Advertisement

‘ಜೇಮ್ಸ್’ ಚಿತ್ರ ವಿಶ್ವದಾಖಲೆ ಆಚರಿಸಿಲೆಂದು ಪುಟಾಣಿಗಳು, ಪೋಷಕರಿಂದ 525 ಕಿ.ಮೀ ಪಾದಯಾತ್ರೆ

01:26 PM Mar 14, 2022 | Team Udayavani |

ನೆಲಮಂಗಲ: ಕರ್ನಾಟಕ ರತ್ನ, ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನ, ಅವರು ಗೊತ್ತಿಲ್ಲದೆ ಮಾಡಿದ ನೆರವು ಕೋಟ್ಯಾಂತರ ಜನರಲ್ಲಿ ಇಂದಿಗೂ ಕಣ್ಮುಂದೆ ಇದೆ.

Advertisement

ಅಪ್ಪು ಕೊನೆಯ ಸಿನಿಮಾ ಜೇಮ್ಸ್ ವಿಶ್ವದಾಖಲೆ ಮಾಡಲೆಂದು ಇಲ್ಲೊಂದು ಕುಟುಂಬ ಕಾಲ್ನಡಿಗೆ ಮೂಲಕ ವಿಜಯಪುರದಿಂದ ಬೆಂಗಳೂರು ನಗರಕ್ಕೆ ಬರುತ್ತಿದೆ. ಫೆಬ್ರವರಿ 25 ರಂದು ಆರಂಭ ಮಾಡಿದ ಪಾದಯಾತ್ರೆ ಇಂದು ನೆಲಮಂಗಲ ಮೂಲಕ ಕಂಠೀರವ ಸ್ಟುಡಿಯೋ ತಲುಪಿ ಅಪ್ಪು ಸಮಾಧಿಗೆ ಪೂಜೆಸಲ್ಲಿ ಸಲಿಸದ್ದಾರೆ.

ಈ ಕುಟುಂಬ ಪಾದಯಾತ್ರೆ ಜೊತೆಗೆ ಜನಜಾಗೃತಿ ಮೂಡಿಸುತ್ತಿದೆ. ವಿಜಯಪುರದ ಧರೆಪ್ಪ ಅರ್ದಾವೂರ್ ಮತ್ತು ವಿದ್ಯಾರಾಣಿ ದಂಪತಿಗಳು ಏಳು ಮಕ್ಕಳ ಜೊತೆಗೆ ಬರೋಬ್ಬರಿ ಸುಮಾರು 525 ಕಿ.ಮೀ ಪಾದಯಾತ್ರೆ ಮಾಡಿದ್ದಾರೆ. ರಸ್ತೆಯದ್ದಕ್ಕೂ ಪುನೀತ್ ಅಭಿನಯದ ಚಲನಚಿತ್ರ ಗೀತೆಗಳ ಸಾರದೊಂದಿಗೆ ಹೆಜ್ಜೆ ಹಾಕುತಿದ್ದಾರೆ.

ಇನ್ನೂ ಪುನೀತ್ ರಾಜ್ ಕುಮಾರ್ ಕನಸಿನಂತೆ ಕನ್ನಡ ಶಾಲೆಗಳ ಅಭಿವೃದ್ಧಿ ಜಾಗೃತಿ ಜಾಥಾ ಅಂಗಾಂಗಗಳ ದಾನ ಮತ್ತು ನೇತ್ರದಾನ ಕುರಿತು ಜನಜಾಗೃತಿಯನ್ನು ಪಾದಯಾತ್ರೆಯುದ್ದಕೂ ಮಾಡುತ್ತರಿದ್ದಾರೆ.

ನೆಲಮಂಗಲ ನಗರದ ಪವಾಡ ಬಸವಣ್ಣ ದೇವರ ಮಠದಲ್ಲಿ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಾದ ಪಡೆದು ಬೆಂಗಳೂರ ಕಡೆ ಪ್ರಯಾಣ ಬೆಳೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next