Advertisement

ಸಾದಾತ್‌ ದರ್ಗಾದಲ್ಲಿ ಅರೇಬಿಕ್‌ ಶಾಸನ ಪತ್ತೆ

12:33 PM Oct 06, 2018 | |

ವಿಜಯಪುರ: ಶಾಸನ ಸಂಶೋಧನೆ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಸಂಶೋಧಕ ಹಾಗೂ ಸಿಕ್ಯಾಬ್‌ ಪಪೂ ಕಾಲೇಜಿನ ಉಪನ್ಯಾಸಕ ಡಾ|ಎ.ಎಲ್‌. ನಾಗೂರ ಸಾದಾತ್‌ ಮಸೀದಿ ದರ್ಗಾ ಸ್ಥಳದಲ್ಲಿ ಅಪ್ರಕಟಿತ ಅರೇಬಿಕ್‌ ಶಾಸನವು ಪತ್ತೆ ಮಾಡಿ ಅಧ್ಯಯನ ಮಾಡಿದ್ದಾರೆ. ಸದರಿ ಶಾಸನ ಅರೇಬಿಯಾ ದೇಶದ ತುರೇಮಿ ಪಟ್ಟಣ ಸಮೀಪದ ಹಜರ್‌ ಮೌತ್‌ನಿಂದ ವಿಜಯಪುರ ನಗರಕ್ಕೆ ಆಗಮಿಸಿದ ಖಾದ್ರಿಯಾ ಶಾಖೆಯ ಸೂಫೀ ಸಂತರಾದ ಸೈಯದ್‌ ಶಾಹ ಜಾಫರ ಸಕಾಫ್‌ ಇವರ ನಿಧನದ ಕುರಿತ ಮಾಹಿತಿ ನೀಡುತ್ತದೆ. ಮಹ್ಮದ ಆದಿಲಶಾಹನ ಕಾಲಕ್ಕೆ ಸೇರಿದ ಈ ಶಾಸನದಲ್ಲಿ ಒಟ್ಟು 10 ಪಂಕ್ತಿಗಳನು ಹೊಂದಿದ್ದು, 8ನೇ ಪಂಕ್ತಿ ಮಾತ್ರ ಪರ್ಶಿಯನ್‌ ಭಾಷೆಯಲ್ಲಿದೆ. ಅಲ್ಲಾಹನು ಪರಮದಯಾಳು; ಆತನೊಬ್ಬನೆ ಮೊಹಮ್ಮದರು (ಸ) ಆತನ ಪ್ರವಾದಿಗಳು.

Advertisement

ಅಲ್ಲಾಹನ ಸಂತರ ಮೇಲೆ ಯಾವುದೇ ಭಯ ದುಖಗಳು ಉಂಟಾಗವು, ಇದು ನಿಸ್ಸಂಶಯ. ಅವರ ಸಮಾ ಪವಿತ್ರವಾದುದು. ಗುರುವಿನ ಗುರುವಾದ ಸಾದಾತರ ಮುಖ್ಯಸ್ಥರಾದ ಸೈಯದ ಶಾಹ ಜಾಫರ್‌ ಸಕಾಫ್‌ ಅವರಿಗೆ ಗೌರವಾರ್ಪಣೆ. ಅರೇಬಿಯಾದ ತುರೇಮಿ ಪ್ರದೇಶದಿಂದ ಬಂದು ವಿಜಯಪುರದಲ್ಲಿ ನೆಲೆಸಿದ್ದಾರೆ. ಸೈಯದ್‌ ಅಬ್ದುಲ್ಲಾ ಅವರ ಪುತ್ರರಿವರು. ತುರೇಮಿ ಪಟ್ಟಣದ ಹಜರ್‌ ಮೌತ್‌ನವರು. ಪ್ರವಾದಿ ಮೊಹಮ್ಮದರ (ಸ) ನಂತರದ 28ನೆ ತಲೆಮಾರಿಗೆ ಸೇರಿದವರು. ಸೈಯದ್‌ ಶಾಹ ಜಾ´‚‌ರ್‌ ಸಕಾ´‚‌ರವರು 20, ಜಿಲಾVದಾ 1057ರಲ್ಲಿ(ಹಿ.ಶ) ಸ್ವರ್ಗಸ್ಥರಾದರು ಎಂದು ಶಾಸನದ ವಿವರಿಸುತ್ತದೆ ಎಂದು ಡಾ| ನಾಗೂರ ಹೇಳಿದ್ದಾರೆ. ಸಂತ ಸಯ್ಯದ ಶಾಹ ಜಾ´‚‌ರ್‌ ಸಕಾ´‚‌ರವರು ವಿಜಯಪುರದಲ್ಲಿ ನೆಲೆಸಿದ್ದಕ್ಕೆ ಸಾಕ್ಷಿಯಾಗಿ ಸೂಫೀ ‚ ಮಠ (ಖಾನಖಾ) ಒಂದು ಅಲಿಕ್‌ ರೋಜಾ ಪ್ರದೇಶದಲ್ಲಿ ಇದೆ. ಈ ಶಾಸನದ ಶೋಧ ಕಾರ್ಯದಲ್ಲಿ ಸಾದಾತ್‌ ದರ್ಗಾದ ಸಜ್ಜಾದೆ ನಶೀನ್‌ ಮತ್ತು ಖಾನದಾನಿ ಮುತವಲ್ಲಿಗಳಾದ ಸೈಯದ್‌ ಆಮೀರ ಸಕಾ´‚… ಸಾದಾತ್‌ ಮತ್ತು ಅವರ ವಂಶಸ್ಥ ಅರೇಬಿಕ್‌ ಪಂಡಿತ ಸೈಯದ್‌ ಮುರ್ತುಜಾ ಖಾದ್ರಿ ಸಕಾಫ್‌ ಸಾದಾತ್‌ ಅವರು ನೆರವನ್ನು ನೀಡಿದ್ದಾರೆ ಎಂದು ಶಾಸನ ಮಾಹಿತಿ ನೀಡುತ್ತದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next