Advertisement
ಬಾಲಿವುಡ್ ಹೀರೋ ರಣವೀರ್ ಸಿಂಗ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಜತೆಗೂಡಿ ಅಹ್ಮದಾಬಾದ್ ಸ್ಟೇಡಿಯಂನಲ್ಲಿ ಹೊಸತೊಂದು ಲೋಕವನ್ನು ತೆರೆದಿರಿಸಿದರು.
ಮೊದಲು ಗಿನ್ನೆಸ್ ದಾಖಲೆಯ ಗಾತ್ರದ ಐಪಿಎಲ್ ಜೆರ್ಸಿಯ ಚಿತ್ತಾರವೊಂದು ಅಂಗಳದಲ್ಲಿ ಅರಳಿತು. ಇದು ಎಲ್ಲ ಐಪಿಎಲ್ ಫ್ರಾಂಚೈಸಿಗಳ ಲಾಂಛನವನ್ನು ಹೊಂದಿತ್ತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೈ ಶಾ ಮತ್ತು ಐಪಿಎಲ್ ಚೇರ್ಮನ್ ಬೃಜೇಶ್ ಪಟೇಲ್ ಇದನ್ನು ಅನಾವರಣಗೊಳಿಸಿ ಗಿನ್ನೆಸ್ ದಾಖಲೆಯ ಪ್ರಮಾಣಪತ್ರ ಸ್ವೀಕರಿಸಿದರು. ಇತ್ತಂಡಗಳ ನಾಯಕರಾದ ಹಾರ್ದಿಕ್ ಪಾಂಡ್ಯ ಮತ್ತು ಸಂಜು ಸ್ಯಾಮ್ಸನ್ ಐಪಿಎಲ್ ಟ್ರೋಫಿಯೊಂದಿಗೆ ನಿಂತು ಪೋಸ್ ಕೊಟ್ಟರು. 8 ದಶಕಗಳ ಯಶೋಗಾಥೆ
ಈ ರಂಗಾರಂಗ್ ಕಾರ್ಯಕ್ರಮದ ನಡುವೆ ಭಾರತದ 8 ದಶಕಗಳ ಕ್ರಿಕೆಟ್ ಯಶಸ್ಸಿನ ಚಿತ್ತಾರವೊಂದು ತೆರೆದು ಕೊಂಡಿತು. ಭಾರತೀಯ ಕ್ರಿಕೆಟಿನ ಎಲ್ಲ ಸಾಧನೆಗಳ ದೃಶ್ಯಾವಳಿ ಮೂಡಿಬಂತು.
Related Articles
Advertisement
ಎ.ಆರ್. ರೆಹಮಾನ್ ಎಂಟ್ರಿರಣವೀರ್ ಶೋ ಬಳಿಕ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ “ವಂದೇ ಮಾತರಂ’ ಹಾಡಿನ ಮೂಲಕ ಎಂಟ್ರಿ ಕೊಟ್ಟರು. ಮೋಹಿತ್ ಚೌಹಾಣ್, ನೀತಿ ಮೋಹನ್, ಬ್ಲೇಜ್, ಶಿವಮಣಿ, ಸಶಾ ತ್ರಿಪಾಠಿ, ಶ್ವೇತಾ ಮೋಹನ್ ಮೊದಲಾದ ಸಂಗೀತಜ್ಞರು ಸಾಥ್ ನೀಡಿದರು. “ಹ್ಯಾವ್ ಎ ಗ್ರೇಟ್ ಗೇಮ್. ಗಾಡ್ ಬ್ಲೆಸ್ ಯು ಆಲ್. ಜೈ ಹೋ’ ಎಂಬ ರೆಹಮಾನ್ ಹಾರೈಕೆಯೊಂದಿಗೆ ಸಮಾರೋಪ ಸಮಾರಂಭಕ್ಕೆ ತೆರೆ ಬಿತ್ತು. 3 ವರ್ಷಗಳ ದೊಡ್ಡ ಬ್ರೇಕ್ ಬಳಿಕ “ಕ್ಲೋಸಿಂಗ್ ಸೆರಮನಿ’ಗೆ ಐಪಿಎಲ್ ಸಾಕ್ಷಿಯಾಯಿತು. ರಣವೀರ್ ಜೋಶ್
ರಣವೀರ್ ಸಿಂಗ್ ಸಮಾರೋಪ ಸಮಾರಂಭದ ಮೊದಲ ಆಕರ್ಷಣೆಯಾಗಿ ದ್ದರು. ಅವರ ಜೋಶ್‌ಗೆ ಕ್ರಿಕೆಟ್ ಪ್ರೇಮಿಗಳು ಭೋರ್ಗರೆಯುತ್ತ ಹೆಜ್ಜೆ ಹಾಕಿದರು. ತಮ್ಮದೇ “83′ ಚಿತ್ರದ “ಜೀತೇಗಾ ಜೀತೇಗಾ’ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದರು. ಮರು ನಿಮಿಷದಲ್ಲೇ ತಮ್ಮ ಹಾಗೂ ಅನುಷ್ಕಾ ಶರ್ಮ ಅಭಿನಯದ “ಬ್ಯಾಂಡ್ ಬಾಜಾ ಭಾರತ್’ ರೊಮ್ಯಾಂಟಿಕ್ ಚಿತ್ರದ “ಎಂವೀ ಎಂವೀ’ ಹಾಡಿಗೆ ಸಹ ನರ್ತಕರೊಂದಿಗೆ ಹೆಜ್ಜೆ ಹಾಕಿದರು. ವಿರಾಟ್ ಕೊಹ್ಲಿ ಕ್ರೀಸ್ ನಡುವೆ ಓಡುವಷ್ಟೇ ವೇಗದಲ್ಲಿ ಕಾಸ್ಟೂಮ್ ಬದಲಿಸಿ ಕೊಂಡ ರಣವೀರ್, ಕೆಜಿಎಫ್ ಡೈಲಾಗ್ ಮೂಲಕ ಕಿಚ್ಚೆಬ್ಬಿಸಿದರು. “ಆರ್‌ಆರ್‌ಆರ್’ನ “ನಾಟು ನಾಟು’, “ಮಾಸ್ಟರ್’ ಚಿತ್ರದ “ವಾಥಿ ಕಮಿಂಗ್’ ಹಾಡಿಗೆ ಕುಣಿದು ಕುಪ್ಪಳಿಸಿದರು. ಸುಡುಮದ್ದಿನ ಆಕರ್ಷಕ ಚಿತ್ತಾರ ಹೊಸ ರಂಗು ತುಂಬಿತು.