ಉಡುಪಿ: ಬಜೆ ಅಣೆಕಟ್ಟಿನಿಂದ ಸ್ವರ್ಣಾ ನದಿ ಪಾತ್ರದಲ್ಲಿನ ಮಾಣಾç ಸೇತುವೆಯ ವರೆಗೆ ಹೂಳು ತೆಗೆಯಲು 2.90 ಕೋ.ರೂ. ಟೆಂಡರ್‌ಗೆ ಅನುಮೋದನೆ ಸಿಕ್ಕಿದೆ. ಮುಂದಿನ ಏಳು ದಿನಗಳೊಳಗೆ ಕಾಮಗಾರಿ ಆರಂಭಿಸುವ ಚಿಂತನೆಯಿದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗುತ್ತಿಗೆದಾರರು ನದಿಯಿಂದ ತೆಗೆದ ಹೂಳನ್ನು ತಮ್ಮ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಮರಳನ್ನು ಜಿಲ್ಲಾಡಳಿತದಿಂದ ರಚಿಸಲಾದ ಏಳು ಮಂದಿ ಸದಸ್ಯರ ಸಮಿತಿಗೆ ಹಸ್ತಾಂತರಿಸಲಾಗುತ್ತದೆ.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ನಗರಸಭೆಯ ನೀರು ಆಯ್ದ ಕೆಲವು ವಾರ್ಡ್‌ಗಳಿಗೆ ನೀಡಲಾಗುತ್ತಿದೆ. ಪುತ್ತಿಗೆ ಸೇತುವೆಯ ಕೆಳಗೆ ಎರಡು ಪಂಪ್‌ಗ್ಳ ಮೂಲಕ ಹಾಗೂ ಪುತ್ತಿಗೆ ಮಠದ ಬಳಿ 1 ಪಂಪ್‌ಗ್ಳ ಮೂಲಕ ಸೋಮವಾರ ನೀರೆತ್ತಲಾಯಿತು. ಮಂಗಳವಾರ 6 ಪಂಪ್‌ಗ್ಳ ಮೂಲಕ ಪುತ್ತಿಗೆ ಸೇತುವೆ ಕೆಳಭಾಗದಲ್ಲಿ ಪಂಪಿಂಗ್ ಮೂಲಕ ನೀರೆತ್ತಲಾಗುತ್ತದೆ.
ಮಂಗಳೂರು ನಗರ: ನಾಲ್ಕು ದಿನ ನೀರಿಲ್ಲ
ಮಂಗಳೂರು: ರೇಷನಿಂಗ್ ನಿಯಮದಂತೆ ಮೇ 28 ಬೆಳಗ್ಗೆ 6ರಿಂದ ಜೂ.1 ಬೆಳಗ್ಗೆ 6ರ ವರೆಗೆ 96 ಗಂಟೆಗಳ ಕಾಲ ನೀರು ಸ್ಥಗಿತಗೊಳ್ಳಲಿದೆ.
ಮೇ 24ರಿಂದ ಮೇ 28ರವರೆಗೆ ನಗರದ ವಿವಿಧ ಭಾಗಗಳಿಗೆ ನೀರು ಸರಬರಾಜು ಮಾಡಲಾಗಿತ್ತು.
ಸದ್ಯ ಮಂಗಳೂರಿನಲ್ಲಿ ನೀರು ಸರಬರಾಜು ಆಗುತ್ತಿರುವ ಪರಿಣಾಮ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಸೋಮವಾರ ಸಂಜೆ 3 ಮೀ. ಗೆ ಇಳಿದಿತ್ತು. ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಲೇ ಇದೆ.
ಪ್ರಸ್ತುತ ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೇ ದಿನದಲ್ಲಿ ಉತ್ತಮ ಮಳೆಯ ನಿರೀಕ್ಷೆ ಇರುವ ಕಾರಣದಿಂದ ನೀರು ರೇಶನಿಂಗ್ ಯಾವುದೇ ಸಂದರ್ಭ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ.