Advertisement

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಎಸ್ಐಟಿ ತನಿಖೆಗೆ ಕೊಟ್ಟಿರುವುದು ಸಿದ್ದರಾಮಯ್ಯನವರ ನಾಟಕ

03:12 PM Jun 01, 2024 | Team Udayavani |

ತೀರ್ಥಹಳ್ಳಿ : ಹಣ ವರ್ಗಾವಣೆ ಆಗಿರುವುದೇ ಬಹಳ ದೊಡ್ಡ ಹಗರಣದ ಸಂಕೇತ, ಹಾಗಾಗಿ ಸಿಬಿಐ ತನಿಖೆ ಆಗಬೇಕು, ಪ್ರಕರಣದ ತನಿಖೆಯನ್ನು ಮಣ್ಣು ಮುಚ್ಚಲು ಎಸ್ಐಟಿ ರಚನೆ ಮಾಡಿದ್ದಾರೆ. ಎಸ್ಐಟಿ ಎನ್ನುವುದು ಸಿದ್ದರಾಮಯ್ಯನವರ ಒಂದು ನಾಟಕ ಎಂದು ಆರಗ ಜ್ಞಾನೇಂದ್ರ ಹೇಳಿದರು.

Advertisement

ಶನಿವಾರ ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿ ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು ಎಸ್ಐಟಿಯನ್ನು ನಾವು ಒಪ್ಪುವುದಿಲ್ಲ,ಈ ಹಗರಣವನ್ನು ಸಿಬಿಐ ಗೆ ಒಪ್ಪಿಸಬೇಕು ಮತ್ತು ದಲಿತರ ಹಣ ಈ ರೀತಿ ದುರುಪಯೋಗ ಆಗುವುದು ಅಮಾನವೀಯ ಎಂದರು.

ಇವರ ಲೂಟಿಯಿಂದ ಇನ್ನು ಎಷ್ಟು ಮಂದಿ ಅಧಿಕಾರಿಗಳು ಸಾಯುತ್ತಾರೋ ಗೊತ್ತಿಲ್ಲ, ಇವರ ಮೇಲೆ ಮರ್ಡರ್ ಕೇಸ್ ದಾಖಲಿಸಬೇಕು, ಸಚಿವರ ಮೇಲೆ ಮರ್ಡರ್ ಕೇಸ್ ದಾಖಲಿಸಬೇಕು ಅವರಿಂದಲೇ ಸತ್ತಿದ್ದು. ಅವರ ನಿರ್ದೇಶನದಿಂದಲೇ ಹೀಗೆ ಆಗಿದ್ದು, ಅವರಿಗೆ ನಿರ್ದೇಶನ ಕೊಟ್ಟಿದ್ದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು,ತೆಲಂಗಾಣ ಚುನಾವಣೆಗೆ ಹಣವನ್ನು ಲೂಟಿ ಮಾಡಿದ್ದಾರೆ. ಮೊದಲಿಂದಲೂ ಹೇಳುತ್ತಿದ್ದೆವು ಇದು ಎಟಿಎಂ ಸರ್ಕಾರ ಎಂದು ಅದನ್ನು ಅವರು ಸಾಭಿತುಪಡಿಸಿದ್ದಾರೆ ನಮ್ಮ ಹೋರಾಟ ಇನ್ನು ಮುಂದುವರೆಯುತ್ತದೆ ಎಂದರು.

ಇದನ್ನೂ ಓದಿ: Thirthahalli: ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ; ಆರಗ ಜ್ಞಾನೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next