Advertisement

ಕಸಾಪ ಬೈಲಾದಲ್ಲಿ ಮೂಲ ನಿಬಂಧನೆಗಳನ್ನು ವಿಸ್ತರಿಸಿದೆ ಹೊರತು ತೆಗೆದು ಹಾಕಿಲ್ಲ : ಅರಳಿ ನಾಗರಾಜ

08:35 PM Mar 28, 2022 | Team Udayavani |

ಕುಷ್ಟಗಿ: ಕನ್ನಡ ಸಾಹಿತ್ಯ ಪರಿಷತ್ ಮೂಲ ತತ್ವ, ಉದ್ದೇಶ ಹಾಗೂ ಸ್ವರೂಪಕ್ಕೆ ಯಾವೂದೇ ರೀತಿಯಲ್ಲಿ ವ್ಯತ್ಯಯ ಆಗದ ರೀತಿಯಲ್ಲಿ ಇದ್ದ ನಿಯಮಗಳನ್ನು ವಿಸ್ತರಿಸಿ, ಸೇರಿಸಿ ಮಾರ್ಪಾಡು ಮಾಡಲಾಗಿದೆ ಎಂದು ಕಸಾಪ ಬೈಲಾ ತಿದ್ದುಪಡಿ ಸಮಿತಿ ಅಧ್ಯಕ್ಷ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಾಪ ಬೈಲಾದಲ್ಲಿ ಮೂಲ ನಿಭಂಧನೆಗಳನ್ನು ವಿಸ್ತರಿಸಲಾಗಿದೆ ಹೊರತು ತೆಗೆದು ಹಾಕಿಲ್ಲ. ಸದರಿ ಬೈಲಾ ತಿದ್ದುಪಡಿ ವೇಳೆ ತೆಗೆದು ಹಾಕಿದ್ದು ಕಡಿಮೆ ಸೇರಿಸಿದ್ದು ಹೆಚ್ಚು ಎಂದ ಅವರು. ಯಾವೂದು ಅಗತ್ಯವಿಲ್ಲವೋ ಅದನ್ನು ತೆಗೆದು ಹಾಕಿದ್ದೇವೆ ಹೊರತು ಅಗತ್ಯವಿರುವ ಇದ್ದ ನಿಯಮಗಳನ್ನು ತೆಗೆಯಲು ಹೋಗಿಲ್ಲ. ಕನ್ನಡ ನುಡಿ ಪತ್ರಿಕೆ ಪ್ರತಿ ಅಜೀವ ಸದಸ್ಯರಿಗೆ ಪುಕ್ಕಟೆಯಾಗಿ ನೀಡಲಾಗುತ್ತಿತ್ತು ಒಂದೇ ಮನೆಯಲ್ಲಿ ನಾಲ್ಕೈದು ಸದಸ್ಯರಿದ್ದರೆ ನಾಲ್ಕೈದು ಪುಸ್ತಕ ಪ್ರತಿಗಳು ಕಳುಹಿಸಲಾಗುತ್ತಿತ್ತು. ಅಷ್ಟು ಸಾಹಿತ್ಯ ಪರಿಷತ್ ಗೆ ಆರ್ಥಿಕ ಹೊರೆಯಾಗುತ್ತಿತ್ತು. ಇದರ ಬದಲಿಗೆ ಕನ್ನಡ ನುಡಿ ವೆಬ್ ಸೈಟ್ ಗೆ ಹಾಕಿದರೆ ಅದರಲ್ಲಿ ಓದಲು ಸಾದ್ಯವಾಗುತ್ತಿದೆ. ಮುದ್ರಿತ ಪ್ರತಿಗಳು ಬೇಡಿಕೆ ಸಲ್ಲಿಸಿದವರಿಗೆ ವಾಷರ್ಿಕ ಚಂದಾ ನಿಗದಿ ಪಡಿಸಿ ಕನ್ನಡ ನುಡಿ ಪತ್ರಿಕೆ ಕಳುಹಿಸಲಾಗುವುದು. ಇಲ್ಲಿ ಮುದ್ರಿತ ಪ್ರತಿಗೂ ಅವಕಾಶ, ಡಿಜಿಟಲ್ ಪ್ರತಿಗೂ ಅವಕಾಶ ನೀಡಲಾಗಿದೆ ಎಂದರು.

ಕಸಾಪ ಸದಸ್ಯತ್ವ ಪಡೆದವರು ಕ್ರಿಮಿನಲ್ ಹಿನ್ನೆಲೆ ಇರಬಾರದು ಉದ್ದೇಶದ ಹಿನ್ನೆಲೆಯಲ್ಲಿ ಒಂದು ವೇಳೆ ಸದರಿ ಪ್ರಕರಣದಲ್ಲಿ ಬಾಗಿಯಾಗಿದ್ದರೆ ಸದಸ್ಯತ್ವವನ್ನು ಅಮಾನತ್ತಿನಲ್ಲಿಡುವ ಅಧಿಕಾರ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಇರುತ್ತದೆ ಒಂದು ವೇಳೆ ಪ್ರಕರಣ ಇತ್ಯಾರ್ಥವಾದರೆ ಸದಸ್ಯತ್ವ ಮುಂದುವರೆಯಲಿದೆ ಎಂದ ಅವರು, ಮುಂದೆ ಗುರುತಿನ ಚೀಟಿಗೆ ಆಧಾರ ಲಿಂಕ್ ಮಾಡುವ ಉದ್ದೇಶದ ಬಗ್ಗೆ ವಿವರಿಸಿದರು.

ಇದನ್ನೂ ಓದಿ : ಸಿಹಿ ಹಂಚಿದ್ದೇ ತಪ್ಪಾಯಿತು.! ಬಿಜೆಪಿ ಬೆಂಬಲಿಸಿದ್ದಕ್ಕೆ ಮುಸ್ಲಿಂ ಯುವಕನ ಹತ್ಯೆ

ಕಸಾಪ ಸಂಘ ಸಂಸ್ಥೆ ಪ್ರತಿನಿಧಿ ನಬಿಸಾಬ್ ಕುಷ್ಟಗಿ, ಕಸಾಪ ಅಧ್ಯಕ ವೀರೇಶ ಬಂಗಾರಶೆಟ್ಟರ್, ನಾಗರಾಜ್ ಪಟ್ಟಣಶೆಟ್ಟರ್, ಶಿವರಾಜ್ ಪೂಜಾರ, ಮಹೇಶ ಹಡಪದ, ಅಮರೇಗೌಡ ಪಾಟೀಲ, ಮೋಹನಲಾಲ್ ಜೈನ್ ಮತ್ತೀತರಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next