Advertisement
ಸುದೀರ್ಘ 45 ವರ್ಷಗಳ ಕಾಲ ತಾಲೂಕಿನಾದ್ಯಂತ ಬಿಜೆಪಿ ಪಕ್ಷವನ್ನು ಸಂಘಟಿಸುತ್ತಾ ತಮ್ಮನ್ನು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿರುವ ಶಾಸಕ ಆರಗ ಜ್ಞಾನೇಂದ್ರರು ಜಾತ್ಯಾತೀತ ನೆಲೆಗಟ್ಟಿನ ತೀರ್ಥಹಳ್ಳಿಯಲ್ಲಿ ಬಿಜೆಪಿ ನೆಲೆಯೂರಲು ಭದ್ರ ಬುನಾದಿ ಕಲ್ಪಿಸಿಕೊಟ್ಟಿದ್ದಾರೆ.
Related Articles
Advertisement
ಆದರೆ ಕಳೆದ ಬಾರಿಯೂ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ಲಭಿಸದೇ ಕಾರ್ಯಕರ್ತರಲ್ಲಿ ನಿರಾಸೆ ಮನೆ ಮಾಡಿತ್ತು.ಇದೀಗ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸನ್ಮಾನ್ಯ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ತಾಲೂಕಿನ ಸಮಸ್ತ ಬಿಜೆಪಿ ಕಾರ್ಯಕರ್ತರಿಗೆ ಬಲ ಬಂದಂತಾಗಿದೆ.
ಜ್ಞಾನೇಂದ್ರ ನಡೆದು ಬಂದ ಹಾದಿ….
ತಮ್ಮ ರಾಜಕೀಯ ಜೀವನವನ್ನು ಪ್ರಥಮವಾಗಿ ತಾಲೂಕು ಬೋರ್ಡ್ ಚುನಾವಣೆ ಮೂಲಕ ಆರಂಭಿಸಿದ ಜ್ಞಾನೇಂದ್ರ 1983 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.
1985,1989, ರಲ್ಲಿ ಮತ್ತೆ ಸ್ಪರ್ಧೆ ಮಾಡಿದರೂ ಗೆಲುವು ದೊರಕಲಿಲ್ಲವಾದರೂ ಎಂದಿಗೂ ಅಧಿಕಾರಕ್ಕಾಗಿ ಪಕ್ಷ ತೊರೆದವರಲ್ಲ. ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರ ಜವಾಬ್ದಾರಿ ತಮ್ಮ ಹೆಗಲಿಗೆ ಬಿದ್ದಾಗಲೂ ಸಮರ್ಥವಾಗಿ ಎದುರಿಸಿದ ಆರಗ ಜ್ಞಾನೇಂದ್ರ ಅವರು ಪರಿಷತ್ ಚುನಾವಣೆಗೆ ಸ್ಪರ್ದಿಸಿ ಗೆಲವು ಸಾಧಿಸಿದರು.
ಆನಂತರ ಸತತ ಮೂರು ಭಾರಿ ಗೆಲುವು ಸಾಧಿಸಿದ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲಲಾಲರು ಎನ್ನುವ ದಾಖಲೆ ಹ್ಯಾಟ್ರಿಕ್ ಹೀರೋ ಎನ್ನಿಸಿಕೊಂಡವರು
ಆದರೂ 2008, 2013 ರಲ್ಲಿ ಮತ್ತೆ ಗೆಲುವು ಜ್ಞಾನೇಂದ್ರರಿಂದ ದೂರವೇ ಉಳಿಯಿತು. ಆದರೆ 2018 ರಲ್ಲಿ ತೀರ್ಥಹಳ್ಳಿ ಕ್ಷೇತ್ರದಲ್ಲೇ ದಾಖಲೆಯೆನ್ನುವಂತೆ 22,000 ಅಂತರ ದ ಗೆಲುವು ಸಾಧಿಸಿ ತಮ್ಮ ಕೀರ್ತಿ ಪತಾಕೆಯನ್ನು ಹಾರಿಸಿದವರು.ಇದೀಗ ಸಚೀವರಾಗಿದ್ದಾರೆ.
ಇದನ್ನೂ ಓದಿ : 11 ಗಂಟೆಗೆ ನೂತನ ಸಚಿವರ ಪಟ್ಟಿ ರಿಲೀಸ್ : ಮಧ್ಯಾಹ್ನ ಪ್ರಮಾಣ ವಚನ : ಬೊಮ್ಮಾಯಿ