ಶಿವಮೊಗ್ಗ: ಜಿಲ್ಲೆಯ ಅಭಿವೃದ್ದಿಗೆ ಒತ್ತು ನೀಡುತ್ತಿದ್ದು, ಹೊಸ ಯೋಜನೆಗಳಿಗೆ ಪ್ರಸ್ತಾವ ಸಲ್ಲಿಸಿದ್ದೇನೆ. ಕುವೆಂಪು ವಿವಿಯ ಕ್ಯಾಂಪಸ್ ನಲ್ಲಿ ಡಿಅರ್ಡಿಓ ರಿಸರ್ಚ್ ಸೆಂಟರ್ ಗೆ ಮನವಿ ಮಾಡಿದ್ದೆವು. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪು ವಿವಿಯ ಕ್ಯಾಂಪಸ್ ನಲ್ಲಿ ಕೇಂದ್ರ ತಂಡ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ. ಸೇನೆಗೆ ಸಂಬಂಧಿತ ಹಾಗೂ ಬಯೋ ಮೆಡಿಕಲ್ ಸಂಬಂಧಿತ ಸಂಶೋಧನೆ ಗೆ ಅನುಕೂಲವಾಗಲಿದೆ ಎಂದರು.
ಇದರ ಜತೆಗೆ ಕೇಂದ್ರ ಸರ್ಕಾರದ ವಿಜ್ಞಾನ ಕೇಂದ್ರ ಜಿಲ್ಲೆಯಲ್ಲಿ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸುಮಾರು 17 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಮಂಜೂರಾಗಲಿದೆ. ಇದಕ್ಕಾಗಿ ರಾಗಿಗುಡ್ಡದಲ್ಲಿ 7 ಎಕರೆ ಜಾಗವನ್ನು ಸಹ ನೀಡಲಾಗಿದೆ ಎಂದರು.
ಇದನ್ನೂ ಓದಿ:ರೈತ ಹೋರಾಟದಲ್ಲಿ ಕಾಂಗ್ರೆಸ್ ನಿಂದ ಕೀಳು ಮಟ್ಟದ ರಾಜಕಾರಣ: ಕಟೀಲ್ ವಾಗ್ದಾಳಿ
ಶಿವಮೊಗ್ಗದಲ್ಲಿ ಎರಡು ವಾಜಪೇಯಿ ಶಾಲೆ ತೆರೆಯಲು ನಿರ್ಧಾರ ಮಾಡಲಾಗಿದೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿದ್ದು. ಇದರ ಜೊತೆಗೆ ಜಿಲ್ಲೆಯಲ್ಲಿ ಏಕಲವ್ಯ ಮಾದರಿ ಶಾಲೆ ಸ್ಥಾಪನೆಗೆ ಗುರುತಿಸಲಾಗಿದೆ. ಎಸ್ಟಿ ಜನಾಂಗ ಹೆಚ್ಚಿರುವ ಭಾಗದಲ್ಲಿ ಈ ಶಾಲೆಗಳನ್ನು ಸ್ಥಾಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕಿನಲ್ಲಿ 10 ಎಕರೆ ಜಾಗವನ್ನು ಗುರುತಿಸಲಾಗಿದೆ ಎಂದರು.
ಶಿವಮೊಗ್ಗ- ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್ ಮಾಡಲು ಯೋಚಿಸಲಾಗಿದೆ. ಈ ಸಂಬಂಧ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಜೊತೆ ಮಾತನಾಡಿದ್ದೇನೆ. ಮುಂಬೈ- ಬೆಂಗಳೂರು ಕಾರಿಡಾರ್ ಜೊತೆ ಶಿವಮೊಗ್ಗವನ್ನು ಸೇರಿಸಲು ಸಹ ಪ್ರಸ್ತಾವನೆ ಇಟ್ಟಿದ್ದೆವೆ. ಇದಕ್ಕೆ ಜಿಲ್ಲೆ 2 ರಿಂದ 4 ಸಾವಿರ ಎಕರೆಗೆ ಜಾಗ ಶೋಧಿಸಲಾಗುತ್ತಿದೆ. ಈ ಕಾರಿಡಾರ್ ಅಂತಿಮಗೊಂಡರೆ, ಕೈಗಾರಿಕಾ ಹಬ್ ಅಗಿ ಶಿವಮೊಗ್ಗ ಬದಲಾಗಲಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ