Advertisement

10 ಮೀ ಏರ್ ರೈಫಲ್ ಶೂಟಿಂಗ್: ನಿರಾಸೆ ಅನುಭವಿಸಿದ ಅಪೂರ್ವಿ ಚಂಡೆಲಾ, ಇಳಾವೆನಿಲ್

08:48 AM Jul 24, 2021 | Team Udayavani |

ಟೋಕಿಯೋ: ಜಪಾನ್ ನ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಶೂಟರ್ ಗಳಾದ ಅಪೂರ್ವಿ ಚಂಡೆಲಾ ಮತ್ತು ಇಳಾವನ್ನಿಲ ವಾಳರಿವನ್ ನಿರಾಸೆ ಅನುಭವಿಸಿದ್ದಾರೆ.

Advertisement

ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಈ ಇಬ್ಬರು ಶೂಟರ್ ಗಳು ಫೈನಲ್ ಗೆ ಅರ್ಹತೆ ಗಿಟ್ಟಿಸಲು ವಿಫಲರಾದರು. ಅರ್ಹತಾ ಸುತ್ತಿನಲ್ಲಿ ಇಳಾವನ್ನಿಲ ಮತ್ತು ಅಪೂರ್ವಿ ಕ್ರಮವಾಗಿ 16 ಮತ್ತು 36ನೇ ಸ್ಥಾನ ಪಡೆದರು. ಇದರಿಂದಾಗಿ ಫೈನಲ್ ಗೆ ಅರ್ಹತೆ ಪಡೆಯದೆ ನಿರಾಸೆ ಅನುಭವಿಸಿದರು.

2016ರ ರಿಯೋ ಒಲಿಂಪಿಕ್ಸ್ ನಲ್ಲಿ ಅಪೂರ್ವಿ 34ನೇ ಸ್ಥಾನ ಪಡೆದಿದ್ದರು.

ಭಾವನೆಗಳ ಸಮಾಗಮ

“ಯುನೈಟೆಡ್‌ ಬೈ ಎಮೋಶನ್ಸ್‌’-ಇದು ಉದ್ಘಾಟನಾ ಕಾರ್ಯಕ್ರಮದ ಘೋಷವಾಕ್ಯ. ವಿಶ್ವದ 204 ದೇಶಗಳ ಆ್ಯತ್ಲೀಟ್‌ಗಳು ಪಾಲ್ಗೊಳ್ಳುವ ಈ ಕೂಟ ಭಾವನೆಗಳಿಂದಲೇ ಸಮಾಗಮವಾಗಬೇಕು. ಹಲವು ಸಂಕಷ್ಟ, ಸಂಭ್ರಮ, ವೈಶಿಷ್ಟ್ಯ, ವೈಪರೀತ್ಯಗಳಿರುವಾಗ ಕ್ರೀಡಾಸ್ಫೂರ್ತಿ ಎಂಬ ಭಾವವೊಂದೇ ಎಲ್ಲರನ್ನೂ ಒಗ್ಗೂಡಿಸಬೇಕು. ಅದಕ್ಕೆ ಅನುಗುಣ ವಾಗಿಯೇ ಸಾಂಸ್ಕೃತಿಕ, ಐತಿಹಾಸಿಕ ಕಾರ್ಯಕ್ರಮಗಳು ಸರಳವಾಗಿ ನಡೆದವು.

Advertisement

ಉದ್ಘಾಟನಾ ಕಾರ್ಯಕ್ರಮ ಆರಂಭವಾದ ಕೂಡಲೇ ಲೇಸರ್‌ ಕಿರಣಗಳ ಚಿತ್ತಾರ ಆರಂಭವಾಯಿತು. ಒಲಿಂಪಿಕ್ಸ್‌ ಲಾಂಛನದ ವಿವಿಧ ಬಣ್ಣಗಳು ಪ್ರಕಟವಾದವು. ಅಂತಿಮವಾಗಿ ಅದು ಅಭಿಮಾನಿಯಂತೆ ರೂಪು ತಳೆಯಿತು. ಸ್ಟೇಡಿಯಂ ಮೇಲ್ಭಾಗದ ಆಗಸದಲ್ಲಿ 1,824 ಡ್ರೋನ್‌ಗಳ ಮೂಲಕ ಅದ್ಭುತ ಸೃಷ್ಟಿಸಲಾಯಿತು. ಅಲ್ಲಿ ಈ ಬಾರಿಯ ಲಾಂಛನವನ್ನು ಸುಂದರವಾಗಿ ತೋರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next