Advertisement

ಅಕ್ರಮ ಗೋ ಸಾಗಾಣಿಕೆ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ  ಆರಗ ಜ್ಞಾನೇಂದ್ರ

06:39 PM Nov 30, 2021 | Team Udayavani |

ತೀರ್ಥಹಳ್ಳಿ: ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ ವಿರುದ್ಧ, ಕಠಿಣ ಕಾನೂನು ಜಾರಿಯಾಗಿದ್ದು, ಅದನ್ನು   ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಲಾಗಿದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Advertisement

ತೀರ್ಥಹಳ್ಳಿ ತಾಲೂಕು, ಮೇಳಿಗೆ ಗ್ರಾಮ ದಿಂದ, ಇಂದು,   ಅಕ್ರಮವಾಗಿ ದನಗಳನ್ನು ಸಾಗಣೆ ತಡೆಯಲು,  ಯತ್ನಿಸಿದ ಇಬ್ಬರು ಯುವಕರನ್ನು, ಪಶು ಕಳ್ಳರು,  ತೀವ್ರವಾಗಿ ಗಾಯಗೊಳಿಸಿ,  ಪರಾರಿಯಾದ ಘಟನೆ ಕುರಿತು ಮಾತನಾಡಿದ ಸಚಿವರು, ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲು, ನಿರ್ದೇಶಿಸಲಾಗಿದೆ, ಎಂದು ತಿಳಿಸಿದ್ದಾರೆ.

ದನಗಳ್ಳರನ್ನು ತಡೆಯಲು ಯತ್ನಿಸಿದ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿದ, ಸಚಿವರು, “ಘಟನೆಯಲ್ಲಿ ಗಾಯಗೊಂಡ ಇಬ್ಬರು ಯುವಕರ ಚಿಕಿತ್ಸೆಗೆ ಮಣಿಪಾಲದಲ್ಲಿ ವ್ಯವಸ್ಥೆ ಮಾಡಲಾಗಿದೆ, ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.

ಮೇಳಿಗೆ ಗ್ರಾಮದಿಂದ, ಪಿಕ್ ಅಪ್ ವಾಹನದಲ್ಲಿ, ದನಗಳನ್ನು ಕೊಂಡೊಯುತ್ತಿದ್ದ ಆರೋಪಿಗಳನ್ನು  ತಡೆಯಲು ಯತ್ನಿಸಿದ, ಕಿರಣ್ (23) ಮತ್ತು ಚರಣ್ (24) ಎಂಬ ಯುವಕರ ಮೇಲೆ ವಾಹನವನ್ನು  ಚಲಾಯಿಸಲು ಯತ್ನಿಸಿದ, ದುಷ್ಕರ್ಮಿಗಳು, ಘಟನೆಯ ನಂತರ ಪರಾರಿಯಾಗಿದ್ದರು.

ಗಾಯಗೊಂಡ, ಇಬ್ಬರೂ ಯುವಕರನ್ನು, ತಕ್ಷಣ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ಸಚಿವರು, ಘಟನೆಯ ವಿಷಯ ತಿಳಿದು, ಆಸ್ಪತ್ರೆಗೆ ಧಾವಿಸಿ, ಯುವಕರನ್ನು ಸಂತೈಸಿದ್ದಲ್ಲದೆ, ಸೂಕ್ತ ಚಿಕಿತ್ಸೆ ದೊರಕಿಸಲೂ ನೆರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next