: ಶಿಬಾಜೆಯ ಡೆಚ್ಚಾರ್‌ ಮನೆ ಉಲಹನ್ನನ್‌ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಅಡಿಕೆ, ಬಾಳೆ, ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಈ ಭಾಗದಲ್ಲಿ 3-4 ವರ್ಷಗಳಿಂದ ನಿರಂತರವಾಗಿ ಕಾಡಾನೆ ದಾಳಿ ಮಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Advertisement

ಅಮ್ಚಿನಡ್ಕ: ತೋಟಕ್ಕೆ ನುಗ್ಗಿದ ಕಾಡಾನೆ
ಪುತ್ತೂರು: ಅಮ್ಚಿನಡ್ಕದ ಮುಕಾರಿಮೂಲೆಯಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿದೆ.
ಆನೆಗುಂಡಿ ರಕ್ಷಿತಾರಣ್ಯ ಮೂಲಕ ಬಂದಿರುವ ಮೂರು ಕಾಡಾನೆಗಳು ಅಬ್ದುಲ್‌ ರಝಾಕ್‌ ಮತ್ತು ಶರತ್‌ ಕುಮಾರ್‌ ರೈ ಅವರ ತೋಟದಲ್ಲಿ ಹಾನಿ ಮಾಡಿದೆ. ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಉಬರಡ್ಕ ಮಿತ್ತೂರು: ತೋಟಕ್ಕೆ ಕಾಡಾನೆ ಲಗ್ಗೆ
ಸುಳ್ಯ: ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಕೃಷಿ ತೋಟಕ್ಕೆ ಗುರುವಾರ ರಾತ್ರಿ ಕಾಡಾನೆ ನುಗ್ಗಿ ಹಾನಿ ಮಾಡಿದೆ. ಗ್ರಾಮದ ಕೂಟೇಲು ವೆಂಕಪ್ಪ ಗೌಡ, ಎನ್‌. ಜನಾರ್ದನ ಗೌಡ, ಎಮ್‌.ಪದ್ಮಯ್ಯ ಗೌಡ, ಎನ್‌.ಜಾನಕಿ ಅವರ ತೋಟದಲ್ಲಿರುವ ಬಾಳೆ, ಅಡಿಕೆ, ತೆಂಗು ಕೃಷಿಯನ್ನು ಹಾನಿ ಮಾಡಿದೆ. ಅರಂತೋಡಿನ ಅಡ್ಕ ಬಳೆ ಪರಿಸರದ ತೋಟಗಳಲ್ಲೂ ಕಾಡಾನೆ ದಾಂಧಲೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next