Advertisement
ಇಲಿ, ಹೆಗ್ಗಣ ಕಾಟಛಾವಣಿಯ ರೀಪು, ಪಕ್ಕಾಸುಗಳಿಗೆ ಗೆದ್ದಲು ಹಿಡಿದಿದೆ. ಈ ಕಟ್ಟಡದಲ್ಲಿ ಹೆಗ್ಗೆಣ, ಇಲಿಗಳು ವಾಸವಾಗಿದ್ದು, ಮಣ್ಣು ಅಗೆದು ಹಾಕಿವೆ.
ಅರಂತೋಡು ಗ್ರಾಮಕರಣಿಕರ ಕಚೇರಿಯಲ್ಲಿ ಅರಂತೋಡು ಮತ್ತು ತೊಡಿಕಾನ ಗ್ರಾಮದ ಇಬ್ಬರು ಗ್ರಾಮಕರಣಿಕರು ಹಾಗೂ ಅವರ ಇಬ್ಬರು ಸಹಾಯಕರು ಕೆಲಸ ಮಾಡುತ್ತಾರೆ. ಎರಡು ಗ್ರಾಮಗಳ ರೈತರ ದಾಖಲಾತಿಗಳು ಈ ಕಚೇರಿಯಲ್ಲಿ ಇವೆ. ಕಟ್ಟಡ ಏನಾದರೂ ಮುರಿದು ಬಿದ್ದರೆ ದಾಖಲಾತಿ ನಾಶವಾಗುವ ಸಾಧ್ಯತೆ ಇದೆ. ದಿನ ನಿತ್ಯ ಅನೇಕ ರೈತರು ಕೆಲಸಗಳಿಗೆ ಈ ಕಚೇರಿಗೆ ಭೇಟಿ ಕೊಡುತ್ತಿದ್ದಾರೆ. ಮಳೆಗಾಲದಲ್ಲಂತೂ ಈ ಕಚೇರಿಯಲ್ಲಿ ಕುಳಿತುಕೊಳ್ಳಲು ಸಿಬಂದಿಗೆ ಭಯವಾಗುತ್ತಿದೆ. ವಿದ್ಯುತ್ ಇಲ್ಲ
ಒಂದು ಶತಮಾನದಷ್ಟು ಹಳೆಯ ಕಟ್ಟಡವಾಗಿದ್ದರೂ ಈ ಕಚೇರಿಗೆ ಇನ್ನೂ ವಿದ್ಯುತ್ ಭಾಗ್ಯ ದೊರೆಯದೇ ಇರುವುದು ವಿಪರ್ಯಾಸ. ವಿದ್ಯುತ್ ಇಲ್ಲದೆ ಸಿಬಂದಿ ಕಡು ಬೇಸಗೆಯಲ್ಲಿ ಸೆಕೆ, ಮಳೆಗಾಲದಲ್ಲಿ ಕತ್ತಲೆಯಲ್ಲಿ ಕೆಲಸ ಮಾಡಬೇಕಿದೆ. ಕಟ್ಟಡವೂ ಸೋರುವುದರಿಂದ ಅಪಾಯ ಹೆಚ್ಚು.
Related Articles
ಕೆಲವು ವರ್ಷಗಳ ಹಿಂದೆಯೇ ಅರಂತೋಡು ವಿಎ ಕಟ್ಟಡದ ಸಮಸ್ಯೆಯ ಬಗ್ಗೆ ಗ್ರಾಮಕರಣಿಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದರೆ ಈ ತನಕ ಸ್ಪಂದನೆ ದೊರೆತಿಲ್ಲ. ರೈತರೂ ಈ ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಸಮಸ್ಯೆಗೆ ಸರಕಾರ ತತ್‌ಕ್ಷಣ ಸ್ಪಂದಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement
ಪರಿಶೀಲಿಸಿದ್ದಾರೆನಮ್ಮ ಕಚೇರಿ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ನಾನು ಪತ್ರ ಬರೆದಿದ್ದೇನೆ. ಬಳಿಕ ಸಂಬಂಧಪಟ್ಟವರು ಬಂದು ಪರಿಶೀಲಿಸಿ ಹೋಗಿದ್ದಾರೆ. ಇದಾಗಿ ವರ್ಷ ಕಳೆದರೂ ಈ ತನಕ ಯಾವುದೇ ಮಾಹಿತಿ ನಮಗೆ ಬಂದಿಲ್ಲ.
– ಗಿರಿಜಾಕ್ಷಿ, ವಿ.ಎ. ತೊಡಿಕಾನ ಹೊಸ ಕಟ್ಟಡವಾಗಲಿ
ಶತಮಾನಗಳಷ್ಟು ಹಳೆಯ ಕಟ್ಟಡ ಇದಾಗಿದ್ದು, ಸರಕಾರ ಇದರ ಬಗ್ಗೆ ಗಮನ ಹರಿಸದಿರುವುದು ಬೇಸರದ ವಿಷಯ. ನಾನೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಎ.ಸಿ.ಗೆ ಅರಂತೋಡು ವಿ.ಎ. ಕಚೇರಿಯ ಸಮಸ್ಯೆಯ ಬಗ್ಗೆ ಬರೆದಿದ್ದೇನೆ.
– ತಾಜುದ್ದೀನ್, ಅರಂತೋಡು ತೇಜೇಶ್ವರ್ ಕುಂದಲ್ಪಾಡಿ