Advertisement

ನವಯುಗ ವಿರುದ್ಧ ವಿಧಾನ ಮಂಡಲದಲ್ಲಿ ನಿಲುವಳಿ: ಐವನ್‌

01:00 AM Feb 06, 2019 | Harsha Rao |

ಪಡುಬಿದ್ರಿ: ನವಯುಗ ಟೋಲ್‌ ಅಕ್ರಮ ಹಾಗೂ ಜನತೆಯ ಹಕ್ಕಿನ ಪ್ರತಿಪಾದನೆಯ ಹಿನ್ನೆಲೆಯಲ್ಲಿ ಈ ಬಾರಿಯ ರಾಜ್ಯ ಬಜೆಟ್‌ ಅಧಿವೇಶನದಲ್ಲಿ ಕರಾವಳಿ ಶಾಸಕರ ನೆರವಿನೊಂದಿಗೆ ಕಂಪೆನಿ ವಿರುದ್ಧ ನಿಲುವಳಿ ಸೂಚನೆ ಮಂಡಿಸುವುದಾಗಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು. 

Advertisement

ಅವರು ಮಂಗಳವಾರ ಹೆಜಮಾಡಿ ನವಯುಗ ಟೋಲ್‌ ಪ್ಲಾಜಾ ಬಳಿ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ವತಿಯಿಂದ ನಡೆದ ಟೋಲ್‌ ವಿರುದ್ಧ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.  

ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಜಿಲ್ಲೆಯ ಜನರು ತೀವ್ರಗಾಮಿಗಳಾಗುವುದಕ್ಕೆ ನವಯುಗ ಕಂಪೆನಿ ಅವಕಾಶ ನೀಡಬಾರದು. ಮೂಲ್ಕಿಗೆ ಸುಂಕ ವಿನಾಯಿತಿ ನೀಡಬೇಕು ಎಂದರು.  

ಮಾಜಿ ಶಾಸಕ ಅಭಯಚಂದ್ರ ಜೈನ್‌, ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮೂಲ್ಕಿ ಚರ್ಚ್‌ ಧರ್ಮಗುರುಗಳಾದ ರೆ| ಫಾ| ಸಿಲ್ವೆಸ್ಟರ್‌ ಡಿ’ಕೋಸ್ಟ, ದ.ಕ., ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ರಾಷ್ಟ್ರೀಯ ಹೆದ್ದಾರಿ ಹೋರಾಟಗಾರರ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ  ಬೆಳಪು, ಮೂಲ್ಕಿಯ ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಮುಹಮ್ಮದ್‌ ದಾರಿಮಿ, ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ವೇ| ಮೂ| ಶ್ರೀಪತಿ ಉಪಾಧ್ಯಾಯ, ಮೂಲ್ಕಿ ಸಿಎಸ್‌ಐ ಚರ್ಚ್‌ನ ಸಭಾಪಾಲಕ ರೆ| ಎಡ್ವರ್ಡ್‌ ಕರ್ಕಡ, ಪಡುಬಿದ್ರಿ ನಾಗರಿಕ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಮೂಲ್ಕಿ ನ. ಪಂ. ಅಧ್ಯಕ್ಷ ಸುನಿಲ್‌ ಆಳ್ವ , ಶೇಖರ್‌ ಹೆಜಮಾಡಿ ಮಾತನಾಡಿದರು. 

ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ಮಂಗಳೂರು ಆರ್‌ಐ ದಿಲೀಪ್‌ ರೊಹಿಡೇಕರ್‌, ನವಯುಗ ಟೋಲ್‌ ಪ್ರಬಂಧಕ ಶಿವಪ್ರಸಾದ್‌ ರೈ ಅವರಿಗೆ ಸಮಿತಿಯ ವತಿಯಿಂದ ಮನವಿ ನೀಡಲಾಯಿತು.

Advertisement

ಈ ಸಂದರ್ಭದಲ್ಲಿ ಮೂಲ್ಕಿಯ ಜೀವನ್‌ ಶೆಟ್ಟಿ, ಮಧು ಆಚಾರ್ಯ, ಇಕ್ಬಾಲ್‌ ಅಹಮ್ಮದ್‌, ಧನಂಜಯ ಮಟ್ಟು, ಶಾಲೆಟ್‌ ಪಿಂಟೋ, ವಸಂತ್‌ ಬೆರ್ನಾರ್ಡ್‌ ಹಳೆಯಂಗಡಿ, ಪುತ್ತು ಬಾವು, ಗುಲಾಂ ಮೊಹಮ್ಮದ್‌ ಹೆಜಮಾಡಿ, ಜೋಯಲ್‌ ಡಿ’ಸೋಜಾ ಮತ್ತಿತರರಿದ್ದರು. 

ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷ ಹರೀಶ್‌ ಪುತ್ರನ್‌ ಪ್ರಸ್ತಾವಿಸಿದರು. ನ್ಯಾಯವಾದಿ ಭಾಸ್ಕರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು 300ಕ್ಕೂ ಮಿಕ್ಕಿದ ಪ್ರತಿಭಟನಕಾರರು ಮೂಲ್ಕಿಯ ಬಸ್‌ ನಿಲ್ದಾಣದ ಬಳಿ ಸಭೆ ನಡೆಸಿ ಪಾದಯಾತ್ರೆಯಲ್ಲಿ ಟೋಲ್‌ ಬಳಿ ಆಗಮಿಸಿದರು. 

ಕಾರ್ಕಳ ಸಹಾಯಕ ಪೊಲೀಸ್‌ ಅಧೀಕ್ಷಕ ಕೃಷ್ಣಕಾಂತ್‌, ಕಾಪು ಸಿಪಿಐ ಮಹೇಶ್‌ ಪ್ರಸಾದ್‌ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.ಜಿಲ್ಲಾ ಮೀಸಲು ಪಡೆ ಪೊಲೀಸ್‌ ತುಕಡಿ, ಅಗ್ನಿಶಾಮಕ ದಳದ ಸಿಬಂದಿ, ಪಡುಬಿದ್ರಿ ಪೊಲೀಸ್‌ ಠಾಣಾ ಸಿಬಂದಿ ಇದ್ದರು.  

ಜಯ ಲಭಿಸುವ ವರೆಗೆ ಹೋರಾಟ 
ಟೋಲ್‌ ಸುತ್ತಲಿನ 7ಕಿಮೀ ವ್ಯಾಪ್ತಿಯಲ್ಲಿ ಸಂಪೂರ್ಣ ಸುಂಕ ವಿನಾಯಿತಿ ನೀಡಬೇಕು. ಮೂಲ್ಕಿಗೆ 10 ಕಿ.ಮೀ. ದೂರದಲ್ಲಿರುವ ಎನ್‌ಐಟಿಕೆ ಬಳಿಯ ಟೋಲ್‌ ರದ್ದಿಗೆ ರಾಜ್ಯ ಸರಕಾರವು ಕೇಂದ್ರಕ್ಕೆ ಪ್ರಸ್ತಾವನೆ ರವಾನಿಸಿದೆ. ಆದರೆ ಇದಕ್ಕೆ ಕೇಂದ್ರ ಪ್ರತಿಕ್ರಿಯಿಸಿಲ್ಲ. ಜನತೆಗೆ ಜಯ ಲಭಿಸುವ ವರೆಗೆ ಹೋರಾಟ ನಿಲ್ಲಿಸದಿರೋಣ.
-ಐವನ್‌ ಡಿ’ಸೋಜಾ, ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next