Advertisement

ಕನಿಷ್ಠ ವೇತನ ಮಸೂದೆಗೆ ಒಪ್ಪಿಗೆ

08:35 AM Jul 27, 2017 | Team Udayavani |

ಹೊಸದಿಲ್ಲಿ: ಕಾರ್ಮಿಕ ಕಾಯ್ದೆಯನ್ವಯ ಕನಿಷ್ಠ ವೇತನ ನೀಡುವ ಹೊಸ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಪರಿಣಾಮ ಹೆಚ್ಚುಕಡಿಮೆ ನಾಲ್ಕು ಕೋಟಿ ಕಾರ್ಮಿಕರು ಲಾಭ ಪಡೆದುಕೊಳ್ಳಲಿದ್ದಾರೆ. ಕನಿಷ್ಠ ವೇತನ ಅಧಿನಿಯಮದ ಪ್ರಕಾರ ಮಸೂದೆಯಲ್ಲಿ ಪ್ರತಿ ತಿಂಗಳು ಕನಿಷ್ಠ 18,000 ರೂ. ನೀಡಬೇಕೆನ್ನುವ ಪ್ರಸ್ತಾವನೆಯನ್ನು ಅಂಗೀಕರಿಸಿ ಒಪ್ಪಿಗೆ ನೀಡಿದೆ. ಹಾಲಿ ಮುಂಗಾರು ಅಧಿವೇಶನದಲ್ಲೇ ಅದನ್ನು ಮಂಡಿಸಲಾಗುವ ಸಾಧ್ಯತೆಗಳಿವೆ.

Advertisement

ಕನಿಷ್ಠ ವೇತನ ಕಾಯ್ದೆ 1948, ವೇತನ ಪಾವತಿ ಕಾಯ್ದೆ 1936, ಬೋನಸ್‌ ಪಾವತಿ ಕಾಯ್ದೆ 1965, ಸಮಾನ ಸಂಭಾವನೆ ಕಾಯ್ದೆ 1976ನ್ನು ಅದರಲ್ಲಿ ಸಮ್ಮಿಳನಗೊಳಿಸಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ರಾಜ್ಯಸಭೆಗೆ ಲಿಖೀತ ರೂಪದಲ್ಲಿ ನೀಡಿದ ಉತ್ತರದಲ್ಲಿ ಕಾರ್ಮಿಕರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಮಿಕ ನಿಯಮಾವಳಿಗಳನ್ನು ನಾಲ್ಕು ಅಥವಾ ಐದು ಗುಂಪುಗಳನ್ನಾಗಿ ವರ್ಗೀಕರಿಸಲಾಗುವುದು ಎಂದು ಹೇಳಿದ್ದರು.

ಇದೇ ವೇಳೆ ಚಿನ್ನದ ಮೇಲಿನ ವಾರ್ಷಿಕ ಹೂಡಿಕೆಯ ಮಿತಿಯನ್ನೂ (ಎಸ್‌ಜಿಬಿಎಸ್‌) ಹೆಚ್ಚಿಸುವ ಮಸೂದೆಯನ್ನೂ ಅಂಗೀಕರಿಸಿದೆ. ತಲಾ 500 ಗ್ರಾಂ ಮಿತಿಯನ್ನು 4 ಕಿಲೋ ಗ್ರಾಂಗೆ ಏರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next