Advertisement

ಯುವಜನತೆಗೆ ಎನ್‌ಎಂಜೆಬಿ ಆರಾಧ್ಯರು ಪ್ರೇರಣೆ

02:47 PM Feb 18, 2017 | Team Udayavani |

ಹರಿಹರ: ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ರಹಿತ, ಪ್ರಾಮಾಣಿಕ ಹಾಗೂ ಪಾರದರ್ಶಕ ಸೇವೆ ಸಲ್ಲಿಸಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಎನ್‌ಎಂಜೆಬಿ ಆರಾಧ್ಯ ಅವರ ಸಾಧನೆ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ಯುವಜನತೆಗೆ ಪ್ರೇರಣೆಯಾಗಬೇಕು ಎಂದು ವಿಧಾನಸಭೆ ಸ್ಪೀಕರ್‌ ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟರು. 

Advertisement

ನಗರದ ಎಸ್‌ಜೆವಿಪಿ ಸ್ವಾಯತ್ತ ಕಾಲೇಜಿನಲ್ಲಿ ಶ್ರೀಜಗದ್ಗುರು ಪಂಚಾಚಾರ್ಯ ವಿಶ್ವಧರ್ಮ ವಿದ್ಯಾಪೀಠದಿಂದ ಲಿಂ| ವಾಗೀಶ ಪಂಡಿತಾರಾಧ್ಯ ಶ್ರೀಗಳ ಸಂಸ್ಮರಣೆ ನಿಮಿತ್ತ ನೀಡಲಾಗುವ ಪ್ರಸಕ್ತ ವರ್ಷದ “ಸಮನ್ವಯ ಸಿರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸೇವಾಭೂಷಣ ಪ್ರಶಸ್ತಿ ಪ್ರದಾನ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಸತ್ಕರಿಸುವುದು ಸಮಾಜದ ಕರ್ತವ್ಯ. ಇದರಿಂದ ಸಾಧಕರಿಗೆ ಗೌರವಿಸಿದಂತಾಗವುದಲ್ಲದೆ, ಇತರರಿಗೂ ಸಹ ಅವರಂತೆ ಸಾಧನೆ ಮಾಡುವ ಹಂಬಲ ಮೂಡಿಸುತ್ತದೆ. ಅದೆ ರೀತಿ ಎಲ್ಲಾ ಜನವರ್ಗದವರೊಂದಿಗೆ ಬೆರೆತು, ಅಪಾರ ಸಾಮಾಜಿಕ ಕಳಕಳಿಯೊಂದಿಗೆ ಸೇವೆ ಸಲ್ಲಿಸುತ್ತಿರುವ ಆರಾಧ್ಯರಿಗೆ ಸಮನ್ವಯ ಸಿರಿ ಪ್ರಶಸ್ತಿ ನೀಡುತ್ತಿರುವುದು ಯುವ ಪೀಳಿಗೆಗೆ ಪ್ರೇರಣೆಯಾಗಲಿದೆ.

ಎಸ್‌ಜೆಪಿವಿ ವಿದ್ಯಾಪೀಠಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ಶ್ರೀಶೈಲ ಪೀಠದಿಂದ ಪ್ರತಿವರ್ಷ ಮಹನೀಯರಿಗೆ ಸತ್ಕರಿಸುತ್ತಿರುವುದು ಇತರೆ ಪೀಠಗಳಿಗೆ ಮಾದರಿಯಾಗಿದೆ. ಪ್ರಶಸ್ತಿ, ಪುರಸ್ಕಾರಗಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ.

ಸಾಧನೆ ಸಾಧಕರ ಸೊತ್ತು, ಪ್ರಶಸ್ತಿಗಳು ಸಾಧಕರನ್ನು ಹುಡುಕಿಕೊಂಡು ಬರುತ್ತವೆ ಎಂಬುವುದಕ್ಕೆ ಆರಾಧ್ಯ ಅವರ ಜೀವನ ಸಾಕ್ಷಿ ಎಂದರು. ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಡಾ|ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ, ವ್ಯಕ್ತಿಯೊಬ್ಬನನ್ನು ಯೋಗ್ಯತೆಯ ಮೂಲದಲ್ಲಿ, ಪ್ರೋತ್ಸಾಹದ ಮೂಲದಲ್ಲಿ, ಆಶಾ ಮೂಲದಲ್ಲಿ ಮತ್ತು ಭಯ ಮೂಲದಲ್ಲಿ ಸನ್ಮಾನಿಸಲಾಗುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಆರಾಧ್ಯರ ಯೋಗ್ಯತೆ, ಅರ್ಹತೆ ಹಾಗೂ ಸಾಮಾಜಮುಖೀ  ಸೇವೆ ಮನಗೊಂಡು ಈ ಪ್ರಶಸ್ತಿ ನೀಡಲಾಗಿದೆ ಎಂದರು. ಎನ್‌ಎಂಜೆಬಿ ಆರಾಧ್ಯ ಸಮನ್ವಯ ಪ್ರಶಸ್ತಿ ಹಾಗೂ ಎಸ್‌ಜೆಪಿವಿವಿ ಪೀಠದ ನಿರ್ದೇಶಕ ಜೆ.ಡಿ. ಹೆಗ್ಗಪ್ಪನವರ, ವಾಣಿಜ್ಯೋದ್ಯಮಿಗಳಾದ ರಾಮಶ್ರೇಷ್ಠಿ, ಎಚ್‌.ವಿಶ್ವನಾಥಪ್ಪ, ನಿವೃತ್ತ ಪ್ರಾಚಾರ್ಯ ಪ್ರೊ| ಕೆ.ಜಿ. ಗುರುಮೂರ್ತಿ, ನಿವೃತ್ತ ಅಧೀಕ್ಷಕ ವಿ.ಕೆ. ಹಿರೇಮಠ, ನಿವೃತ್ತ ಗ್ರಂಥಪಾಲಕ ಸಹಾಯಕ ಟಿ.ಸಿ.ಬೆಟ್ಟಪ್ಪ ಅವರಿಗೆ ಸೇವಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಕುಂತಲಮ್ಮ ಕಾರ್ಯನಿರ್ವಹಣಾಧಿಧಿ ಕಾರಿ ಪ್ರೊ|ಸಿ.ವಿ. ಪಾಟೀಲ್‌, ಸಾಹಿತಿ ಅ.ಸಿ. ಹಿರೇಮಠ, ಉದ್ಯಮಿ ಜಗದೀಶ್‌, ಗುಡಗುಂಟಿ ಮಠ, ಎಸ್‌.ಜಿ. ವಾಗೀಶ್ವರಯ್ಯ, ಪ್ರಾಂಶುಪಾಲ ಕೆ.ಎಂ.ರುದ್ರಮುನಿ ಸ್ವಾಮಿ ಮತ್ತಿತರರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next