Advertisement
ದ.ಕ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯ ಫಸಲು 7 ತಿಂಗಳು ಹಿಂದಿನ ಬಿಸಿಲಿಗೆ ಕರಟಿದೆ. ಅಡಿಕೆಯನ್ನೇ ನಂಬಿ ಮುಂದಿನ ವರ್ಷದ ವ್ಯವಹಾರಗಳ ಲೆಕ್ಕಾಚಾರ ಮಾಡುತ್ತಿದ್ದ ಬೆಳೆ ಗಾರರಿಗೆ ಈ ಬಾರಿಯ ಕೊಯ್ಲುಲಿನಲ್ಲಿ ದೊರೆತ ಅಡಿಕೆ ಕಂಡು ಲೆಕ್ಕವೇ ಬುಡಮೇಲಾದ ಸ್ಥಿತಿ ಬಂದೊದಗಿದೆ. 2020- 21ರಲ್ಲಿ 45 ಕ್ವಿಂಟಾಲ್ ಅಡಿಕೆ ಸಿಗುತ್ತಿದ್ದ ತೋಟಗಳಲ್ಲಿ ಈಗ 20 ಕ್ವಿಂಟಾಲ್‌ಗೆ ಇಳಿದಿದೆ. ನಿರಂತರ ಒಂದಲ್ಲ ಒಂದು ರೋಗಗಳು ಇದಕ್ಕೆ ಕಾರಣ ಎಂದು ಪ್ರಗತಿಪರ ಕೃಷಿಕ ವಿಜಯ ಕುಮಾರ್ ಎಂ.ಡಿ. ತಿಳಿಸಿದ್ದಾರೆ.
ಅಡಿಕೆ ಹಣ್ಣಾಗಿ ಕೊಯ್ಯುವ ಸಮಯ ಇದು. ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಹಂತಗಳಲ್ಲಿ ಕೊçಲು ಇರುತ್ತದೆ. ಮೊದಲ ಹಂತದ ಕೊಯ್ಲುಲಿನ ವೇಳೆಯಲ್ಲಿ ಎಲ್ಲ ಅಡಿಕೆ ಹಣ್ಣಾಗಿರುವುದಿಲ್ಲ. ಹಣ್ಣಡಿಕೆ ಜತೆಗೆ ಕಾಯಿಯು ಇರುವ ಕಾರಣ ಸ್ವಲ್ಪ ಪ್ರಮಾಣದ ಅಡಿಕೆ ಮಾತ್ರ ಕೊಯ್ಲುಗೆ ಸಿಗುತ್ತದೆ. ಎರಡನೇ ಹಂತದಲ್ಲಿ ಬಹುತೇಕ ಕಾಯಿ ಅಡಿಕೆ ಹಣ್ಣಾಗುವ ಕಾರಣ ಹೆಚ್ಚು ಅಡಿಕೆ ಸಿಗುತ್ತದೆ. ಕೆಲವೆಡೆ ಮೂರನೇ ಕೊಯ್ಲುಲಿನಲ್ಲಿ ಅತಿ ಹೆಚ್ಚು ಹಣ್ಣಡಿಕೆ ಸಿಗುವುದುಂಟು. ಕೊನೆಯ ಕೊಯ್ಲು ಅಳಿದುಳಿದ ಅಡಿಕೆಗೆ. ಆದರೆ ಈ ಬಾರಿ ಮೂರು, ನಾಲ್ಕು ಕೊಯ್ಲುಲಿನ ಲೆಕ್ಕಾಚಾರ ಮಾಡುವ ಸ್ಥಿತಿಯಲ್ಲಿ ತೋಟಗಳು ಇಲ್ಲ. ಹೆಚ್ಚೆಂದರೆ ಎರಡು ಕೊçಲು. ಮುಂದಿನದ್ದು ಮನಸ್ಸಿನ ಸಮಾಧಾನಕ್ಕಷ್ಟೇ ಮಾಡಬೇಕು. ಈಗಾಗಲೇ ಕೆಲವು ತೋಟಗಳಲ್ಲಿ ಒಂದೇ ಕೊಯ್ಲುಲಿಗೆ ಅಡಿಕೆ ತೆಗೆಯುವ ಕೆಲಸ ಮುಕ್ತಾಯವಾಗಿದೆ ಎನ್ನುತ್ತಾರೆ ಅಡಿಕೆ ಕೊಯ್ಲು ಕೆಲಸ ನಿರ್ವಹಿಸುತ್ತಿರುವ ಸುಳ್ಯದ ವಸಂತ. ತಾಪಮಾನದ ಬಿಸಿ
ಕಳೆದ ಬೇಸಗೆಯಲ್ಲಿ ಅಡಿಕೆ ತೋಟವು ತಾಳಿಕೊಳ್ಳ ಲಾಗದಷ್ಟು ತಾಪಮಾನ ಏರಿಕೆ ಕಂಡ ಕಾರಣ ಕಾಯಿ ಗಟ್ಟುತ್ತಿರುವ ನಳ್ಳಿ ಉದುರಿದ್ದವು.
Related Articles
Advertisement
ಸಿಂಗಲ್ ಚೋಲ್ಶೇ. 50ರಷ್ಟು ಇಳಿಕೆ
ಈ ಬಾರಿ ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ ಬೇಡಿಕೆ ವೃದ್ಧಿಯಾಗಿದೆ. ಅಂದರೆ ಕಳೆದ ವರ್ಷ ಸಂಗ್ರಹಿಸಿಟ್ಟ ಅಡಿಕೆ ಈ ಬಾರಿ ಸಿಂಗಲ್ ಚೋಲ್. ಈಗ ಕೊçಯು ತ್ತಿರುವ ಅಡಿಕೆ ಹೊಸ ಅಡಿಕೆ. ಈಗಲೇ ಒಣಗಿಸಿ ಮಾರಿದರೆ ಮಾರುಕಟ್ಟೆಯಲ್ಲಿ ಅದನ್ನು ಹೊಸ ಅಡಿಕೆ ಎಂದು ಪರಿಗಣಿಸುತ್ತಾರೆ. ಸಂಗ್ರಹಿಸಿಟ್ಟು ಮುಂದಿನ ವರ್ಷ ಹೊಸ ಅಡಿಕೆ ಕೊçಲು ಆಗಿ ಮಾರುಕಟ್ಟೆಗೆ ಬಂದ ಅನಂತರ ಇದನ್ನು ಮಾರುವ ಯೋಚನೆ ಮಾಡಿದ್ದರೆ ಸಿಂಗಲ್ ಚೋಲ್, ಅನಂತರದ ವರ್ಷಕ್ಕೆ ಡಬ್ಬಲ್ ಚೋಲ್ ಎಂದು ನಿರ್ಧರಿಸಲಾಗುತ್ತದೆ. ಆದರೆ ಈ ವರ್ಷದ ಫಸಲಿನ ಲೆಕ್ಕಾಚಾರದ ಪ್ರಕಾರ ಮುಂದಿನ ವರ್ಷಕ್ಕೆ ಸಿಂಗಲ್ ಚೋಲ್ ಶೇ. 50ರಷ್ಟು ಇಳಿಕೆ ಕಾಣಲಿದೆ. ಮುಂದಿನಖರ್ಚಿಗೆ ದಾಸ್ತಾನು ಇರಿಸಲು ಅಡಿಕೆ ಎಲ್ಲಿದೆ ಎನ್ನುತ್ತಾರೆ ಬೆಳೆಗಾರರು. ನೀರಿನ ಕೊರತೆ,ಹಿಂಗಾರ ಒಣಗುವ ಸಮಸ್ಯೆ ಯಿಂದ ಅಡಿಕೆ ಫಸಲು ಕಡಿಮೆ ಆಗಿದೆ. ತಾಪಮಾನವು ಗರಿಷ್ಠ ಇತ್ತು. ಈ ವಿಚಾರ ಇಲಾಖೆಯ ಗಮನಕ್ಕೆ ಬಂದಿದೆ. ಈ ಬಾರಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದ್ದು ಅದರ ನಿವಾರಣೆಗೆ ಇಲಾಖೆ ಈಗಾಗಲೇ ಔಷಧ ವಿತರಿಸಿದೆ.
-ಮಂಜುನಾಥ,
ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ, ದ.ಕ. ಜಿಲ್ಲೆ - ಕಿರಣ್ ಪ್ರಸಾದ್ ಕುಂಡಡ್ಕ