Advertisement

Araga Jnanendra: ಹಿಂದೂ ಧರ್ಮದಿಂದಲೇ ಎಲ್ಲಾ ಧರ್ಮ ಶಾಂತಿಯಿಂದ ನೆಲೆಗೊಂಡಿವೆ: ಆರಗ

02:36 PM Sep 05, 2023 | Team Udayavani |

ತೀರ್ಥಹಳ್ಳಿ: ವಿಕೃತ ಮನಸ್ಸಿನವರೆಲ್ಲಾ ಸೇರಿ ಐಎನ್ ಡಿಐಎ ಒಕ್ಕೂಟ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಕೇರಳ ಮುಸ್ಲಿಂ ಲೀಗ್ ನ ಸದಸ್ಯರು ಘೋಷಣೆ ಕೂಗಿದ್ದರು. ಹಿಂದುಗಳನ್ನು ಹೊಡೆದು, ದೇವಸ್ಥಾನದ ಮುಂದೆ ನೇಣಿಗೆ ಹಾಕಬೇಕು ಎಂದು ಕೂಗಿದ್ರು‌. ಜಮ್ಮು ಕಾಶ್ಮೀರದ ಓರ್ವ ಸದಸ್ಯ 370 ಆಕ್ಟ್ ರದ್ದು ಮಾಡಲು ಕೇಸ್ ಹಾಕ್ತಾರೆ. ಇಂತವರೆಲ್ಲಾ ಸೇರಿ ಮೋದಿ ಎದುರು ಒಕ್ಕೂಟ ಮಾಡಿಕೊಂಡಿದ್ದಾರೆ. ಇವರು ಅಧಿಕಾರಕ್ಕೆ ಬಂದ್ರೇ ಏನಾಗುತ್ತೇ ಎಂಬ ಸೂಚನೆ ಕೊಡ್ತಿದ್ದಾರೆ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸನಾತನ ಧರ್ಮದ ಬಗ್ಗೆ ತಮಿಳುನಾಡಿನ ಸಚಿವರ ಹೇಳಿಕೆ ಬಗ್ಗೆ ಮಾತನಾಡಿದ ಅವರು ತಮಿಳುನಾಡು ಸಚಿವ ಹಾಗೂ ಸಿಎಂ ಪುತ್ರ ಉದಯನಿಧಿ ಸ್ಟ್ಯಾಲಿನ್ ಹೇಳಿಕೆ ಬಹಳ ಆಶ್ಚರ್ಯವಾಗಿದೆ. ಮದ ಬಂದ ಪ್ರಾಣಿಗಳ ರೀತಿ ವರ್ತನೆ ಮಾಡ್ತಿದ್ದಾರೆ. ಅವರದ್ದು ವಿಕೃತ ಸ್ವಭಾವ. ದೇಶದಲ್ಲಿ ಶೇ.80 ಕ್ಕಿಂತ ಹೆಚ್ಚು ಜನಸ ಸನಾತನ ಧರ್ಮಿಯರು ಇದ್ದಾರೆ.

ಹಿಂದೂ ಧರ್ಮದಿಂದಲೇ ಎಲ್ಲಾ ಧರ್ಮ ಶಾಂತಿಯಿಂದ ನೆಲೆಗೊಂಡಿವೆ. ಆದರೂ, ಕೂಡ ಹಿಂದೂ ಧರ್ಮದ ನಿರ್ನಾಮದ ಬಗ್ಗೆ ಮಾತಾಡ್ತಾರೆ. ಭಾವನಗಳಿಗೆ ಧಕ್ಕೆ ತಂದೂ ಬದುಕಬಹುದು ಎಂಬುದನ್ನು ನಾನು ಖಂಡಿಸುತ್ತೇನೆ ಎಂದರು.

ಜನಸಾಮಾನ್ಯರು ಇದನ್ನು ಹಗುರವಾಗಿ ಪರಿಗಣಿಸಬಾರದು. ಐಎನ್ ಡಿಐಎ ಒಕ್ಕೂಟದಲ್ಲಿನ ಕಾಂಗ್ರೆಸ್ ಸಹಿತ ಎಲ್ಲಾ ಪಕ್ಷಗಳು ಈ ವಿಚಾರದಲ್ಲಿ ಉತ್ತರ ಕೊಡಬೇಕು ಎಂದು ಆರಗ ಜ್ಞಾನೇಂದ್ರ ಆಗ್ರಹಿಸಿದರು.

ಇದನ್ನೂ ಓದಿ: Ramanagar; ಶಿಕ್ಷಣ ವ್ಯವಸ್ಥೆಗೆ ನಮ್ಮದೇ ಆದ ಆಲೋಚನೆಗಳಿವೆ: ಡಿಕೆ ಶಿವಕುಮಾರ್

Advertisement
Advertisement

Udayavani is now on Telegram. Click here to join our channel and stay updated with the latest news.

Next