Advertisement

ನಾಡಿಗಾಗಿ ತ್ಯಾಗ ಮಾಡಿದ ಶರಾವತಿ ಸಂತ್ರಸ್ತರ ರೈತರ ಬದುಕು ರೂಪಿಸಲು ಗೃಹ ಸಚಿವರಿಗೆ ಮನವಿ

12:05 PM Aug 30, 2021 | Team Udayavani |

ತೀರ್ಥಹಳ್ಳಿ: ತಾಲೂಕಿನಲ್ಲಿ ಪುನರ್ವಸತಿ ಪಡೆದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಬದುಕುವ ಹಕ್ಕನ್ನು ಪುನಶ್ಚೇತನಗೊಳಿಸಲು ವಾಸದ ಮನೆಗಳಿಗೆ ಹಾಗೂ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡುವ ಕಾನೂನು ಪ್ರಕ್ರಿಯೆಯನ್ನು ಚುರುಕುಗೊಳಿಸಿ ನ್ಯಾಯ ಒದಗಿಸಿಕೊಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ಹಣಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೆನಲ್ಲಿ, ಕರಕುಚ್ಚಿ, ಸಂಕ್ಲಾಪುರ, ಕೊಂಬಿನ ಕೈ ಮತ್ತು ದೆಂಬ್ಲಾಪುರ, ಕೋಣಂದೂರಿನ ಗ್ರಾಮಸ್ಥರು ಮತ್ತು ಶರಾವತಿ ಮುಳುಗಡೆ ಸಂತ್ರಸ್ತರು ಮತ್ತು ರೈತರು ಸೋಮವಾರ ಮನವಿ ನೀಡಿದರು.

Advertisement

ಕಳೆದ ಸುಮಾರು ಎಪ್ಪತ್ತು ವರ್ಷಗಳಿಂದ ಶರಾವತಿ ವಿದ್ಯುತ್ ಯೋಜನೆ ಮನೆ ಮತ್ತು ಸಾಗುವಳಿ ಭೂಮಿಯನ್ನು ಕಳೆದುಕೊಂಡ ಸಂತ್ರಸ್ತರು ನಾಡಿಗಾಗಿ ತ್ಯಾಗ ಮಾಡಿ ಶಿವಮೊಗ್ಗ ಜಿಲ್ಲಾದ್ಯಂತ ಅದರಲ್ಲೂ ತಾಲೂಕಿನ ಹಣಗೆರೆ ಸುತ್ತಮುತ್ತ ಹಾಗೂ ಕೋಣಂದೂರು ದೆಮ್ಲಾಪುರ ಕೆಲವು ಗ್ರಾಮಗಳಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಗಳೆಂದು ವಿಂಗಡಿಸದೇ ಪುರರ್ವಸತಿಯಾಗಿರುತ್ತೇವೆ‌ ಸದರಿ ಭೂಮಿಗಳಲ್ಲಿ ಕಳೆದ ಏಳು ದಶಕಗಳಿಂದ ವಾಸವಿದ್ದು ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ಸ್ವಾಧೀನ ಅನುಭವ ಹೊಂದಿರುತ್ತೇವೆ. ನಮಗೆ ಕಳೆದ ಸುಮಾರು ಎಪ್ಪತ್ತು ವರ್ಷಗಳಿಂದ ಕಾನೂನಿನ ಪ್ರಕ್ರಿಯೆಯನ್ನು ತಾರ್ಕಿಕವಾಗಿ ಮುಕ್ತಾಯಗೊಳಿಸಿ ಅಧಿಕೃತವಾಗಿ ಜಿಲ್ಲಾಢಳಿತದ ತಹಶೀಲ್ದಾರ್ ಮೂಲಕ ಹಕ್ಕು ಪತ್ರಗಳು ಸಿಕ್ಕಿರುವುದಿಲ್ಲ. ಆದರೆ ಈ ಪ್ರಕ್ರಿಯೆ ನಿಕಟಪೂರ್ವ ಗೌರವಾನ್ವಿತ ಮುಖ್ಯಮಂತ್ರಿಗಳು ವಿಶೇಷ ಕೋಶವೊಂದನ್ನು ರಚಿಸಿ ಅಧಿಕಾರಿಗಳನ್ನು ನೇಮಕಗೊಳಿಸಿ ಈ ಸಮಸ್ಯೆ ನ್ಯಾಯ ಒದಗೊಸಲು ಪ್ರಯತ್ನಿಸಿರುವುದು ಶರಾವತಿ ಮುಳುಗಡೆ ಸಂತ್ರಸ್ತರ ಜೀವನದಲ್ಲಿ ಆಶಾಕಿರಿಣ ಮೂಡಿಸಿದೆ. ಈ ಪ್ರಕ್ರಿಯೆಗೆ ವಿಶೇಷ ಪ್ರಯತ್ನ ಮಾಡಿರುವ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಅಶೋಕ್ ನಾಯ್ಕ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದಿಡುತ್ತೇವೆ. ಯಡಿಯೂರಪ್ಪನವರು ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿ ವಿಶೇಷ ಕೋಶವನ್ನು ಸ್ಥಾಪಿಸಿದ ಮೇಲೆ ತಾವು ತಹಶೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳು ಭೂ ದಾಖಲೆಗಳ ಇಲಾಖಾಧಿಕಾರಿಗಳು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಹಲವಾರು ಸಭೆಗಳನ್ನು ಮುಳುಗಡೆ ಸಂತ್ರಸ್ತರು ಇರುವ ಪ್ರದೇಶದಲ್ಲೇ ಆಯೋಜಿಸಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಕಾನೂನಾತ್ಮಕ ಸಮಾಧಾನಕರವಾಗಿ ಇತ್ಯರ್ಥ ಪಡಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸಿರುವುದು ಸಂತ್ರಸ್ತರಿಗೆ ಸಂತೋಷ ತರುವ ವಿಚಾರವಾಗಿದೆ ಈಗಾಗಲೇ ಸಂಬಂಧಪಟ್ಟ ಅನೇಕ ಅಧಿಕಾರಿಗಳು ಒಂದೆರಡು ತಿಂಗಳುಗಳ ಕಾಲ ಸ್ಥಳದಲ್ಲೇ ಠಿಕಾಣಿ ಹೂಡಿ ಜಂಟಿ ಸರ್ವೆ ನಡೆಸಿರುವುದು ಕಳೆದ ಹಲವಾರು ದಶಕಗಳ ಕಾಲ ನಡೆಯದ ಕೆಲಸ ಆಗುತ್ತಿದೆ‌ ಎನ್ನುವ ಸಮಾಧಾನ ನಮ್ಮಲ್ಲಿ ಮೂಡಿಸಿತ್ತು. ಈ ಎಲ್ಲಾ ಪ್ರಕ್ರಿಯೆಗೆ ತಾವು ಬೆಂಗಾಲಾಗಿರುವುದು ನಮಗೆ ಆನೆ ಬಲ ಬಂದಿತ್ತು. ಆದರೆ ಕೆಲವರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಶರಾವತಿ ಮುಳುಗಡೆ ಸಂತ್ರಸ್ತರ ಅಳಲನ್ನು ಹೇಳಿಕೊಳ್ಳಲು ಅವಕಾಶ ನೀಡದೇ ಸರ್ಕಾರದ ಆದಿ ಸೂಚನೆಗೆ ಕೊಡಲಿ ಪೆಟ್ಟು ಕೊಡಿಸಿರುವುದು ನಮಗೆ ಆಘಾತ ನೀಡಿರುತ್ತದೆ. ನಾವೀಗ ದಾರಿ ಕಾಣದೆ ಕಂಗಾಲಾಗಿರುತ್ತೇವೆ ಮುಂದಿನ ಬದುಕು ಹೇಗೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ಇದಕ್ಕೆ ತಾವು ಪರಿಹಾರ ರೂಪಿಸಿ ಕೊಡಬೇಕೆಂದು ಶರಾವತಿ ಮುಳುಗಡೆ ರೈತರ ನೆರವಿಗೆ ಬರಬೇಕು ಎಂದು ನೂರಾರು ಸಂಖ್ಯೆಯಲ್ಲಿ ಸಂತ್ರಸ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ರವರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ :ರಿಷಭ್‌ ‘ಕಾಂತಾರ’ ಶೂಟಿಂಗ್‌ ಶುರು: ಸಪ್ತಮಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next