Advertisement

ನನ್ನ ವಿರುದ್ಧ ಕಾಣದ ಗುಂಪೊಂದು ಕೆಲಸ ಮಾಡುತ್ತಿವೆ : ಎ.ಆರ್‌.ರೆಹಮಾನ್‌ ಇಂಗಿತ

09:56 PM Jul 25, 2020 | sudhir |

ಮುಂಬೈ: ಎಆರ್‌ ರೆಹಮಾನ್‌ ಅವರು ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಸಾಧಕ. ಅಂತವರಿಗೇ ಅವಕಾಶಗಳ ಕೊರತೆಯಾಗುತ್ತಿದೆ ಎಂದರೆ ಆಶ್ಚರ್ಯವಲ್ಲವೆ. ಇತ್ತೀಚಿನ ಕೆಲವು ವರ್ಷಗಳಿಂದ ಈ ಸಂಗೀಯ ನಿರ್ದೇಶಕನಿಗೆ ಸಿಗುವ ಸಿನೇಮಾಗಳ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿದೆ. ಇದಕ್ಕೆ ಅವರು ತನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವ ಗ್ಯಾಂಗ್‌ ಇದೆ. ಆದ್ದರಿಂದ ತಮಗೆ ಅವಕಾಶಗಳ ಕೊರತೆಯಾಗುತ್ತದೆ ಎಂದು ದೂರಿದ್ದಾರೆ.

Advertisement

ರೇಡಿಯೊ ಮಿರ್ಚಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹೀಗೆ ತಮ್ಮ ವಿಷಾದ ವ್ಯಕ್ತ ಪಡಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಅತೀ ಕಡಿಮೆ ಸಂಖ್ಯೆಯ ಬಾಲಿವುಡ್‌ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದೇನೆ. ಕೆಲವು ದಿನಗಳ ಹಿಂದೆ ಸುಶಾಂತ್‌ ಸಿಂಗ್‌ ರಜಪೂತ್‌ ಅವರ “ದಿಲ್‌ ಬೆಚರಾ’ ಚಿತ್ರದ ಹಂಸಗೀತೆಗೆ ನಾನು ಸಂಗೀತ ಸಂಯೋಜಿಸಿದ್ದೇನೆ. ನಾನು ಒಳ್ಳೆಯ ಚಲನಚಿತ್ರಗಳನ್ನು ಯಾವತ್ತೂ ತಿರಸ್ಕರಿಸಿಲ್ಲ, ಆದರೆ ಒಂದು ಗ್ಯಾಂಗ್‌ ಇದೆೆ, ಅದು ತಪ್ಪು ಗ್ರಹಿಕೆಯಿಂದಾಗಿ ಸುಳ್ಳು ವದಂತಿಗಳನ್ನು ಹರಡುತ್ತಿದೆ ಎಂದಿದ್ದಾರೆ.

ಮುಖೇಶ್‌ ಛಹಾಬ್ರಾ ನನ್ನ ಬಳಿಗೆ ಬಂದಾಗ, ನಾನು ಅವರಿಗೆ ಎರಡು ದಿನಗಳಲ್ಲಿ ನಾಲ್ಕು ಹಾಡುಗಳನ್ನು ನೀಡಿದೆ. ಆ ಸಂದರ್ಭದ ಮಾತುಕತೆಯಲ್ಲಿ “ಸರ್‌, ತುಂಬಾ ಜನರು ನಿಮ್ಮ ಬಳಿ ಹೋಗಬೇಡಿ ಅಂದಿದ್ದರು, ಆದರೂ ನಮ್ಮದೇ ಹಾಡು ಈ ಚಿತ್ರಕ್ಕೆ ಅಗತ್ಯವಾಗಿತ್ತು’ ಅಂದಿದ್ದರು. ಹೀಗಾಗಿ ನನಗೆ ಆಗ ಮನವರಿಕೆ ಆಯಿತು. ಯಾಕೆ ಚಿತ್ರಗಳು ನಮ್ಮ ಬಳಿಗೆ ಸಂಗೀತ ಸಂಯೋಜನೆಗಾಗಿ ಬರುತ್ತಿಲ್ಲವೆಂದು.

ಯಾಕಾಗಿ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ನಾನು ಕೆಲಸವನ್ನು ನಂಬುತ್ತೇನೆ ಮತ್ತು ಎಲ್ಲವೂ ದೇವರಿಂದ ಬಂದಿದೆ ಎಂದು ನಾನು ನಂಬುತ್ತೇನೆ. ಉತ್ತಮ ಚಲನಚಿತ್ರಗಳಿಗೆ ಯಾವತ್ತೂ ನಿಮಗೆ ಸ್ವಾಗತ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಕಾಣದ ಕೈಗಳು ಉತ್ತಮ ಪ್ರತಿಭೆಗೆ ಅಡ್ಡಗಾಲು ಹಾಕಿ, ಅವರನ್ನು ಕುಗ್ಗಿಸುವ ಕಾರ್ಯ ಬಾಲಿವುಡ್‌ನ‌ಲ್ಲಿ ನಡೆಯುತ್ತಲೇ ಇರುತ್ತದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹೀಗೆ ಮಾಡುವುದು ಯಾವತ್ತಿಗೂ ಶ್ರೇಯಸ್ಕರವಲ್ಲ. ಅದು ಭಾರತೀಯ ಚಿತ್ರರಂಗದ ಸಂಗೀತಕ್ಕೆ ಮಾಡುವ ನಷ್ಟವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next