Advertisement

ಸಾವಿಗೆ ಸಾವು ಪರಿಹಾರವಲ್ಲ: ಸಚಿವ ಆರಗ ಜ್ಞಾನೇಂದ್ರ

11:18 PM Jul 30, 2022 | Team Udayavani |

ಶಿವಮೊಗ್ಗ: ಸಾವಿಗೆ ಸಾವು ಅಥವಾ ಎನ್‌ಕೌಂಟರ್‌ಗಳು ಪರಿಹಾರವಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ. ಮಂಗಳೂರು ಈಗ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೊಲೆ ನಡೆದಾಗ ಹಂತಕರನ್ನು ಎನ್‌ಕೌಂಟರ್‌ ಮಾಡಬೇಕು ಎಂದು ಅನ್ನಿಸುವುದು ಸಹಜ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ. ಇವೆಲ್ಲವೂ ನಿಲ್ಲಬೇಕು. ಫಾಸ್ಟ್‌ ಟ್ರಾ Âಕ್‌ ಕೋರ್ಟ್‌ಗೆ ಮನವಿ ಮಾಡುತ್ತಿದ್ದೇವೆ. ಬೇಗ ತೀರ್ಪು ಬಂದು ಬಿಸಿ ಇದ್ದಾಗಲೇ ತಟ್ಟಿದರೆ ಮುಂದೆ ಇಂಥ ಕೃತ್ಯ ನಡೆಸುವವರಿಗೆ ಎಚ್ಚರಿಕೆ ಗಂಟೆಯಾದಂತಾಗುತ್ತದೆ ಎಂದರು.

ಸೈದ್ಧಾಂತಿಕವಾಗಿ ಒಟ್ಟಿಗಿದ್ದೇವೆ
ಸೈದ್ಧಾಂತಿಕವಾಗಿ ನಾವೆಲ್ಲ ಒಂದಾಗಿಯೇ ಇದ್ದೇವೆ. ಎಬಿವಿಪಿಯವರು ನಮ್ಮ ಮನೆಯ ಮುಂದೆ ಪ್ರತಿಭಟನೆ ಮಾಡಿ ಪಿಎಫ್‌ಐ, ಎಸ್‌ಡಿಪಿಐ ಮುಂತಾದ ಮತೀಯ ಸಂಘಟನೆಗಳನ್ನು ನಿಷೇ ಧಿಸುವಂತೆ ಆಗ್ರಹಿಸಿದ್ದಾರೆ. ಪ್ರಾಮಾಣಿಕ ಕಾರ್ಯಕರ್ತರನ್ನು ಕಳೆದುಕೊಂಡಾಗ ಸಹಜವಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ನಮ್ಮ ಮನೆ ಎದುರು ಪ್ರತಿಭಟನೆ ಮಾಡಿದರು ಎಂದಾಕ್ಷಾಣ ಅವರೆಲ್ಲ ಕಾಂಗ್ರೆಸ್‌ ಜತೆಗೆ ಹೋಗುತ್ತಾರೆ ಎಂದರ್ಥವಲ್ಲ ಎಂದರು.

ಸಿದ್ದರಾಮಯ್ಯ ಸಿಎಂ ಆದ ತತ್‌ಕ್ಷಣ ಮತಾಂಧ ಶಕ್ತಿಗಳ ಮೇಲಿದ್ದ 2 ಸಾವಿರ ಕೇಸುಗಳನ್ನು ಹಿಂಪಡೆದರು. ಟಿಪ್ಪು ಜಯಂತಿ ಆರಂಭಿಸುವ ಮೂಲಕ ರಕ್ತಪಾತ ಮಾಡಿಸಿದರು. ಇವರ ವೋಟ್‌ ಬ್ಯಾಂಕ್‌ಗಾಗಿ ಯಾರ್ಯಾರನ್ನೋ ಬೆಳೆಸಿದ್ದಾರೆ. ಸಿದ್ದರಾಮಯ್ಯ ಸರಕಾರವಿದ್ದಾಗ ದುಷ್ಕೃತ್ಯ ನಡೆದರೆ ಕೇಸೇ ದಾಖಲಾಗುತ್ತಿರಲಿಲ್ಲ. ಆದರೆ ನಮ್ಮ ಸರಕಾರ ಕೇಸು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತಿದೆ ಎಂದರು.

Advertisement

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಮಾದರಿಯೇ ಬೇರೆ. ನಮ್ಮ ರಾಜ್ಯದ ಪರಿಸ್ಥಿತಿಯೇ ಬೇರೆ. ನನ್ನ ಸಾಮರ್ಥ್ಯದ ಬಗ್ಗೆ ನನಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಟಿಫಿಕೆಟ್‌ ಅಗತ್ಯವಿಲ್ಲ. ಸಿದ್ದರಾಮಯ್ಯ ಅಸಮರ್ಥರಾಗಿದ್ದರಿಂದಲೇ ಸ್ವಕ್ಷೇತ್ರದಲ್ಲೇ ಸೋತಿದ್ದು ಎಂಬುದನ್ನು ಅವರು ತಿಳಿದಿರಲಿ.
– ಆರಗ ಜ್ಞಾನೇಂದ್ರ, ಗೃಹ ಸಚಿವ

ಪ್ರವೀಣ್‌ ಹತ್ಯೆಗೆ ಸಂಬಂ ಧಿಸಿ ಉತ್ತರಪ್ರದೇಶ ಮಾದರಿಯಲ್ಲಿ ಕಠಿನ ಶಿಕ್ಷೆ ನೀಡಿದರೆ ಸಾಲದು. ಯಾರು ದುಷ್ಕೃತ್ಯ ಮಾಡಿದ್ದಾರೋ ಅವರನ್ನು ಎನ್‌ಕೌಂಟರ್‌ ಮಾಡುವ ಜತೆಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ಮುಂದಾಗಬೇಕು.
– ಎಂ.ಪಿ. ರೇಣುಕಾಚಾರ್ಯ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next