Advertisement
ಓದುಗರ ಬೇಡಿಕೆ ಹಾಗೂ ಸಾರ್ವಜನಿಕ ಸ್ಪರ್ಧಾತ್ಮಕ ಓದುಗರಿಂದ ಪುಸ್ತಕಗಳ ಬೇಡಿಕೆ ಪಟ್ಟಿ ಪಡೆದು ಓದುಗರಿಗೆ ಅನುಕೂಲವಾಗುವಂತೆ ಪುಸ್ತಕಗಳನ್ನು ಒದಗಿಸಬೇಕು. ಶಾಖಾ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರ, ಶಾಖಾ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಸರಬರಾಜು ಮಾಡಬೇಕು. ಗ್ರಂಥಾಲಯದಲ್ಲಿ ಓದುಗರಿಗೆ ಪುಸ್ತಕ ಸುಲಭವಾಗಿ ದೊರಕುವಂತೆ ವ್ಯವಸ್ಥಿತವಾಗಿ ಕ್ರಮವಹಿಸಿ, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ 2022ರ ಮಾರ್ಚ್ 20ರ ಅಂತ್ಯಕ್ಕೆ 12,71,838 ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ ಚಿತ್ರದುರ್ಗ ಆರನೇ ಸ್ಥಾನದಲ್ಲಿದೆ. 2022 ಮಾರ್ಚ್ 20ರ ಅಂತ್ಯಕ್ಕೆ ಇಲಾಖೆಯಲ್ಲಿ 2,23 ಕೋಟಿ ಡಿಜಿಟಲ್ ಸದಸ್ಯತ್ವ ಹೊಂದಿದ್ದಾರೆ. 2022-23ನೇ ಸಾಲಿನ ಜಿಲ್ಲಾ ಗ್ರಂಥಾಲಯ ಪ್ರಾ ಧಿಕಾರದಲ್ಲಿ ಒಟ್ಟು ರೂ.98 ಲಕ್ಷ ಅಂದಾಜು ಆದಾಯದ ನಿರೀಕ್ಷೆ ಇದೆ. ಇದರಲ್ಲಿ ಅಂದಾಜು 77.90 ಲಕ್ಷ ವ್ಯಯವಾಗುವ ನಿರೀಕ್ಷೆ ಇದೆ. ರೂ.2.10ಲಕ್ಷ
ಉಳಿತಾಯವಾಗಲಿದೆ ಎಂದರು.
Related Articles
Advertisement
ಪ್ರಾಧಿಕಾರಕ್ಕೆ ಡಾ| ಲೋಕೇಶ ಅಗಸನಕಟ್ಟೆ ಉಪಾಧ್ಯಕ್ಷ ಜಿಲ್ಲಾ ಗ್ರಂಥಾಲಯ ಪ್ರಾ ಧಿಕಾರ ಸಮಿತಿಯ ಉಪಾಧ್ಯಕ್ಷರಾಗಿ ಕವಿ, ವಿಮರ್ಶಕ, ಕಥೆಗಾರಡಾ| ಲೋಕೇಶ ಅಗಸನಕಟ್ಟೆ ಅವರನ್ನು ಸಭೆಯು ಸರ್ವಾನುಮತದಿಂದ ನೇಮಕ ಮಾಡಿತು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ನೂತನ ಉಪಾಧ್ಯಕ್ಷರಿಗೆ ಪುಸ್ತಕ ನೀಡುವ ಶುಭ ಕೋರಿದರು.