Advertisement

ಗುಮ್ಮಟನಗರಿಯ ಅಭಿಮಾನಿಯ ವಿವಾಹಕ್ಕೆ ಉಡುಗೊರೆ ನೀಡಿದ್ದ ಅಪ್ಪು

05:19 PM Oct 29, 2021 | Team Udayavani |

ವಿಜಯಪುರ: “ಎಂಥ ದುರಂತದ ಸುದ್ದಿ ಕೇಳುವಂತಾಯಿತು ಸರ್. ಕೇವಲ ದಶಕದ ಹಿಂದೆ ಸಾಮಾನ್ಯ ವ್ಯಕ್ತಿಯಾಗಿ ನನ್ನ ವಿವಾಹಕ್ಕೆ ಆಮಂತ್ರ ನೀಡಲು ಹೋಗಿದ್ದ ನನ್ನನ್ನು ಮನೆಯ ಒಳಗೆ ಕರೆಸಿ, ಅನ್ನ ಹಾಕಿ, 11 ಸಾವಿರ ರೂ. ಹಾಗೂ ಟೀ ಶರ್ಟ್ ಉಡುಗೊರೆ ನೀಡಿ ಕಳಿಸಿದ್ದರು. ಸ್ಟಾರ್ ನಟರಾಗಿದ್ದರೂ ಸರಳ ವ್ಯಕ್ತಿತ್ವದ ಅವರನ್ನು ವಿಧಿ ಇಷ್ಟು ಬೇಗ ಕರೆಸಿಕೊಂಡುದು ದುರಂತ”.

Advertisement

ಹೀಗೆ ಕಣ್ಣೀರಾಗುತ್ತಿರುವವರು ನಗರದ ಯುವ ವಕೀಲ ಧರೆಪ್ಪ ಅರ್ಧಾವೂರ. 11-11-2011 ರಂದು ವಿಜಯಪುರ ನಗರದಲ್ಲಿ ನಡೆಯಲಿದ್ದ ತಮ್ಮ ವಿವಾಹಕ್ಕೆ ಆಮಂತ್ರಣ ನೀಡಲು ಧರೆಪ್ಪ ಪುನೀತ್ ಅವರ ಮನೆಗೆ ಹೋಗಿದ್ದರು. ಹಾಗಂತ ಇವರೇನು ಪರಿಚಿತರೂ, ಪ್ರಭಾವಿ ವ್ಯಕ್ತಿಯೂ ಆಗಿರಲಿಲ್ಲ. ಆದರೆ ಧರೆಪ್ಪ ಹಾಗೂ ಜೊತೆಗಿದ್ದ ರವಿ ಪಾಟೀಲ ಅವರನ್ನು ಕಂಡ ಅಪ್ಪು ಏನು ಬಂದಿದ್ದು, ಎಲ್ಲಿಂದ ಬಂದಿದ್ದೀರಿ ಎಂದು ಪ್ರೀತಿಯಿಂದ ಮಾತನಾಡಿಸಿದ್ದಾರೆ. ನಾನು ಯುವ ವಕೀಲನಾಗಿದ್ದು, ವಿಜಯಪುರ ಜಿಲ್ಲೆಯಿಂದ ನನ್ನ ವಿವಾಹದ ಆಮಂತ್ರಣ ನೀಡಲು ಅಲ್ಲಿಂದ ಬೈಕ್ ಮೇಲೆ ಬಂದಿದ್ದೇನೆ ಎಂದು ಧರೆಪ್ಪ ಪರಿಚಯಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಾನು ಹೋಗಬೇಕಿತ್ತು, ಮಿಸ್ ಆಗಿ ಅಪ್ಪು ಹೋದ: ರಾಘವೇಂದ್ರ ರಾಜಕುಮಾರ್

ಯುವಕರ ಈ ಉತ್ಸಾಹ ಕಂಡ ಪುನಿತ್ ತಮ್ಮ ಮನೆ ಒಳಗೆ ಕರೆದೊಯ್ದು, ಧರೆಪ್ಪ ಹಾಗೂ ರವಿ ಅವರಿಗೆ ಪೇಡಾ ಸಿಹಿ ತಿನ್ನಿಸಿ, ಅನ್ನ ಸಾಂಬಾರ ಊಟ ಬಡಿಸಿ, ಉಪಚರಿಸಿದ್ದಾರೆ. ಅಲ್ಲದೇ ತನ್ನನ್ನು ವಿವಾಹಕ್ಕೆ ಆಮಂತ್ರಿಸಲು ಮನೆ ಬಾಗಿಲಿಗೆ ಬಂದ ಯುವಕ ಧರೆಪ್ಪ ಅವರಿಗೆ 11 ಸಾವಿರ ರೂ. ನಗದು ಹಾಗೂ ಒಂದು ಜಾಕಿ ಟೀ-ಶರ್ಟ್ ಉಡುಗೊರೆ ನೀಡಿದ್ದಾರೆ. ಅಲ್ಲದೇ ಸದ್ಯ ಸಕಲೇಶಪುರದಲ್ಲಿ ಅಣ್ಣಾಬಾಂಡ್ ಸಿನಿಮಾ ಚಿತ್ರೀಕರಣದ ಒತ್ತಡದಲ್ಲಿದ್ದೇನೆ. ಬಿಡುವು ಮಾಡಿಕೊಂಡು ನಿನ್ನ ಮದುವೆಗೆ ಬರಲು ಯತ್ನಿಸುತ್ತೇನೆ ಎಂದು ಹಾರೈಸಿ, ಕಳಿಸಿದ್ದರು.

Advertisement

ವಿವಾಹದ ದಿನ ಪುನಿತ್ ಬರಲಾಗಿರಲಿಲ್ಲ. ಆದರೆ ಬೆಂಗಳೂರಿನಲ್ಲಿರುವ ತಮ್ಮ ಉದ್ಯಮಿ ಸ್ನೇಹಿತ ಅನಿಲ ಎಂಬವರನ್ನು ತನ್ನ ಪರವಾಗಿ ಈ ವಿವಾಹಕ್ಕೆ ಹೋಗಿ ವಧು-ವರರಿಗೆ ಶುಭ ಹಾರೈಸಿ ಬರುವಂತೆ ಕಳಿಸಿದ್ದರು. ಅಪ್ಪು ಪರವಾಗಿ ವಿವಾಹಕ್ಕೆ ಆಗಮಿಸಿದ್ದ ಅಪ್ಪು ಸ್ನೇಹಿತ ಅನಿಲ್ ಅಪ್ಪು ಅವರು ನಿಮಗಾಗಿ ಉಡುಗೊರೆ ನೀಡಿದ್ದಾರೆ ಎಂದು ಪಾಕೇಟ್ ನೀಡಿ ಹೋಗಿದ್ದರು. ನಂತರ ತೆರೆದು ನೋಡಿದರೆ ಅದರಲ್ಲಿ 5 ಸಾವಿರ ರೂ. ನಗದು ಉಡುಗೊರೆ ಇತ್ತು ಎಂದು ಧೆರಪ್ಪ ಅಪ್ಪು ಅವರನ್ನು ಭೇಟಿಯಾಗಿದ್ದ ಆ ಘಳಿಗೆಯನ್ನು ನೆನಪು ಮಾಡಿಕೊಂಡು. ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next