Advertisement
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಕೆ ಕೊಯ್ಲು ಆರಂಭವಾಗುತ್ತಿರುವ ಈ ಸಂಧರ್ಭದಲ್ಲಿ ಕೇಂದ್ರ ಸರ್ಕಾರ 17 ಸಾವಿರ ಟನ್ ಹಸಿ ಅಡಕೆಯನ್ನು ಭೂತಾನ್ ದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಕ್ರಮ ರೈತ ವಿರೋಧಿ ಯಾಗಿದ್ದು ಖಂಡನೀಯವಾಗಿದೆ.
ಕ್ಯಾಮ್ಕೊ ಮ್ಯಾಮ್ಕೋಸ್ ಸೇರಿದಂತೆ ಎಲ್ಲಾ ಅಡಕೆ ಬೆಳೆಗೆ ಸಂಬಂಧಿಸಿದ ಸಂಘಟನೆಗಳ ಮುಖ್ಯಸ್ಥರು ರಾಜಕೀಯವನ್ನು ತೊರೆದು ರೈತರ ನೆರವಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಮಾರುಕಟ್ಟೆಯಲ್ಲಿ ಒಂದೇ ದಿನ ಅಡಕೆ ಧಾರಣೆ 10 ಸಾವಿರ ರೂ ಕಡಿಮೆಯಾಗಿದೆ. ಇಂತಹ ಸಂಕಷ್ಟದ ಸಂಧರ್ಭದಲ್ಲಿ ಸ್ವತಃ ಅಡಕೆ ಬೆಳೆಗಾರರೇ ಆಗಿರುವ ರಾಜ್ಯ ಅಡಕೆ ಪ್ರಕೋಷ್ಠದ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದೂ ಹೇಳಿರುವುದು ಆಶ್ಚರ್ಯದ ಸಂಗತಿಯಾಗಿದೆ. ಆತಂಕದ ಈ ಸಂದರ್ಭದಲ್ಲಿ ಅಡಕೆ ಬೆಳೆಗಾರರು ಸಂಘಟಿತರಾಗಿ ಕೇಂದ್ರ ಸರ್ಕಾರದ ಈ ನಿಲುವನ್ನು ವಿರೋಧಿಸಬೇಕಿದೆ ಎಂದೂ ಹೇಳಿದರು.
Related Articles
Advertisement
ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆಯ ಫಲವಾಗಿ ಜನತೆಯ ಒಲವು ಕಾಂಗ್ರೆಸ್ ಕಡೆಗೆ ವಾಲುತ್ತಿದೆ. ಮಹತ್ವದ ಈ ಸಂದರ್ಭದಲ್ಲಿ ಪಕ್ಷದ ನಿಷ್ಠಾವಂತ ಮತ್ತು ಹಿಂದುಳಿದ ವರ್ಗದ ನಾಯಕರಾದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಉನ್ನತ ಹುದ್ದೆಗೆ ಆಯ್ಕೆಯಾಗುವುದು ಬಹುತೇಕ ಖಚಿವಾಗಿದ್ದು ಪಕ್ಷಕ್ಕೆ ಬಲ ಬಂದಂತಾಗಿದೆ ಎಂದೂ ಹೇಳಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯರಾದ ಹಾರೇಗೋಳಿಗೆ ಪದ್ಮನಾಭ್ ಸೇರಿದಂತೆ ಅನೇಕರು ಇದ್ದರು.